ತಂದೆಗೆ ಗೊತ್ತಿಲ್ಲದೇ ಕೆಲಸಕ್ಕೆ ಹೋಗುತಿದ್ದೆ, ನನಗೆ ಫುಲ್ ಪೇಮೆಂಟ್ ಕೊಟ್ಟಿದ್ದು ದರ್ಶನ್

0 2

ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಕೂಡ ನಟನಾಗಿ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಅವರ ಜೀವನ ಹಾಗೂ ಸಿನಿ ಪ್ರಯಾಣದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿನೋದ ಪ್ರಭಾಕರ್ ಅವರ ಫಿಟ್ನೆಸ್ ಸೀಕ್ರೆಟ್ ಹಾರ್ಡ್ ವರ್ಕ್, ವರ್ಕೌಟ್, ಡೆಡಿಕೇಶನ್. ಅವರ ಹೆಂಡತಿ ಮತ್ತು ಟ್ರೇನರ್ ಬಹಳ ಸಪೋರ್ಟ್ ಮಾಡುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ಅವರು ಇಲೆಕ್ಟ್ರಾನಿಕ್ ಇಂಜಿನೀಯರ್. ಮೊದಲು ಸಿನಿಮಾ ಬಗ್ಗೆ ಏನು ಗೊತ್ತಿರಲಿಲ್ಲ ತಂದೆ ತೀರಿಹೋದ ನಂತರ ಅವರ ಫ್ರೆಂಡ್ಸ್ ಸಿನಿಮಾ ಮಾಡೋಣವೆಂದು ಸಿನಿಮಾ ಮಾಡುತ್ತಾರೆ. ಅವರು ಆಸಕ್ತಿಯಿಂದ ಅಭಿನಯಿಸಿದ ಮೊದಲ ಸಿನಿಮಾ ನವಗ್ರಹ ಸಿನಿಮಾ ಆ ಸಿನಿಮಾಕ್ಕೆ ಮೊದಲ ಸಲ ಸ್ಯಾಲರಿ ಅಂತ 5 ಲಕ್ಷ ಕೊಟ್ಟರು ಎಂದು ವಿನೋದ್ ಹೇಳಿದ್ದಾರೆ. ಅವರು ಸಿನಿಮಾ ಇಂಡಸ್ಟ್ರಿ ಹೋಗುವ ಮೊದಲು ಕೆಲಸ ಮಾಡಿ ಮೊದಲ ಸಂಬಳ 700ರೂ ಪಡೆದಿದ್ದಾರೆ ಅವರು ಕೆಲಸ ಮಾಡುತ್ತಿರುವುದು ಅವರ ತಂದೆಗೆ ಗೊತ್ತಿರಲಿಲ್ಲ. 2004 ರಲ್ಲಿ ನಿಶಾ ಅವರೊಂದಿಗೆ ವಿನೋದ್ ಪ್ರಭಾಕರ್ ಮದುವೆಯಾಗುತ್ತಾರೆ ಇದರಿಂದ ಜೀವನದಲ್ಲಿ ಕೆಲವು ಒಳ್ಳೆಯ ಬದಲಾವಣೆಗಳು ಆದವು ಜಾಸ್ತಿ ಮಾತನಾಡುತ್ತಿರಲಿಲ್ಲ ಅಂತಹ ಗುಣಗಳನ್ನು ನಿಶಾ ಅವರು ಬದಲಾಯಿಸಿದರು, ಬಾಡಿ ಬಿಲ್ಡ್ ಮಾಡಲು ಅವರು ಬಹಳ ಸಪೋರ್ಟ್ ಮಾಡಿದರು, ಅವರು ಬಂದಮೇಲೆ ಸಿನಿಮಾಗಳಲ್ಲಿ ಅವಕಾಶ ದೊರಕಿತು ಎಂದು ಹೇಳಿದರು. ಇಪ್ಪತ್ತು ವರ್ಷದ ಹಿಂದೆ ಕಾಲೇಜಿನಲ್ಲಿರುವಾಗ ನಿಶಾ ಅವರು ಕಾಲೇಜಿನ ಫಂಕ್ಷನ್ ಗೆ ಬಂದಿದ್ದರು ಆಗ ಅವರ ಮೇಲೆ ಅಟ್ರಾಕ್ಷನ್ ಆಯಿತು ವಿನೋದ್ ಪ್ರಭಾಕರ್ ಅವರು ದುಡ್ಡಿಲ್ಲದ ಕಾರಣ ಮದುವೆ ಆಗುತ್ತಿರಲಿಲ್ಲ ಒಮ್ಮೆ ಕುಳಿತುಕೊಂಡು ಮಾತನಾಡಿ ನಂತರ ಮದುವೆಯಾದೇವು ಎಂದು ಅವರು ಹೇಳಿದರು.

ವಿನೋದ್ ಪ್ರಭಾಕರ್ ಅವರು ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿದ್ದು ಮೇಜರ್ ಎಂಬ ಸಿನಿಮಾದಲ್ಲಿ ಈ ಸಿನಿಮಾದಲ್ಲಿ ಇವರು ಯೋಧನಾಗಿ ನಟನೆ ಮಾಡಿದ್ದರು ಈಗಲೂ ಭಯ ಇದೆ ಎಂದು ಅವರು ಹೇಳಿಕೊಂಡರು. ವಿನೋದ್ ಪ್ರಭಾಕರ್ ಅವರ ತಂದೆಯ ಜೊತೆ ಚೆನ್ನೈಗೆ ಫ್ಲೈಟ್ ನಲ್ಲಿ ಹೋಗಿದ್ದು ಮೊದಲಸಲ ಫ್ಲೈಟ್ ನಲ್ಲಿ ಹೋಗಿದ್ದರು ಭಯ ಇತ್ತು ಆದರೆ ಖುಷಿ ಆಯಿತು ತಂದೆ ಜೊತೆ ಹೋಗಿದ್ದು ಎಂದು ವಿನೋದ್ ಪ್ರಭಾಕರ್ ಅವರು ಹೇಳಿದರು. ಅವರಿಗೆ ಅಡುಗೆ ಮಾಡಲು ಬರುತ್ತದೆ ಅವರ ತಾಯಿಗೆ ಚಿತ್ರಾನ್ನ ಬಹಳ ಇಷ್ಟ ಹಾಗಾಗಿ ವಿನೋದ್ ಪ್ರಭಾಕರ್ ಅವರು ಚಿತ್ರಾನ್ನವನ್ನು ಚೆನ್ನಾಗಿ ಮಾಡುತ್ತಾರೆ ತಾಯಿಗೆ ಹುಷಾರಿಲ್ಲದಿದ್ದಾಗ ಅವರಿಗೋಸ್ಕರ ಅಡುಗೆ ಮಾಡುತ್ತಿದ್ದೆ ಎಂದು ಹೇಳಿಕೊಂಡರು. ಅವರ ತಂದೆ ಟೈಗರ್ ಪ್ರಭಾಕರ್ ಅವರು ಬಹಳ ಮೃದು ಸ್ವಭಾವದವರಾಗಿದ್ದರು ಎಂಬ ವಿಷಯ ಯಾರಿಗೂ ಗೊತ್ತಿಲ್ಲ ಎಂದು ವಿನೋದ್ ಪ್ರಭಾಕರ್ ಅವರು ತಮ್ಮ ಮಾತನ್ನು ಹೇಳಿಕೊಂಡಿದ್ದಾರೆ. ವಿಡಿಯೋ ಕೃಪೆ: ಜಸ್ಟ್ ಬೆಂಗಳೂರು

Leave A Reply

Your email address will not be published.