ಗೋಧಿಯನ್ನು ನಿಜಕ್ಕೂ ಆರೋಗ್ಯಕರ ಎಂದು ಭಾವಿಸಲಾಗಿದೆ. ನಾರಿನ ಸಮೃದ್ಧ ಉತ್ಪನ್ನ ಆಗಿರುವ ಇದನ್ನು ಬೇಕರಿಗಳಲ್ಲಿ ಬ್ರೆಡ್ ನಂತಹ ಆಹಾರ ಉತ್ಪನ್ನಗಳಲ್ಲಿ ಮತ್ತು ಮನೆಯಲ್ಲಿ ಚಪಾತಿ ಮಾಡಲು ಈ ರೀತಿಯಾಗಿ ಗೋಧಿಯನ್ನು ಬಳಸಲಾಗುತ್ತದೆ. ಗೋಧಿ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ವಿವಿಧ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಆದರೆ ಗೋಧಿ ಕ್ಲುಟೇನ್ ಎಂಬ ಅಂಶವನ್ನು ಹೊಂದಿರುತ್ತದೆ. ಅದು ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ೧೦೦ ಗ್ರಾಂ ಗೋಧಿಯಲ್ಲಿ ೩೪೦ ಕ್ಯಾಲೋರಿಗಳು, ೧೦. ೭ ಗ್ರಾಂ ನಾರು, ೭೭ ಗ್ರಾಂ ಕಾರ್ಬೋ ಹೈಡ್ರೇಟ್ ಗಳು ೧೩.೩ ಗ್ರಾಂ ಪ್ರೊಟೀನ್ ಗಳು, ೦. ೪ ಗ್ರಾಂ ಸಕ್ಕರೆ, ೨.೫ ಗ್ರಾಂ ಕೊಬ್ಬು, ೦.೦೭ ಗ್ರಾಂ ಒಮೆಗಾ ತ್ರೀ, ಆಂಟಿ ಆಸಿಡ್ ಗಳು ಮತ್ತು ೧೧% ರಷ್ಟು ನೀರನ್ನು ಒಳಗೊಂಡಿರುತ್ತವೆ. ಇತ್ತೀಚಿನ ಕೆಲವು ರೀಸರ್ಚ್ ಗಳು ಗೋಧಿ ೪ ವಿಧವಾಗಿ ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಲೇಖನದಲ್ಲಿ ನಾವು ಅತೀ ಹೆಚ್ಚು ಗೋಧಿ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಅದ್ದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

ಗೋಧಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಸಂಸ್ಕರಿತ ಧಾನ್ಯಗಳಲ್ಲಿ ತಯಾರಾದ ಬಿಳಿಯ ಬ್ರೆಡ್ ಅಂತಹ ಉತ್ಪನ್ನಗಳು ನಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಬಿಳಿಯ ಬ್ರೆಡ್ ಬೇಗ ಜೀರ್ಣ ಆಗುತ್ತೆ ಜೊತೆಗೆ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚು ಕೂಡ ಮಾಡುತ್ತದೆ. ಗೋಧಿ ಹಿಟ್ಟಿನಿಂದ ತಯಾರಾದ ಉತ್ಪನ್ನಗಳು ನಾರಿನ ಅಂಶಗಳನ್ನು ಹೊಂದಿರುತ್ತವೆ. ನಾರು ಹೆಚ್ಚಾದಷ್ಟೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚು ಮಾಡುತ್ತೆ. ಆದರೆ ಧಾನ್ಯಗಳಲ್ಲಿ ಸೂಕ್ಷ್ಮ ಕಣಗಳು ಆಗಿ ಪರಿವರ್ತನೆ ಗಿಂದಾಗ ಅವು ಸಹ ಬೇಗನೆ ಜೀರ್ಣ ಆಗುತ್ತದೆ. ಅವೂ ಸಹ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾದರೆ ಅದು ಮಧುಮೇಹ, ಬೊಜ್ಜು, ಹೃದಯ ಸಂಬಂಧಿತ ಕಾಯಿಲೆಗಳು ಇವುಗಳಿಗೆ ಕಾರಣ ಆಗುತ್ತದೆ. ಗ್ಲುಟೇನ್ ಸಂಬಂಧಿತ ಕಾಯಿಲೆಗೆ ಗೋಧಿ ಕಾರಣ ಆಗುತ್ತೆ. ಈ ಅಂಶ ಗೋಧಿ ಸೇರಿದಂತೆ ವಿವಿಧ ಧಾನ್ಯಗಳಲ್ಲಿ ಇರುವ ಪ್ರೊಟೀನ್ ಅಂಶ ಆಗಿದೆ. ಈ ಪ್ರೊಟೀನ್ ಗೋಧಿಯ ಸ್ವರೂಪ ನೀಡುತ್ತೆ.

