Ultimate magazine theme for WordPress.

ಮಧ್ಯಾಹ್ನದ ಕ್ಲಾಸ್ ಬಂಕ್ ಮಾಡಿ KL ರಾಹುಲ್ ಎಲ್ಲಿಹೋಗುತ್ತಿದ್ದರು ಗೊತ್ತೇ? ಓದಿ ಇವರ ಇಂಟ್ರೆಸ್ಟಿಂಗ್ ಲೈಫ್ ಸ್ಟೋರಿ

0 0

ಕ್ರಿಕೆಟ್ ಪ್ರಪಂಚದಲ್ಲಿ ಮಿಂಚುತ್ತಿರುವ ಕ್ರಿಕೆಟರ್ ಕಣ್ಣೂರು ಲೋಕೇಶ್ ರಾಹುಲ್ ಕೆ.ಎಲ್ ರಾಹುಲ್ ಇವರ ತಂದೆ-ತಾಯಿ ಪ್ರೊಫೆಸರ್ಸ್ ಆಗಿದ್ದರೂ ಇವರು ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟನ್ನು. ಇವರ ಜೀವನ ಹಾಗೂ ಕ್ರಿಕೆಟ್ ಆಸಕ್ತಿಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕೆ.ಎಲ್ ರಾಹುಲ್ 18 ಏಪ್ರಿಲ್ 1992 ರಲ್ಲಿ ಮಂಗಳೂರಿನಲ್ಲಿ ಜನಿಸುತ್ತಾರೆ ಇವರ ತಂದೆ ಕೆ.ಎಲ್ ಲೊಕೇಶ್ ತಾಯಿ ರಾಜೇಶ್ವರಿ ಇವರಿಬ್ಬರೂ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಅವರ ತಂದೆ ಕ್ರಿಕೆಟ್ ನ ಅಭಿಮಾನಿಯಾಗಿದ್ದಾರೆ ಅದಕ್ಕಾಗಿ ಅವರು ದಿಗ್ಗಜ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರ ಮಗನ ಹೆಸರು ರಾಹುಲ್ ಎಂದು ತಿಳಿದು ತಮ್ಮ ಮಗನಿಗೆ ರಾಹುಲ್ ಎಂದು ಇಡುತ್ತಾರೆ ಆದರೆ ನಂತರ ತಿಳಿಯುತ್ತದೆ ಅವರ ಮಗನ ಹೆಸರು ರೋಹನ್ ಎಂದು. ರಾಹುಲ್ ಅವರಿಗೆ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಇರುತ್ತದೆ. ಇವರ ತಂದೆ ಮಗನ ಕ್ರಿಕೆಟ್ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಾರೆ. ಕಾಲೇಜ್ ದಿನಗಳಲ್ಲಿ ಮಧ್ಯಾಹ್ನದ ಕ್ಲಾಸ್ ಬಂಕ್ ಮಾಡಿ ಕ್ರಿಕೆಟ್ ಆಡುತ್ತಿದ್ದರು ಅವರ ಪ್ರತಿಭೆಯನ್ನು ಮೊದಲು ಗುರುತಿಸಿದವರು ಕೋಚ್ ಜಯರಾಜ್ ಅವರು ಉತ್ತಮ ಮಾರ್ಗದರ್ಶನ ನೀಡುತ್ತಾರೆ. ರಾಹುಲ್ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಸೆಂಚುರಿ ಬಾರಿಸುತ್ತಾರೆ. ಪಿಯುಸಿ ಮುಗಿದ ನಂತರ ಬೆಂಗಳೂರಿಗೆ ಬರುತ್ತಾರೆ ಅಲ್ಲಿ ಬಹಳ ಸಮಸ್ಯೆಗಳು ಎದುರಾಗುತ್ತದೆ ಆದರೂ ಪರಿಶ್ರಮ, ತಾಳ್ಮೆಯಿಂದ ಕ್ರಿಕೆಟ್ ಹಾಗೂ ವಿದ್ಯಾಭ್ಯಾಸವನ್ನು ಸಮತೋಲನವಾಗಿ ನೋಡಿಕೊಳ್ಳುತ್ತಾರೆ. ಇವರ ಬ್ಯಾಟಿಂಗ್ ಶೈಲಿ ನೋಡಿ ವೀಕ್ಷಕರು ಮತ್ತೊಬ್ಬ ರಾಹುಲ್ ಕರ್ನಾಟಕದಲ್ಲಿ ಉದಯವಾದ ಎಂದು ಹೊಗಳಿದರು. ರಣಜಿ ತಂಡಕ್ಕೆ ರಾಹುಲ್ ಆಯ್ಕೆಯಾಗುತ್ತಾರೆ.

ನಂತರ ಕೆ.ಎಲ್ ರಾಹುಲ್ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಗೆ ಆಯ್ಕೆಯಾಗುತ್ತಾರೆ. ಕಿಂಗ್ಸ್ ಪಂಜಾಬ್ ತಂಡ ಹನ್ನೊಂದು ಕೋಟಿಯನ್ನು ಕೊಟ್ಟು ಕೆ.ಎಲ್ ರಾಹುಲ್ ಅವರನ್ನು ಖರೀದಿಸುತ್ತದೆ. ಪಂಜಾಬ್ ತಂಡದ ಪರ ಆಡಿ 14 ಬಾಲ್ ಗಳಲ್ಲಿ 50 ರನ್ ಬಾರಿಸಿ ದಾಖಲೆ ಬರೆಯುತ್ತಾರೆ. ನಂತರ ರಾಹುಲ್ ಐಪಿಎಲ್ ನ ಬಹುಬೇಡಿಕೆಯ ಕ್ರಿಕೆಟರ್ ಆಗಿ ಮಿಂಚುತ್ತಾರೆ. ಪಂಜಾಬ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸತತ ಪರಿಶ್ರಮದಿಂದ ಸಣ್ಣ ವಯಸ್ಸಿಗೆ ಕ್ರಿಕೆಟ್ ಪ್ರಪಂಚದಲ್ಲಿ ಹೆಸರು ಮಾಡಿದ ಕನ್ನಡಿಗ ಮತ್ತಷ್ಟು ಹೆಸರು ಗಳಿಸಲಿ ಎಂದು ಹಾರೈಸೋಣ.

Leave A Reply

Your email address will not be published.