ಹೆಡ್ ಫೋನ್ ಜಾಸ್ತಿ ಬಳಸುತ್ತಿದ್ರೆ, ಖಂಡಿತ ಇದರ ಬಗ್ಗೆ ತಿಳಿಯಲೇಬೇಕು

0 3

ಜಾಸ್ತಿ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಸಿದರೆ ಏನಾಗುತ್ತದೆ ಎನ್ನುವುದರ ಕುರಿತು ಈ ಲೇಖನದ ಮೂಲಕ ಪುಟ್ಟ ಮಾಹಿತಿ.ಬಸ್ಸಿನಲ್ಲಿ ಟ್ರೈನ್ ನಲ್ಲಿ ಹೊರಗಡೆ ಎಲ್ಲಾ ಕಡೆ ನೂ ನಾವು ಇಯರ್ ಫೋನ್, ಹೆಡ್ ಫೋನ್ ಬಳಸುವುದನ್ನು ನೋಡಿರುತ್ತೇವೆ. ಈಗಿನ ಕಾಲಕ್ಕೆ ತಕ್ಕಂತೆ ನಮ್ಮ ಯುವ ಜನತೆ ಮೊಬೈಲ್ ಫೋನ್ ಜೊತೆ ಇಯರ್ ಫೋನ್ ಬಳಸುವುದು ಕೂಡ ಹೆಚ್ಚು ಆಗಿದೆ. ವಯರ್ ಲೆಸ್ ಬ್ಲ್ಯೂ ಟೂತ್, ಹೆಡ್ ಫೋನ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ತೈವಾನ್ ದೇಶದ ಒಬ್ಬ ಯುವಕ ರಾತ್ರಿ ಮಲಗುವಾಗ ಕೂಡ ಆ್ಯಪಲ್ ಹೆಡ್ ಫೋನ್ ಹಾಕಿಕೊಂಡೆ ಮಲಗುತ್ತಿದ್ದ. ಬೆಳಿಗ್ಗೆ ಎದ್ದು ನೋಡಿದಾಗ ಒಂದು ಕಡೆಯ ಹೆಡ್ ಫೋನ್ ಮಾತ್ರ ಕಾಣುತ್ತದೆ. ಇನ್ನೊಂದು ಕಡೆಯ ಹೆಡ್ ಫೋನ್ ಕಾಣದಾದಾಗ ಹುಡುಕಿದರೆ ಸಿಗಲಿಲ್ಲ. ಕೊನೆಗೆ ಆ್ಯಪಲ್ ಫೈಂಡ್ ಮೈ ಹೆಡ್ ಫೋನ್ ನಲ್ಲಿ ಹುಡುಕಿದಾಗ ಕೊನೆಗೆ ಹೊಟ್ಟೆಯ ಒಳಗೆ ಬೀಪ್ ಸೌಂಡ್ ಬರುವುದು ಕೇಳಿಸುತ್ತದೆ. ಆ ಶಬ್ದ ಕೇಳಿದಾಗ ಆ ಯುವಕ ತಕ್ಷಣ ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಪರೇಶನ್ ಮಾಡುವ ಅಗತ್ಯ ಇಲ್ಲ ತಾನಾಗಿ ತಾನೇ ಹೊರಗೆ ಬರುವುದಾಗಿ ತಿಳಿಸುತ್ತಾರೆ. ಅದಾದ ನಂತರ ಬಂದ ಒಂದು ಶಾಕಿಂಗ್ ನ್ಯೂಸ್ ಏನು ಅಂದರೆ, ಹೊಟ್ಟೆಯಲ್ಲಿ ಇದ್ದಂತಹ ಹೆಡ್ ಫೋನ್ ಅಸಿಡಿಕ್ ಸ್ಥಿತಿಯಲ್ಲಿ ಇದ್ದರೂ ಸಹ ಜೀರ್ಣ ವ್ಯವಸ್ಥೆಯನ್ನು ದಾಟಿ ಬಂದರೂ ಸಹ ಆ ಹೆಡ್ ಫೋನ್ ಸರಿಯಾಗಿ ಕೆಲಸ ಮಾಡುತ್ತಾ ಇತ್ತು. ಬ್ಯಾಟರಿ ೪೫% ಇತ್ತು. ಇದು ಬಹುಶಃ ಆ್ಯಪಲ್ ನವರಿಗು ಸಹ ಗೊತ್ತಿರಲಿಕ್ಕಿಲ್ಲ ಬ್ಯಾಟರಿ ಇಷ್ಟು ಒರಿಜಿನಲ್ ಹಾಗೂ ಗಟ್ಟಿಯಾಗಿ ಬಾಳಿಕೆಗೆ ಬರುತ್ತೆ ಅನ್ನೋದು. ಈಗ ಮುಖ್ಯವಾಗಿ ವಿಷಯಕ್ಕೆ ಬರುವುದಾದರೆ, ಇಯರ್ ಫೋನ್ ಅಥವ ಹೆಡ್ ಫೋನ್ ಗಳನ್ನೂ ಅತಿಯಾಗಿ ಬಳಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ. ಆದರೆ ಅದಕ್ಕೂ ಮೊದಲು ನಾವು ಶಬ್ದವನ್ನು ಹೇಗೆ ಕೇಳುತ್ತೇವೆ ಅನ್ನೋದರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಕಿವಿಯಲ್ಲಿ ಔಟರ್ ಇಯರ್, ಮಿಡಲ್ ಇಯರ್ ಹಾಗೂ ಇನ್ನರ್ ಇಯರ್ ಎಂದು ಮೂರು ಭಾಗಗಳು ಇರುತ್ತವೆ. ನಾವು ಕೇಳುವ ಶಬ್ಧ ಗಾಳಿಯಲ್ಲಿ ವೈಬ್ರೆಟ್ ತರ ಪಾಸ್ ಆಗಿ ಔಟರ್ ಇಯರ್ ಮೂಲಕ ಒಳ ಬಂದು ಮಿಡಲ್ ಇಯರ್ ಗೆ ಬಂದು ತಮಟೇಗೆ ಬಡಿದು ವೈಬ್ರೇಶನ್ ಆಗುತ್ತಾ ಇನ್ನರ್ ಇಯರ್ ನ ಕೋ ಕ್ಲೆಯರ್ ಗೆ ವರ್ಗಾಯಿಸುತ್ತದೆ. ಅಲ್ಲಿ ಸೂಕ್ಷ್ಮವಾಗಿ ಗುರುತಿಸಿ ಮೆದುಳಿಗೆ ಎಲೆಕ್ಟ್ರಿಕ್ ರೀತಿಯಲ್ಲಿ ಸಂದೇಶ ರವಾನೆ ಆಗುತ್ತದೆ. ಆಗ ನಮಗೆ ಶಬ್ಧ ಗೊತ್ತಾಗುತ್ತದೆ. ಆಗ ನಾವು ಇಯರ್ ಫೋನ್ ನ ಶಬ್ದವನ್ನು ಅತೀ ಹತ್ತಿರದಿಂದ ಕೇಳಿದ ಹಾಗೆ ಆಗುತ್ತದೆ. ಅಮೆರಿಕಾದ ಸೇಫ್ಟಿ ಆಂಡ್ ಹೆಲ್ತ್ ಇನ್ಸ್ಟಿಟ್ಯುತ್ ಮತ್ತು ನಮ್ಮ ದೇಶವು ಸಹ ಆರೋಗ್ಯಕರ ಶಬ್ಧಕ್ಕಿಂತ ಹೆಚ್ಚಿನ ಶಬ್ಧ ಕೇಳಿದರೆ ಕಿವಿಗೆ ಹಾನಿಕಾರಕ ಎಂದು ತಿಳಿಸಿದ್ದಾರೆ.

