ಹಳ್ಳಿಯಲ್ಲೇ ಇದ್ದುಕೊಂಡು ಮಾಡಬಹುದಾದ ಈ 10 ಬಿಸಿನೆಸ್ ಬಗ್ಗೆ ತಿಳಿದುಕೊಳ್ಳಿ

0 5

ಎಷ್ಟೋ ಜನ ನೌಕರಿಯನ್ನು ಹುಡುಕಿಕೊಂಡು ನಗರಗಳಿಗೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿ ಇದ್ದುಕೊಂಡು ಎಷ್ಟೋ ಉದ್ಯೋಗಗಳನ್ನು ಮಾಡಬಹುದು. ಹಾಗೆಯೇ ಹಳ್ಳಿಯಲ್ಲಿ ಖರ್ಚು ಕಡಿಮೆ. ನೀರಿಗೆ ಹಾಗೂ ಅನೇಕ ಮೂಲ ಸೌಕರ್ಯಗಳಿಗೆ ಬಾಡಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.  ಆದರೆ ನಗರಗಳಲ್ಲಿ ಪ್ರತಿಯೊಂದಕ್ಕೂ ಬಾಡಿಗೆ ಕಟ್ಟಬೇಕಾಗುತ್ತದೆ. ಆದರೆ ನಾವು ಇಲ್ಲಿ ಹಳ್ಳಿಯಲ್ಲಿ ಮಾಡುವ ಬಿಸನೆಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹಳ್ಳಿಯಲ್ಲಿ ಸೂರ್ಯಕಾಂತಿ ಬೀಜ, ಕಡಲೆಬೀಜ ಮುಂತಾದವುಗಳ ಎಣ್ಣೆಯನ್ನು ಮಾಡಿ ಮಾರಾಟ ಮಾಡಬೇಕು. ಏಕೆಂದರೆ ನಗರದ ಜನರು ಹಳ್ಳಿಯ ಉತ್ಪನ್ನಗಳನ್ನು ಬಹಳ ಇಷ್ಟಪಡುತ್ತಾರೆ. ಹಾಗೆಯೇ ಜನರು ಒಳ್ಳೆಯ ಗುಣಮಟ್ಟದ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಹಾಗೆಯೇ ಹಳ್ಳಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಜಾಮ್ ಆಗಿರಬಹುದು ಹಾಗೆಯೇ ಜ್ಯೂಸ್ ಗಳು ಆಗಿರಬಹುದು. ಇವು ಒಳ್ಳೆಯ ಲಾಭವನ್ನು ನೀಡುತ್ತವೆ ಎಂದು ಹೇಳಬಹುದು.

ನಂತರದಲ್ಲಿ ಹಳ್ಳಿಯಲ್ಲಿ ಬೆಳೆಯುವ ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಂಡು ಹೋಗಿ ನಗರಗಳಲ್ಲಿ ಮಾರಾಟ ಮಾಡಬೇಕು. ಇದರಿಂದ ನಗರದ ಜನರು ತಾಜಾ ಇರುವ ಇವುಗಳನ್ನು ಇಷ್ಟಪಡುತ್ತಾರೆ. ಹಾಗೆಯೇ ಹಳ್ಳಿಗಳಲ್ಲಿ ಗಾರ್ಡನ್ ಉಪಾಯಗಳನ್ನು ಮಾಡಿ ನಗರದ ಮನೆಗಳಿಗೆ ತಂದು ಸೆಟ್ ಮಾಡಬಹುದು. ಹೆಚ್ಚಾಗಿ ಎಲ್ಲರೂ ತಮ್ಮ ಮನೆಯ ಎದುರು ಗಾರ್ಡನ್ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೀಗೆ ಮಾಡುವುದರಿಂದ ಕೂಡ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯಬಹುದು.

ಹಾಗೆಯೇ ಮೊಲ ಸಾಕಾಣಿಕೆ ಕೂಡ ಮಾಡಬಹುದು. ಮೊಲಗಳನ್ನು ಜನರು ಇಷ್ಟಪಡುತ್ತಾರೆ. ಹಾಗಾಗಿ ಇದು ಸಹ ಹಳ್ಳಿಯ ಉದ್ಯೋಗಗಳಲ್ಲಿ ಒಳ್ಳೆಯ ಪಾತ್ರ ವಹಿಸುತ್ತದೆ ಎಂದು ಹೇಳಬಹುದು. ಹಾಗೆಯೇ ಗುಲಾಬಿ ಗಿಡಗಳನ್ನು ಬೆಳೆಯಬೇಕು. ನಗರಗಳಲ್ಲಿ ಗುಲಾಬಿ ಹೂಗಳಿಗೆ ಒಳ್ಳೆಯ ಬೆಲೆ ಇದೆ. ಯಾವುದಾದರೂ ಸಮಾರಂಭ ನಡೆದರೆ ಗುಲಾಬಿ ಹೂವುಗಳು ಬೇಕೆ ಬೇಕು. ಆದ್ದರಿಂದ ಹಳ್ಳಿಯಲ್ಲಿ ಮಾಡಲು ಹಲವಾರು ಉದ್ಯೋಗಗಳಿವೆ. ಅವುಗಳನ್ನು ಮಾಡಿ ಕಡಿಮೆ ಬಂಡವಾಳದಲ್ಲಿ ಒಳ್ಳೆಯ ಲಾಭವನ್ನು ಪಡೆಯಬಹುದು.

Leave A Reply

Your email address will not be published.