What is the salary of state MLAs? MLA ಆದರೆ ಜೀವನ ಸೆಟಲ್ ಆದ ಹಾಗೆ ಎಂಬ ಮಾತು ಇದೆ ಆದರೆ ಎಂಟ್ರೆನ್ಸ್ ಎಕ್ಸಾಮ್ ಬರೆದು ಎಂಎಲ್ಎ ಆಗುವ ಹಾಗಿದ್ದರೆ ಅದೆಷ್ಟು ಜನ MLA ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರೋ ತಿಳಿಯದು ಹಾಗೆಯೇ MLA ಆದವರು ಕ್ಷೇತ್ರವನ್ನು ಪ್ರತಿನಿಧಿಸುವುದರ ಜೊತೆಗೆ ಅಲ್ಲಿನ ಜನರಿಗೆ ಪರಿಹಾರ ಒದಗಿಸಿ ಪೂರ್ತಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಎಮ್ಮೆಲ್ಲೆಗಳ ಕೆಲಸ.

What is the salary of state MLAs

ಕೆಲವರು ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಇನ್ನು ಕೆಲವರು ತಮ್ಮ ಸಂಪತ್ತುಗಳನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಾರೆ ಇನ್ನು ಶಾಸಕರಿಗೆ ಒಂದು ತಿಂಗಳಿಗೆ ಇರುವ ವೇತನ ಎಷ್ಟೆಂದರೆ ನಮ್ಮ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಶಾಸಕರಿಗೂ ತಿಂಗಳಿಗೆ 40,000 ದಷ್ಟು ಬೇಸಿಕ್ ಸ್ಯಾಲರಿ ದೊರೆಯುತ್ತದೆ ಅಂದರೆ ವರ್ಷಕ್ಕೆ 4,80,000 ಆಗುತ್ತದೆ, ಅಷ್ಟೇ ಅಲ್ಲದೆ ತಿಂಗಳಿಗೆ 60,000 ಕ್ಷೇತ್ರ ಪ್ರಯಾಣ ಭತ್ಯೆ ಅಲ್ಲದೆ ಪ್ರತಿ ತಿಂಗಳು 60,000 ಕ್ಷೇತ್ರ ಭತ್ಯೆ ಮುಂತಾದ ಭತ್ಯೆಗಳು ದೊರೆಯುತ್ತವೆ ಆದರೆ ಇವುಗಳನ್ನು ಎಷ್ಟು ಎಂಎಲ್ಎಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೋ ಎಂಬುದು ತಿಳಿಯದು.

ಹಾಗೆಯೇ ತಿಂಗಳಿಗೆ 20,000 ದೂರವಾಣಿ ಭತ್ಯೆ ಮತ್ತು ಯಾವುದೇ ದೂರವಾಣಿಯನ್ನು ಖರೀದಿಸಬೇಕಾದರೆ ಅದಕ್ಕೆ ಡಿಪೋಸಿಟ್ ಮಾಡಬೇಕಾದಂತಹ ಹಣವನ್ನು ಸಹ ಸರ್ಕಾರವೇ ನೀಡುತ್ತದೆ ಇದೇ ರೀತಿ 5,000 ಪ್ರತಿ ತಿಂಗಳಿಗೆ ಅಂಚೆ ಭತ್ಯೆ ಯನ್ನು ಸಹ ನೀಡಲಾಗುತ್ತದೆ ಶಾಸಕರ ಆಪ್ತ ಸಹಾಯ ರಿಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳಷ್ಟು ವೇತನ ನೀಡಲಾಗುತ್ತದೆ

ಹೀಗೆ ಪರೋಕ್ಷವಾಗಿ ಬರುವ ಎಲ್ಲಾ ಹಣಗಳನ್ನು ಸೇರಿಸಿದರೆ ಓರ್ವ ಎಮ್ಮೆಲ್ಲೆಗೆ ತಿಂಗಳಿಗೆ ಸುಮಾರು ಎರಡು ಲಕ್ಷದ ಐದು ಸಾವಿರದಷ್ಟು ಹಣ ಸರ್ಕಾರದಿಂದ ಸಿಗುತ್ತದೆ ಹಾಗೆಯೇ ಎಂಎಲ್ಎಗಳು ತಮ್ಮ ಸರಕಾರಿ ಕಾರ್ಯದ ನಿಮಿತ್ತ ಪ್ರಯಾಣ ಬೆಳೆಸಿದಲ್ಲಿ ಪ್ರಯಾಣದರವು ಒಂದು ಕಿಲೋಮೀಟರ್ ಗೆ 35 ರೂಪಾಯಿನಂತೆ ಅವರು ಪ್ರಯಾಣಿಸಿದ ದೂರದಷ್ಟು ಹಣ ಅವರಿಗೆ ಸಿಗುತ್ತದೆ.