ಆದರೆ ಈಗಿನ ಕಾಲದ ಇಯರ್ ಫೋನ್ ಮತ್ತು ಹೆಡ್ ಫೋನ್ ಗಳಲ್ಲಿ ೯೯ ಡಿಸೇಬಲ್ ನಿಂದ ೧೦೭ ಡಿಸೇಬಲ್ ವರೆಗೂ ಶಬ್ದ ಕೇಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಅತೀ ಹೆಚ್ಚು ಹೆಡ್ ಫೋನ್ ಮತ್ತು ಇಯರ್ ಫೋನ್ ನಲ್ಲಿ ಅತಿ ಹೆಚ್ಚು ಶಬ್ಧ ಇಟ್ಟು ಕೇಳುವುದರಿಂದ ನಮ್ಮ ಇನ್ನರ್ ಇಯರ್ ಹಾನಿಗೆ ಒಳಗಾಗುವ ಸಂಭವ ಹೆಚ್ಚು ಇರುತ್ತದೆ. ನಮ್ಮ ದೇಹದ ಯಾವುದೇ ಅಂಗವಾದರು ಹಾಳಾದರೆ ಬೇಗ ಸರಿ ಹೋಗುವ ಸಾರ್ಥ್ಯವನ್ನು ಹೊಂದಿರುತ್ತವೆ. ಆದರೆ ಇನ್ನರ್ ಇಯರ್ ಗೆ ಈ ಸಮಾರ್ಥ್ಯ ಇರುವುದಿಲ್ಲ. ಹಾಗಾಗಿ ಇದರಿಂದ ಕಿವುಡು ತನ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ.

ಇಯರ್ ಫೋನ್ ಹಾಗೂ ಹೆಡ್ ಫೋನ್ ಬಳಸುವುದು ತಪ್ಪು ಹಾಗೂ ಬಳಸಬಾರದು ಅಂತ ಹೇಳುತ್ತಿಲ್ಲ ಆದರೆ ಬಳಸುವ ಸಮ್ಯ ಕಡಿಮೆ ಇರಲಿ ಅಷ್ಟೇ. ಅತಿಯಾದ ಸೌಂಡ್ ಕಿವಿಗೆ ತುಂಬಾ ಹಾನಿಕಾರಕ. ಹಾಗಾಗಿ ನೀವು ಇಯರ್ ಫೋನ್ ಹಾಗೂ ಹೆಡ್ ಫೋನ್ ಬಳಸುವಾಗ ೭೦/೮೦ ಅಷ್ಟೇ ಅಳತೆಯಲ್ಲಿ ಇಟ್ಟುಕೊಂಡು ಕೇಳಿದರೆ ಒಳ್ಳೆಯದು.

Leave A Reply

Your email address will not be published.