ಹಾಸ್ಯ ನಟ ರಾಜು ತಾಳಿಕೋಟೆ ಇವರು ಕೊರೋನದಿಂದ ಲಾಕ್ ಡೌನ್ ಆದ ಸಮಯದಲ್ಲಿ ಏನು ಮಾಡುತ್ತಿದ್ದರು ಹಾಗೂ ಕೊರೋನಾ ಬಗ್ಗೆ ಅವರ ವಿಚಾರಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಹಾಸ್ಯನಟ ರಾಜು ತಾಳಿಕೋಟೆ ಅವರು ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಒಂದು ಹಳ್ಳಿಯವರಾಗಿದ್ದು 2 ಎಕರೆ ಜಮೀನನ್ನು ಹೊಂದಿದ್ದಾರೆ. ಇವರು ಶೂಟಿಂಗ್ ಸಮಯದಲ್ಲಿ ಬೆಂಗಳೂರು, ಮೈಸೂರಿನಲ್ಲಿ ಇರುತ್ತಿದ್ದರು ಕೆಲಸಗಾರರು ಜಮೀನನ್ನು ನೋಡಿಕೊಳ್ಳುತ್ತಿದ್ದರು ಲಾಕಡೌನ್ ನಿಂದ ರಾಜು ತಾಳಿಕೋಟೆ ಅವರು ತಮ್ಮ ಊರಿಗೆ ಬಂದು ಹೊಲದಲ್ಲಿ ದ್ರಾಕ್ಷಿ, ನಿಂಬೆ, ತೊಗರಿ ಬೆಳೆಯುತ್ತಾರೆ ಅಲ್ಲದೇ ಅವರದೆ ಮೇಕೆ, ಕುರಿಗಳಿವೆ ಅವುಗಳನ್ನು ಮೇಯಿಸಿ ಕೃಷಿಯಲ್ಲಿ ತೊಡಗಿದ್ದಾರೆ. ಕೊರೋನದಿಂದ ಕನ್ನಡ ಚಿತ್ರರಂಗ ನಷ್ಟದಲ್ಲಿದ್ದು ಕಲಾವಿದರು ಬಹಳ ಕಷ್ಟದಲ್ಲಿದ್ದಾರೆ ಎಂದು ಹೇಳುತ್ತಾ ಕಲಾವಿದರ ಕಡೆ ಸರ್ಕಾರ ಗಮನ ಹರಿಸಬೇಕು ಸರ್ಕಾರ 2,000ರೂ ಮಾತ್ರ ಹಾಕಿದೆ ಉಳಿದವರಿಗೆ ಆಟೋ ರಿಕ್ಷಾ ಡ್ರೈವರ್ಸ್ ಅವರಿಗೆಲ್ಲ 5,000ರೂ ಹಾಕಿದೆ ಎಂದು ಹೇಳಿದ್ದಾರೆ.

ರಾಜು ತಾಳಿಕೋಟೆ ಅವರ ಕೆಲವು ಸಿನಿಮಾಗಳು ಚಿತ್ರೀಕರಣ ಆಗಿದೆ ಇನ್ನೂ ಕೆಲವು ಸಿನಿಮಾಗಳು ಡಬ್ಬಿಂಗ್ ಹಂತದಲ್ಲಿದೆ. ರಮೇಶ್ ಅರವಿಂದ್ ಅವರ ಹಂಡ್ರೆಡ್ ಸಿನಿಮಾಕ್ಕೆ ಡಬ್ಬಿಂಗ್ ರಾಜು ತಾಳಿಕೋಟೆ ಮಾಡಿದ್ದಾರೆ. ಕುಡುಕರ ಕಿರಿಕ್ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಇವರ ಪತ್ನಿ, ಮಗ ಇಡೀ ಕುಟುಂಬದವರು ಕಲಾವಿದರಾಗಿದ್ದಾರೆ. ಇವರು ಕೃಷಿಗೆ ಮೊದಲ ಪ್ರಾಧಾನ್ಯತೆ ಕೊಟ್ಟು ನಂತರ ಅಭಿನಯ ಮಾಡುತ್ತಾರೆ. ನಗು ಮನುಷ್ಯನಿಗೆ ದಿವ್ಯವಾದ ಔಷಧ, ಆಯುಷ್ಯ ಹೆಚ್ಚುತ್ತದೆ ಎಲ್ಲರೂ ನಗಬೇಕು ಎಂದು ರಾಜು ತಾಳಿಕೋಟೆ ಹೇಳಿದ್ದಾರೆ. ಸರ್ಕಾರ ಈ ಸಲದ ರಾಜ್ಯೋತ್ಸವ ಪ್ರಶಸ್ತಿಯನ್ನು ರಂಗಭೂಮಿ ಕಲಾವಿದರಿಗೆ ಕೊಟ್ಟಿಲ್ಲ ಇದು ನನಗೆ ಬಹಳ ನೋವು ತಂದಿದೆ. ಮುಂದಿನ ದಿನಗಳಲ್ಲಿ ಕಲಾವಿದರನ್ನು ಗುರುತಿಸಿ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *