ದೇಹದ ತೂಕ ಹೆಚ್ಚಿದ್ರೆ ಹೇಗೆ ಜನರು ಸಮಸ್ಯೆಗಳಿಗೆ ತುತ್ತಾಗುತ್ತರೋ ಹಾಗೇ ತೂಕ ಕಡಿಮೆಯಾದರೂ ಕೂಡ ಅಷ್ಟೇ ಸಮಸ್ಯೆಗಳು. ದೇಹವನ್ನು ಚೆನ್ನಾಗಿ ಕಾಣುವಂತೆ ಮಾಡಿಕೊಳ್ಳಲು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ದೇಹದ ಫಿಟ್ನೆಸ್ ಅನ್ನು ಕಾಯ್ದು ಕೊಳ್ಳುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮೂರು ಬಲಗಳಲ್ಲಿ ದೇಹ ಬಲವೂ ದೇಹದ ಸಾಮರ್ಥ್ಯವೂ ಅತಿ ಮುಖ್ಯವಾದದ್ದು. ಅದರಲ್ಲೂ ನಮ್ಮ ಆಧುನಿಕ ಯುಗದಲ್ಲಂತು ಯುವಕರು ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಫಿಟ್ನೆಸ್ ಅನ್ನು ಕಾಯ್ದುಕೊಳ್ಳುವುದಕ್ಕಾಗಿ ಜಿಮ್ ಗಳ ಮೊರೆ ಹೋಗುತ್ತಿರುವುದನ್ನು ನಾವು ಸರ್ವೇಸಾಮಾನ್ಯವಾಗಿ ಕಾಣಬಹುದು ಗಂಟೆಗಟ್ಟಲೆ ನಮ್ಮ ಯುವಕರು ತಮ್ಮ ದೇಹಕ್ಕಾಗಿ ಜಿಮ್ ಗಳಲ್ಲಿ ಕಾಲ ಕಳೆಯುತ್ತಾರೆ, ಅಲ್ಲದೇ ಸಮಯವನ್ನೂ ಹಾಳುಮಾಡುತ್ತಿದ್ದಾರೆ ತೂಕ ಹೆಚ್ಚಿಸಿಕೊಳ್ಳಲು ಅವರೆಷ್ಟು ಕಷ್ಟ ಪಡುತ್ತಾರೆಂಬುದು ಅವರಿಗೇ ಗೊತ್ತು ಅಲ್ಲದೇ ಪ್ರೊಟೀನ್ ಪೌಡರ್ ನ ಮೊರೆ ಹೋಗುತ್ತಾರೆ.

ತೂಕ ಕಡಿಮೆ ಇರುವವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಆಯಾಸ ನಿರುತ್ಸಾಹ ಮೈಯ್ಯಲ್ಲಿ ಶಕ್ತಿ ಇಲ್ಲದಿರುವುದು ಹಾಗೆಯೆ ಜೀವನದಲ್ಲೂ ನಿರಾಸಕ್ತಿಯುಂಟಾಗುತ್ತದೆ ಅಲ್ಲದೆ ಬಹುತೇಕ ಜನರು ಜಂಕ್ ಫುಡ್ ಗಳ ಮೊರೆ ಹೋಗುತ್ತಾರೆ ಇದರಿಂದ ದೇಹದಲ್ಲಿ ಕೊಬ್ಬಿಣ ಪ್ರಾಮಾನ ಹೆಚ್ಚಾಗುತ್ತದೆಯೇ ಹೊರತು ದೇಹದ ಫಿಟ್ನೆಸ್ ಅನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂದರೆ ಆರೋಗ್ಯಯುತವಾಗಿ ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವೇ ಇಲ್ಲವಾ ಎನ್ನುವವರಿಗೆ ನಾವು ಕೆಲವೊಂದು ಟಿಪ್ಸ್ ಗಳನ್ನು ನಿಮಗಾಗಿಯೇ ತಂದಿದ್ದೇವೆ ನೋಡಿ ಇದರಿಂದ ನಿಮ್ಮ ತೂಕವೂ ಹೆಚ್ಚುವುದಲ್ಲದೆ ಅದು ಆರೋಗ್ಯಯುತವಾಗಿರುವುದು.

