Ultimate magazine theme for WordPress.

ಮನೆಕಟ್ಟಲು ಯಾವ ಇಟ್ಟಿಗೆಗಳು ಉತ್ತಮ ತಿಳಿಯಿರಿ

0 34

ಈ ಲೇಖನದಲ್ಲಿ ಮನೆ, ಕಟ್ಟಡಗಳನ್ನು ಕಟ್ಟೋಕೆ ಯಾವ ರೀತಿಯ ಇಟ್ಟಿಗೆಗಳು ಉತ್ತಮ, ಎಷ್ಟು ಇಟ್ಟಿಗೆಗಳು ಅಥವಾ ಕಲ್ಲುಗಳು ಬೇಕು ಅದರ ಮೊತ್ತ ಎಷ್ಟು ಆಗುತ್ತದೆ ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ.

ಮೊದಲಿಗೆ ಸಿಮೆಂಟ್ ಸಾಲಿಡ್ ಬ್ರಿಕ್ಸ್ ಇದನ್ನು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದು 16 ಇಂಚು ಉದ್ದ, 8 ಇಂಚು ಎತ್ತರ ಹಾಗೂ ಅಗಲಗಳಲ್ಲಿ 4, 6, 8 ಇಂಚಿನಷ್ಟು ಅಗಲದ ಬ್ರಿಕ್ಸ್ ಸಿಗತ್ತೆ. ಕಟ್ಟಡದ ಅಥವಾ ಮನೆಯ ಒಳಗೆ 4 ಇಂಚಿನ ಬ್ರಿಕ್ಸ್ ಗಳನ್ನು ಬಳಕೆ ಮಾಡುತ್ತಾರೆ. ಹೊರಗಡೆ 6 ಅಥವಾ 8 ಇಂಚಿನ ಬ್ರಿಕ್ಸ್ ಗಳ ಬಳಕೆ ಮಾಡಲಾಗುತ್ತದೆ. ಇದರ ಬೆಲೆ ಈ ರೀತಿಯಾಗಿ ಇರತ್ತೆ 4 ಇಂಚಿನ ಬ್ರಿಕ್ಸ್ ಒಂದಕ್ಕೆ 23 ರೂಪಾಯಿ, 6 ಇಂಚಿನ ಬ್ರಿಕ್ಸ್ ಒಂದಕ್ಕೆ 31 ರೂಪಾಯಿ ಹಾಗೂ 8 ಇಂಚಿನ ಬ್ರಿಕ್ಸ್ ಒಂದಕ್ಕೆ 45 ರೂಪಾಯಿ. 30 – 40 ಸೈಟ್ ನಲ್ಲಿ ಒಂದು ಸಾವಿರ sqft ಅಳತೆಯಲ್ಲಿ, ಈ ಅಳತೆಗೆ 2bhk ಮನೆಯನ್ನ ಕಟ್ಟಬೇಕು ಅಂದರೆ ಇದಕ್ಕೆ ಸಾಮಾನ್ಯವಾಗಿ 3ಸಾವಿರ ಇಟ್ಟಿಗೆಗಳು ಬೇಕಾಗತ್ತೆ. ಇವುಗಳ ಬೆಲೆ ಒಟ್ಟೂ 3000 ಇಟ್ಟಿಗೆಗಳಿಗೆ 6 ಇಂಚಿನ ಬ್ರಿಕ್ಸ್ ಗಳನ್ನೇ ತೆಗೆದುಕೊಂಡರೂ ಸಹ 93 ಸಾವಿರದಿಂದ 1 ಲಕ್ಷದವರೆಗೆ ಖರ್ಚು ಬೀಳುತ್ತದೆ.

