ತಾನು ಪ್ರೀತಿಸಿದ ಹುಡುಗಿಯನ್ನು ಬಸುರಿ ಮಾಡಿ ನಂತರ ಈ ಭೂಪ ಮಾಡಿದ್ದೇನು ಗೊತ್ತಾ? ಯಪ್ಪಾ ಏನ್ ಗುರು ಇದು

0 4

Kannada News: ನಮ್ಮ ಜಗತ್ತಿನಲ್ಲಿ ಪ್ರೀತಿ ಪ್ರೇಮ(Love) ಎನ್ನುವುದು ಮೊದಲಿನಿಂದಲೂ ಅನಾದಿ ಕಾಲದಿಂದಲೂ ಕೂಡ ಇದೆ ಇನ್ನೂ ಜಗತ್ತು ಮುಗಿಯುವವರೆಗೂ ಕೂಡ ಇದು ಇದ್ದೇ ಇರುತ್ತದೆ. ಆದರೆ ಕುರುಡರಾಗಿ ಇದನ್ನು ನಂಬಿ ಬಿಡಬಾರದು ಎಂಬುದು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವಂತಹ ಅಂಶ.

ಮನಸುಗಳು ಒಪ್ಪಿದರೆ ಸಾಕು ಪ್ರೀತಿ ಮೂಡಲು ಯಾವುದೇ ಹಣ ಆಸ್ತಿ ಅಂತಸ್ತು ಹಾಗೂ ವಯಸ್ಸಿನ ಅಂತರವೂ (Age gap) ಕೂಡ ಅಡ್ಡಿ ಬರುವುದಿಲ್ಲ ಎಂಬುದಾಗಿ ಈಗಾಗಲೇ ಹಲವಾರು ಘಟನೆಗಳು ಸಾಕ್ಷಿಯಾಗಿವೆ ಎಂದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಬೆಳಕಿಗೆ ಬಂದಿದ್ದು ಹಣದ ಆಸೆಗಾಗಿ ಸರ್ಕಾರಿ ಕೆಲಸವನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಿ ಆತನನ್ನು ಆಕೆ ದೋಚಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಈ ಘಟನೆಯ ಮುಖ್ಯ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುವ ಮಹಿಳೆಯ ಹೆಸರು ರೇಣುಕಾ ಎಂಬುದಾಗಿ. ಇದಕ್ಕೂ ಮುಂಚೆ ಆಕೆ ಶ್ರೀನಿವಾಸ ಎನ್ನುವವರನ್ನು ಪ್ರೀತಿಸುತ್ತಾಳೆ.

ಆದರೆ ಆತನನ್ನು ಮದುವೆಯಾಗಿದೆ ಅವಳು ಸರ್ಕಾರಿ ಕೆಲಸದಲ್ಲಿರುವ ಅವನನ್ನು ಮದುವೆಯಾಗುತ್ತಾಳೆ. ವಿಚಿತ್ರ ಎನ್ನುವಂತೆ ಮದುವೆಯಾದ ಒಂದೇ ವಾರಕ್ಕೆ ಆಕೆ ಗರ್ಭಿಣಿ ಆಗುತ್ತಾಳೆ. ಆಗ ಆ ಸರ್ಕಾರಿ ಕೆಲಸದ ಗಂಡ ಆಕೆಯನ್ನು ಬಿಟ್ಟು ಹೋಗುತ್ತಾನೆ. ನಂತರ ಮತ್ತೆ ಆಕೆ ಶ್ರೀನಿವಾಸನ ಆಶ್ರಯಕ್ಕೆ ಬರುತ್ತಾಳೆ.

ರೇಣುಕಾ ಮೊದಲಿಗೆ ಶ್ರೀನಿವಾಸನನ್ನು ಮದುವೆ ಆಗುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ ಆದರೆ ಅದಕ್ಕೆ ಆತನು ಒಪ್ಪುವುದಿಲ್ಲ. ನಂತರ ಆತ ತನಗೆ ಪರಿಚಯ ಇರುವ ಸೇನಾಧಿಕಾರಿ ಸ್ನೇಹಿತನ ಬಳಿಗೆ ಹೋಗಿ ಆಕೆಯನ್ನು ಮದುವೆಯಾಗಲು ಒಪ್ಪಿಸುತ್ತಾನೆ ಆಕೆಯು ಕೂಡ ಶ್ರೀನಿವಾಸನ ಮಾತನ್ನು ಕೇಳಿ ಮದುವೆಯಾಗುತ್ತಾಳೆ.

ಈಗಲಾದರೂ ಬುದ್ಧಿ ಕಲಿಯಬೇಕಾಗಿದ್ದ ರೇಣುಕಾ ಅಲ್ಲಿಯೂ ಕೂಡ ತನ್ನ ವರಸೆಯನ್ನು ಎಂದು ತೋರಿಸಿಬಿಡುತ್ತಾಳೆ. ಹೌದು ಗೆಳೆಯರೇ ತನ್ನ ಸೇನಾಧಿಕಾರಿ ಗಂಡ ಆಗಾಗ ಮಾತ್ರ ಕೆಲವೊಮ್ಮೆ ಅಂದರೆ ವರ್ಷಕ್ಕೆ ಕೆಲವು ಬಾರಿ ಮಾತ್ರ ಮನೆಗೆ ಬರುತ್ತಾನೆ ಎಂಬುದಾಗಿ ಅವಳಿಗೆ ಮೊದಲೇ ತಿಳಿದಿತ್ತು.

ಇದನೊಮ್ಮೆ ಓದಿ..ಹೆಣ್ಣು ತನ್ನ ಗಂಡನಿಂದ ಜಾಸ್ತಿ ಬಯಸೋದು ಏನು ಗೊತ್ತಾ? ನಿಮಗಿದು ಗೊತ್ತಿರಲಿ

ಹೀಗಾಗಿ ಅವಳು ತನ್ನ ಎರಡನೇ ಗಂಡನಿಗೆ ತಿಳಿಯದಂತೆ ಮತ್ತೊಬ್ಬ ಸರ್ಕಾರಿ ನೌಕರನನ್ನು ಮದುವೆಯಾಗುತ್ತಾಳೆ. ಎಲ್ಲಾ ಕಡೆಯಿಂದಲೂ ದೋಚಲು ಪ್ರಾರಂಭಿಸುತ್ತಾಳೆ. ಚಿನ್ನಾಭರಣ ಕದ್ದ ವಿಚಾರದಲ್ಲಿ ಪೊಲೀಸರಿಗೆ ಎರಡನೇ ಗಂಡ ದೂರು ನೀಡಿದ ಸಂದರ್ಭದಲ್ಲಿ ರೇಣುಕಾ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಈ ವಿಚಾರ ಈಗ ಎಲ್ಲರಿಗೂ ತಿಳಿದು ಬಂದಿದ್ದು ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.