Ultimate magazine theme for WordPress.

ಒಂದೇ ಮಷಿನ್ 2 ತರಹದ ಬಿಸಿನೆಸ್ ಮಾಡಬಹುದು ಒಳ್ಳೆ ಡಿಮ್ಯಾಂಡ್ ಇದೆ

0 3

ಮನುಷ್ಯನಿಗೆ ಬದುಕಬೇಕು ಎಂದರೆ ಒಂದಲ್ಲಾ ಒಂದು ಉದ್ಯೋಗ ಬೇಕೇ ಬೇಕು. ಮಹಿಳೆಯರಿಗೆ ಉದ್ಯೋಗ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಪುರುಷರಿಗೆ ಉದ್ಯೋಗ ಬಹಳ ಅವಶ್ಯಕವಾಗಿದೆ. ಹಣ ಗಳಿಸಬೇಕು ಎಂದರೆ ಹಲವಾರು ಉದ್ಯೋಗಗಳಿವೆ. ಹಾಗೆಯೇ ಅದರಲ್ಲಿ ಬಿಸನೆಸ್ ಕೂಡ ಒಂದು. ಆದ್ದರಿಂದ ನಾವು ಇಲ್ಲಿ ಪಾನಿಪುರಿ ಬಿಸನೆಸ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅದರಲ್ಲೂ ಈಗ ಕೊರೊನಾ ನಂತರ ಪಾನಿಪುರಿ ಒಳ್ಳೆಯ ಬೆಲೆಯನ್ನು ಹೊಂದಿದೆ. ಪಾನಿಪುರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಗೋಭಿ ಮಂಚೂರಿ ಕೆಲವರು ಇಷ್ಟಪಡದಿದ್ದರೂ ಪಾನಿಪುರಿಯನ್ನು ಇಷ್ಟಪಡುತ್ತಾರೆ. ಪಾನಿಪುರಿಯನ್ನು ಬಿಸನೆಸ್ ಮಾಡುವ ಮೊದಲು ಪುರಿಯನ್ನು ತಯಾರಿ ಮಾಡಿಕೊಳ್ಳಬೇಕು. ಇದಕ್ಕೆ ವೆಂಡಿಂಗ್ ಮಶಿನ್ ನ್ನು ಬಳಸಲಾಗುತ್ತದೆ. ಇದರ ಬೆಲೆ ಸುಮಾರು 50,000 ರೂಪಾಯಿಗಳು ಇದೆ. ಹಾಗೆಯೇ ಇದರ ಜೊತೆಗೆ ಪಾನಿ ವೆಂಡಿಂಗ್ ಮಶಿನ್ ಕೂಡ ಬೇಕಾಗುತ್ತದೆ.

ಇದರ ಬೆಲೆ ಸುಮಾರು 30,000 ದಿಂದ 1,00,000ವರೆಗೆ ಇದೆ. ಬಂಡವಾಳದ ಪ್ರಮಾಣದ ಮೇಲೆ ಮಶಿನ್ ನ್ನು ಖರೀದಿ ಮಾಡಬಹುದು. ಮೊದಲು ರವೆ, ಮೈದಾಹಿಟ್ಟು ಮತ್ತು ಉಪ್ಪನ್ನು ಸೇರಿಸಿ ಮಶಿನ್ ಒಳಗೆ ಇಡಬೇಕು. ನಂತರ ಮಿಶನ್ ನಿಂದ ವೃತ್ತಾಕಾರವಾಗಿ ಪುರಿಗಳು ಬರುತ್ತವೆ. ನಂತರ ಈ ಪುರಿಗಳನ್ನು ತೆಗೆದುಕೊಂಡು ಎಣ್ಣೆಯಲ್ಲಿ ಕರಿಯಬೇಕು. ನಂತರದಲ್ಲಿ ಪುರಿಗೆ ಹಾಕುವ ಮಸಾಲಾ ಪದಾರ್ಥಗಳನ್ನು ಹಾಕಬೇಕು.

ನಂತರದಲ್ಲಿ ಪಾನಿ ಮಶಿನ್ ನಲ್ಲಿ ಆಯ್ಕೆಗಳು ಇರುತ್ತವೆ. ಸಿಹಿ ಬೇಕಾದರೆ ಸಿಹಿ ಹಾಗೆಯೇ ಖಾರಾ ಬೇಕಾದರೆ ಖಾರ ಒಂದು ಬಟನ್ ಒತ್ತಿದರೆ ಸಾಕು. ಪಾನಿಯು ಪುರಿಯ ಒಳಗೆ ಬೀಳುತ್ತದೆ. ಇದನ್ನು ಗ್ರಾಹಕರಿಗೆ ನೀಡಬಹುದು. ಹಾಗೆಯೇ ಪುರಿಗಳನ್ನು ಮಾಡಿ ಒಣಗಿಸಿ ನಂತರ ಇದನ್ನು ಪ್ಯಾಕೆಟ್ ಆಗಿ ಮಾಡಿ ಮಾರಾಟ ಮಾಡಬಹುದು. ಇದನ್ನು ಪಾನಿಪುರಿಯನ್ನು ಮಾಡುವವರಿಗೆ ಅಥವಾ ಸೂಪರ್ ಮಾರ್ಕೆಟ್ ಗಳಿಗೆ ನೀಡಬಹುದು. ಈ ಬಿಸನೆಸ್ ನ್ನು ಸಂಜೆ 3 ತಾಸು ಮಾಡಿದರೆ ಸಾಕು ಒಳ್ಳೆಯ ಲಾಭ ಪಡೆಯಬಹುದು.

Leave A Reply

Your email address will not be published.