ಎರಡನೆಯದಾಗಿ AAC ಬ್ರಿಕ್ಸ್ ಗಳು ಇವುಗಳು 8 ಇಂಚು ಎತ್ತರ, 24 ಇಂಚು ಉದ್ದ ಹಾಗೂ ಬೇರೆ ಬೇರೆ ಅಳತೆಯ ಅಗಲ 4, 6, 8 ಇಂಚುಗಳಲ್ಲಿ ಲಭ್ಯ ಇರುತ್ತದೆ. ಇದರ ಬೆಲೆ 4 ಇಂಚಿನ ಬ್ರಿಕ್ಸ್ ಗೆ 40 ರೂಪಾಯಿ , 6 ಇಂಚಿನ ಬ್ರಿಕ್ಸ್ ಒಂದಕ್ಕೆ 60 ರೂಪಾಯಿ ಹಾಗೂ 8 ಇಂಚಿನ ಒಂದು ಬ್ರಿಕ್ಸ್ ಗೆ 80 ರೂಪಾಯಿ ಇರತ್ತೆ. AAC ಬ್ರಿಕ್ಸ್ ಗಳು ತನ್ನದೇ ಆದಂತಹ ಗುಣಗಳನ್ನು ಹೊಂದಿರುತ್ತವೆ ಹಾಗಾಗಿ ಇವುಗಳನ್ನ ಗ್ರೌಂಡ್ ಫ್ಲೋರ್ ಒಂದಕ್ಕೆ ಬಿಟ್ಟು ಬೇರೆ ಎಲ್ಲಿ ಬೇಕಿದ್ದರೂ ಬಳಸಬಹುದು. ಆದರೆ ಇದರ ಒಂದು ಅವಗುಣ ಎಂದರೆ ಈ AAC ಬ್ರಿಕ್ಸ್ ಗಳಿಂದ ಬಹು ಬೇಗ ಶಬ್ಧ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೇಳಿಸತ್ತೆ. ಆದರೆ ಇದರ ಒಂದು ಗುಣ ಏನಪ್ಪಾ ಅಂದರೆ ಪ್ಲಾಸ್ಟರ್ ಮಾಡದೆ ಹಾಗೆ ಪೇಂಟ್ ಮಾಡಿಟ್ಟರೂ ಸಹ ಇದರಿಂದ ಸ್ವಲ್ಪವೂ ಕೂಡಾ ನೀರು ಒಳಗೆ ಬರಲ್ಲ. 30 – 40 ಸೈಟ್ ನಲ್ಲಿ ಕಟ್ಟಬೇಕು ಅಂದರೆ ಇದಕ್ಕೆ ಬೇಕಾಗುವ AAC ಬ್ರಿಕ್ಸ್ ಗಳು 1900 ಬ್ರಿಕ್ಸ್ ಗಳು ಬೇಕಾಗುತ್ತೆ. 6 ಇಂಚಿನ ಬ್ರಿಕ್ಸ್ ಗಳಿಗೆ 1,14,000 ರೂಪಾಯಿ ಆಗತ್ತೆ ಹಾಗೂ 8 ಇಂಚಿನ ಬ್ರಿಕ್ಸ್ ಗಳಿಗೆ 1,52,000 ರೂಪಾಯಿ ಖರ್ಚು ಬೀಳತ್ತೆ.

ಮೂರನೆಯದಾಗಿ ಕೆಂಪು ಮಣ್ಣಿನ ಇಟ್ಟಿಗೆಗಳು ಇದನ್ನು ಸಹ ಸಾಮಾನ್ಯವಾಗಿ ಬಹಳಷ್ಟು ಜನರು ಬಳಕೆ ಮಾಡುತ್ತಾರೆ. ಆದರೆ ಇದರ ಉಪಯೋಗದಿಂದ ಪರಿಸರದ ಮೇಲೆ ಹಾನಿ ಉಂಟಾಗುವುದರಿಂದ ಈ ಇಟ್ಟಿಗೆಗಳನ್ನು ಕಡಿಮೆ ಬಳಕೆ ಮಾಡುವುದು ಉತ್ತಮ. ಇವುಗಳ ತಯಾರಿಕೆಗಾಗಿ ಬೇರೆ ಬೇರೆ ಕಡೆಗಳಲ್ಲಿ ಮಣ್ಣುಗಳನ್ನ ಅಗೆಯಲಾಗುತ್ತೆ ಹಾಗಾಗಿ ಇವುಗಳ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಇದು 9 ಇಂಚು ಉದ್ದ , 4 ಇಂಚು ಅಗಲ ಹಾಗೂ 3 ಇಂಚು ಎತ್ತರವನ್ನು ಹೊಂದಿರುತ್ತದೆ. ಇದರ ಬೆಲೆ ಕೂಡ ಕಡಿಮೆ ಇರುತ್ತದೆ. ಕಡಿಮೆ ಬೆಲೆಯ ಇಟ್ಟಿಗೆಗಳು ಬೇಕಿದ್ದಲ್ಲಿ 5 ರೂಪಾಯಿ , ಮಧ್ಯಮ ಗುಣಮಟ್ಟದ ಇಟ್ಟಿಗೆಗಳು ಬೇಕಿದ್ದಲ್ಲಿ 6 ರೂಪಾಯಿ ಹಾಗೂ ಉತ್ತಮ ಗುಣಮಟ್ಟದ ಇಟ್ಟಿಗೆಗಳು ಬೇಕಿದ್ದರೆ 7, 8 ರೂಪಾಯಿಯಲ್ಲಿ ದೊರೆಯುತ್ತದೆ.