ಹಾಗೆಯೇ ಎಂಎಲ್ಎಗಳು ಅಟೆಂಡ್ ಮಾಡುವ ಪ್ರತಿ ಸಭೆಗೆ ರೂ.1500 ಗಳಷ್ಟು ನೀಡಲಾಗುತ್ತದೆ ಕರ್ನಾಟಕದ ಒಳಗಡೆಯಾದರೆ 2500 ದಿನಭತ್ಯೆ ಹಾಗೆ ಹೊರ ರಾಜ್ಯದಲ್ಲಿ ಆದರೆ 3500 ದಿನಭತ್ಯೆ ಹೊರ ರಾಜ್ಯದ ಹೋಟೆಲ್ಲುಗಳಲ್ಲಿ ಏಳು ಸಾವಿರ ರೂಪಾಯಿಗಳಷ್ಟು ಭತ್ಯೆಯನ್ನು ನೀಡಲಾಗುತ್ತದೆ.

ಇದಲ್ಲದೆ ಹೊರ ರಾಜ್ಯದಲ್ಲಿ ಓಡಾಡಲು ದಿನಕ್ಕೆ ಎರಡು ಸಾವಿರ ರೂಗಳಷ್ಟು ಸ್ಥಳೀಯ ಚಾರ್ಜ್ ಕೂಡ ಸಿಗುತ್ತದೆ ವರ್ಷಕ್ಕೆ 2.50 ರೈಲು ಮತ್ತು ವಿಮಾನ ಭತ್ಯೆ ಶಾಸಕರು ರಾಜ್ಯ ರಾಜ್ಯದ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಅವರ ಜೊತೆಗೆ ಇನ್ನೊಬ್ಬ ಸಹಾಯಕರನ್ನು ಕರೆದೊಯ್ಯಬಹುದು ಹಾಗೆ ಎಂಎಲ್ಎಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಖಾಸಗಿ ಆಸ್ಪತ್ರೆಗೆ ಹೋದರೆ ಹಣವನ್ನ ವಾಪಸ್ ನೀಡಲಾಗುತ್ತದೆ.

ಸಿಎಂ ಸಚಿವರು ಹಾಗೆ ವಿರೋಧ ಪಕ್ಷದ ನಾಯಕರು ಮುಂತಾದವರಿಗೆ ಓಡಾಡಲು ರಾಜ್ಯ ಸರ್ಕಾರ ಕಾರು ನೀಡುವಂತೆ ಎಂಎಲ್ಎ ಗಳಿಗೆ ನೀಡುವುದಿಲ್ಲ ಆದರೆ ಕಾರನ್ನು ಖರೀದಿಸಲು ಅಡ್ವಾನ್ಸ್ ಗಾಗಿ ಸಾಲದ ರೂಪದಲ್ಲಿ ಹಣವನ್ನು ಸರ್ಕಾರವೇ ನೀಡುತ್ತದೆ ಹಾಗೆಯೇ ಇವರಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಷ್ಟು ಪೆನ್ಷನ್ ಬರುತ್ತದೆ ಹಾಗೆ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ ಈ ಪರಿಷ್ಕರಣೆಯೂ ಬೆಲೆ ಏರಿಕೆ ಸೂಚ್ಯಂಕದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹೀಗೆ ರಾಜಕೀಯ ವ್ಯಕ್ತಿಗಳಿಗೆ ಅನೇಕ ರೀತಿಯಲ್ಲಿ ವೇತನವನ್ನು ಹೊರತುಪಡಿಸಿ ಅನೇಕ ರೀತಿಯ ಭತ್ಯೆಗಳು ದೊರೆಯುತ್ತವೆ ಆಯಿಲ್ಲ ಹಣ ಎಷ್ಟು ಮಟ್ಟಿಗೆ ಸದುಪಯೋಗ ಆಗುವುದೋ ತಿಳಿಯದು.

Leave a Reply

Your email address will not be published. Required fields are marked *