ಗೋಧಿ ಶರೀರದಿಂದ ಖನಿಜಾಂಶ ಹೇರುವುದನ್ನು ತಗ್ಗಿಸುತ್ತದೆ. ಸಸ್ಯ ಬೀಜಗಳು ಪೈಟಿಕ್ ಆಸಿಡ್ ಹೊಂದಿರುತ್ತವೆ. ಇದು ಶರೀರದಿಂದ ಪ್ರಮುಖ ಖನಿಜಾಂಶ ಗಳನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಗೋಧಿಯಲ್ಲಿರುವ ನಾರು ಶರೀರದಲ್ಲಿ ಇರುವ ವಿಟಮಿನ್ ಡಿ ಅನ್ನು ದಹಿಸುವ ಮೂಲಕ ಅದರ ಕೊರತೆಗೆ ದಾರಿ ಆಗುತ್ತೆ ಎಂದು ಕೆಲವು ರೀಸರ್ಚ್ ಗಳು ಹೇಳುತ್ತೆ. ಸಂಸ್ಕರಿಸಿದ ಗೋಧಿಗಿಂತಲು ಇಡೀ ಗೋಧಿ ಹೆಚ್ಚು ಪೈಟಿಕ್ ಆಸಿಡ್ ಹೊಂದಿರುತ್ತವೆ. ಇದು ಕ್ಯಾಲ್ಸಿಯಂ, ಕಬ್ಬಿಣ , ಸತು, ಮಗ್ನಿಷಿಯಾಂ ಮುಂತಾದ ಖನಿಜಗಳನ್ನು ಹೀರಿಕೊಳ್ಳುವ ನಮ್ಮ ಶರೀರದ ಸಾಮರ್ಥ್ಯವನ್ನು ಕುಗ್ಗಿಸುವ ಕಾರ್ಯವನ್ನು ಮಾಡುತ್ತದೆ. ಗೋಧಿ ರದ್ರೋಗ ಗಳಿಗೆ ಕಾರಣ ಆಗುತ್ತದೆ. ಕಣಗಳ ಗಾತ್ರವನ್ನು ಅನುಸರಿಸಿ ಕೆಟ್ಟ ಕೊಲೆಸ್ಟ್ರಾಲ್ ನಲ್ಲಿ ಬೇರೆ ಬೇರೆ ರೀತಿಯ ಗುಣಗಳು ಇರುತ್ತವೆ. ಇವುಗಳನ್ನ ಪ್ಯಾಟರ್ನ್ A, ಪ್ಯಾಟರ್ನ್ ಬಿ ಎಂದು ಗುರುತಿಸಬಹುದು. ಪ್ಯಾಟರ್ನ್ A ಗೆ ಹೋಲಿಸಿದರೆ, ಪ್ಯಾಟರ್ನ್ ಬಿ ತುಂಬಾ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತದೆ. ಹಾಗೂ ಹೃದ್ರೋಗ ಗಳಿಗೆ ಗುರಿ ಆಗುವ ಸಂಭವ ಹೆಚ್ಚು ಇರುತ್ತದೆ. ಓಟ್ಸ್ ಅಂತಹ ಇಡೀ ಧಾನ್ಯ ಸೇವನೆಯು ಕೆಟ್ಟ ಕೊಬ್ಬುಗಳನ್ನು ತಗ್ಗಿಸಿದರೆ, ಗೋಧಿಯ ಈ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಕೆಲವು ರೀಸರ್ಚ್ ಗಳಲ್ಲಿ ತಿಳಿದು ಬಂದಿದೆ. ಗೋಧಿ ಮೆದುಳಿನ ಕಾಯಿಲೆಗಳಿಗೆ ಕಾರಣ ಆಗುತ್ತದೆ.

ಈ ರೋಗಗಳು ಗ್ಲುತೆನ್ ಸೇವನೆಯಿಂದ ಉಂಟಾಗುತ್ತದೆ. ಮೆದುಳಿನ ಸಮಸ್ಯೆ ಇರುವವರು ಗೋಧಿ ಸೇವಿಸುವುದು ಇದರಿಂದಲೇ ಎಂದು ತಿಳಿದು ಬಂದಿದೆ. ಗೋಧಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೆಚ್ಚು ಮಾಡುತ್ತದೆ. ಆದರೆ ನಾವು ಮಿತವಾಗಿ ಗೋಧಿಯನ್ನು ಹಾಗೂ ಗೋಧಿಯ ಪದಾರ್ಥಗಳನ್ನು ಬಳಸುವುದರಿಂದ ಯಾವುದೇ ರೀತಿಯ ಅನಾರೋಗ್ಯಗಳು ನಮಗೆ ಬರಲ್ಲ. ಆದರೆ ಅತಿಯಾಗಿ ಪ್ರತೀ ದಿನ ಗೋಧಿಗೆ ಸಂಬಂಧಿಸಿದ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವು ರೀಸರ್ಚ್ ಗಳು ಹೇಳುತ್ತವೆ.

Leave a Reply

Your email address will not be published. Required fields are marked *