ಇದಕ್ಕಿಂತಲೂ ಫ್ಲೈ ಆಶ್ ಬ್ರಿಕ್ಸ್ ಬಹಳ ಉತ್ತಮ. ಇವು ಸಹ ಕೆಂಪು ಇಟ್ಟಿಗೆ ಅಳತೆಯಲ್ಲೇ ಸಿಗುತ್ತವೆ. ಇವುಗಳ ಬೆಲೆ 3 ರೂಪಾಯಿ, 4 ರೂಪಾಯಿ ಹಾಗೂ 5 ರೂಪಾಯಿ ಇರತ್ತೆ. ಮೇಲೆ ಹೇಳಿದ ಎಲ್ಲಾ ಬ್ರಿಕ್ಸ್ ಗಳಿಗೆ ಹೋಲಿಕೆ ಮಾಡಿದಾಗ ಈ ಫ್ಲೈ ಆಶ್ ಬ್ರಿಕ್ಸ್ ಬಹಳ ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟ ಹೊಂದಿರುವ ಬ್ರಿಕ್ಸ್ ಗಳಾಗಿವೆ. ಈ ಇಟ್ಟಿಗೆಗಳು ಉತ್ತಮ ದೃಢತೆಯನ್ನುನೀಡುತ್ತವೆ. 30 – 40 ಸೈಟ್ ನಲ್ಲಿ ಮನೆ ಕಟ್ಟಿಸೋಕೆ ಬೇಕಾಗಬಹುದಾದ ಒಟ್ಟೂ ಬ್ರಿಕ್ಸ್ಗಳು ಹಾಗೂ ಅವುಗಳ ಒಟ್ಟೂ ಮೊತ್ತ ನೋಡುವುದಾದರೆ 6 ಇಂಚಿನ ಉದ್ದ ಹಾಗೂ ಅಗಲ ಹಾಗೂ 14 ಇಂಚಿನ ಬ್ರಿಕ್ಸ್ ಗಳೂ ಸಹ ಸಿಗುತ್ತವೆ. ಇದರ ಬೆಲೆ 35 ರೂಪಾಯಿ. 1000 sqft ಮನೆ ಕಟ್ಟೋಕೆ 12 ಸಾವಿರದಿಂದ 15 ಸಾವಿರ ಇಟ್ಟಿಗೆಗಳು ಬೇಕಾಗುತ್ತವೆ. ಇವುಗಳ ಬೆಲೆ 60 ಸಾವಿರದಿಂದ 75 ಸಾವಿರದ ಒಳಗೆ ಖರ್ಚು ಬೀಳಬಹುದು. ಇದರಲ್ಲೇ ದೊಡ್ಡ ಇಟ್ಟಿಗೆಗಳು ಅಂದರೆ 14 ಇಂಚಿನ ಇಟ್ಟಿಗೆಗಳನ್ನು ಬಳಸಿದರೆ 3000 ಇಟ್ಟಿಗೆಗಳು ಬೇಕಾಗುತ್ತವೆ ಹಾಗೂ ಇವುಗಳ ಬೆಲೆ 1 ಲಕ್ಷ ಆಗುತ್ತದೆ. ಸಾಮಾನ್ಯವಾಗಿ ಈ ಫ್ಲೈ ಆಶ್ ಬ್ರಿಕ್ಸ್ ಗಳು ಜಾಸ್ತಿ ಬಾಳಿಕೆ ಬರುತ್ತವೆ ಹಾಗಾಗಿ ಇವನ್ನ ನಂಬರ್ ಒನ್ ಬ್ರಿಕ್ಸ್ ಅಂತಲೇ ಹೇಳಬಹುದು

Leave A Reply

Your email address will not be published.