ಕೆನೆಬರಿತ ಹಾಲನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ನಿಮ್ಮ ದೇಹದ ತೂಕ ಕಡೆಮೆ ಅವಧಿಯಲ್ಲೇ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದೇರೀತಿ ಆಲೂಗಡ್ಡೆಯಲ್ಲಿ ಅತ್ಯಧಿಕ ಪೌಷ್ಠಿ ಮತ್ತು ಪ್ರೊಟೀನ್ ಇರುವ ಕಾರಣ ಆಲುಗಡ್ಡೆಯನ್ನು ಸಿಪ್ಪೆ ಸಮೇತ ತಮ್ಮ ಆಹಾರದಲ್ಲಿ ಸೇವನೆ ಮಾಡುವುದರಿಂದಲೂ ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಇದು ಅತ್ಯಂತ ಉಪಯುಕ್ತವಾದದ್ದು. ಇನ್ನು ದೇಹದ ತೂಕವನ್ನು ವೃದ್ಧಿಸಿಕೊಳ್ಳಲು ಬಯಸುವವರು ಅತಿ ಹೆಚ್ಚಾಗಿ ಪರಂಗಿ ಹಣ್ಣು ಅನಾನಸ್ ಬಾಳೆಹಣ್ಣುಗಳನ್ನು ಅತಿ ಹೆಚ್ಚು ಸೇವಿಸುವುದರಿಂದಲೂ ಮತ್ತು ಈ ಹಣ್ಣುಗಳನ್ನು ಫ್ರೂಟ್ ಸಲಾಡ್ ಅಥವಾ ಮಿಲ್ಕ್ ಷೇಕ್ ಮಾಡಿಕೊಂಡು ಕುಡಿಯುವುದರಿಂದಲೂ ನಿಮ್ಮ ದೇಹ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುತ್ತದೆ .

ಇನ್ನು ಎಲ್ಲಕ್ಕೂ ಮಿಗಿಲಾಗಿ ಮೊಟ್ಟೆಯು ಮಾನವನ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಹೊಂದಿದ್ದು ಮತ್ತು ದೇಹಕ್ಕೆ ಬೇಕಾದ ಕ್ಯಾಲರಿಯನ್ನು ಹಾಗೂ ಅತ್ಯಧಿಕ ಪ್ರಮಾಣದ ಪ್ರೊಟೀನ್ ಅನ್ನು ಒಳಗೊಂಡಿರುವ ಪದಾರ್ಥವದ್ದರಿಂದ ಮೊಟ್ಟೆಯ ಸೇವನೆಯು ದೇಹಕ್ಕೆ ಅತ್ಯಧಿಕ ಕ್ಯಾಲಾರಿ ಹಾಗೂ ಪ್ರೊಟೀನ್ ಗಳನ್ನು ಒದಗಿಸಿ ದೇಹದ ತೂಕದಲ್ಲಿ ಬದಲಾವಣೆಯನ್ನು ತರುವುದರಲ್ಲಿ ಸಹಾಯಕವಾಗುತ್ತದೆ.

ಇನ್ನು ಕೊನೆಯದಾಗಿ ಡ್ರೈ ಫ್ರೂಟ್ಸ್ ಅಂದರೆ ಒಣ ಹಣ್ಣುಗಳು ಉದಾಹರಣೆಗೆ ಗೋಡಂಬಿ ಒಣ ದ್ರಾಕ್ಷಿ ಬಾದಾಮಿ ಇಂತಹ ಪದಾರ್ಥಗಳಲ್ಲಿ ಕ್ಯಾಲರಿಗಳು ಪೋಷಕಾಂಶಗಳು ನಾರಿನ ಅಂಶಗಳು ಸಮೃದ್ದವಾಗಿರುತ್ತವಾದ್ದರಿಂದ ಇವುಗಳ ನಿಯಮಿತ ಸೇವನೆ ದೇಹಕ್ಕೆ ಉತ್ತಮ ಬಲವನ್ನು ನೀಡುವುದಲ್ಲದೆ ಮನುಷ್ಯನ ದೇಹವನ್ನು ಸಧೃಡವಾಗಿರುವಂತೆ ಕಾಯ್ದುಕೊಳ್ಳುತ್ತದೆ.

By

Leave a Reply

Your email address will not be published. Required fields are marked *