ಕನ್ನಡ ಚಿತ್ರರಂಗದಲ್ಲಿ ಹಲವಾರು ನ ಖಳನಟರು ಈಗಾಗಲೇ ಬಂದು ಹೋಗಿದ್ದಾರೆ ಮತ್ತು ಈಗಲೂ ಕೂಡ ಇದ್ದಾರೆ. ಆದರೆ ಇಂದಿಗೂ ಸಹ ನೆನಪಿನಲ್ಲಿ ಉಳಿಯುವಂತಹ ಕೆಲವು ಖಳನಟರು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಮನೆ ಮಾಡಿದ್ದಾರೆ. ಅಂತಹ ಖಳನಟರಲ್ಲಿ ವಜ್ರಮುನಿ ಕೂಡ ಒಬ್ಬರು ತನ್ನದೇ ಆದ ವಿಶೇಷ ವಿಶಿಷ್ಟ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಗ್ರೇಟ್ ವಿಲನ್ ಆಗಿ ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಭಯವನ್ನು ಹುಟ್ಟಿಸುತ್ತಿದ್ದ ನಟ ವಜ್ರಮುನಿ ಅವರು. ಉತ್ತಮ ನಟನೆಗಾಗಿ ವಜ್ರಮುನಿ ಅವರು ನಟಭಯಂಕರ ಎಂಬ ಬಿರುದನ್ನು ಸಹ ಪಡೆದಿದ್ದರು. ವಜ್ರಮುನಿ ಅವರ ಸಿನಿಮಾಗಳಲ್ಲಿ ಮಾತ್ರ ಕೆಟ್ಟದಾಗಿ ನಟಿಸಿ ಜನರಿಂದ ಹಿಡಿ ಶಾಪ ವನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ ವಜ್ರಮುನಿ ಅವರ ನಿಜವಾದ ವ್ಯಕ್ತಿತ್ವ ತಿಳಿದಾಗ ಅವರ ಬಗ್ಗೆ ನಿಜಕ್ಕೂ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಹಾಗಾದ್ರೆ ವಜ್ರಮುನಿ ಅವರು ನಿಜವಾದ ವ್ಯಕ್ತಿತ್ವ ಅವರ ಗುಣ ಎಂತಹದು ಅವರ ಮಗ ಯಾರು ಅನ್ನೋದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವಜ್ರಮುನಿ ಅವರ ನಿಜಜೀವನದಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ನಾವು ಕೇಳಿದಾಗ ನಿಜವಾಗಿಯೂ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಯಾಕೆಂದರೆ ವಜ್ರಮುನಿ ಅವರು ಅತ್ಯಾ-ಚಾರದ ಸೀನ್ಗಳಲ್ಲಿ ನಟಿಸುವ ಸಂದರ್ಭಗಳಲ್ಲಿ ನಟಿಸುವುದಕ್ಕೂ ಮೊದಲು ಆ ನಟಿಯರಿಗೆ ಕ್ಷಮೆ ಕೇಳುತ್ತಿದ್ದರು. ನಾನು ನನ್ನ ಪಾತ್ರಕ್ಕೆ ತಕ್ಕಂತೆ ನಟಿಸುವ ಮೂಲಕ ಆ ಪಾತ್ರಕ್ಕೆ ನಾನು ನ್ಯಾಯವನ್ನು ಒದಗಿಸಬೇಕಾಗುತ್ತದೆ ಹಾಗಾಗಿ ದಯವಿಟ್ಟು ನನ್ನ ಕ್ಷಮಿಸಿ ಎಂದು ಹೇಳಿಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲದೆ ವಜ್ರಮುನಿ ಅವರಿಗೆ ಹೆಣ್ಣುಮಕ್ಕಳ ಮೇಲೆ ಅಗಾಧವಾದ ಗೌರವ ಇದ್ದಿತ್ತು. ಇದರ ಜೊತೆಗೆ ದಾನ ಧರ್ಮ ಮಾಡುವುದರಲ್ಲಿ ವಜ್ರಮುನಿ ಅವರದ್ದುಎತ್ತಿದ ಕೈಯಾಗಿತ್ತು. ಆದರೆ ವಜ್ರಮುನಿ ಅವರ ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಕೊನೆಗೆ ನರಳಿ ನರಳಿ ಕಣ್ಮುಚ್ಚಿದರು. ಇಂತಹ ಅದ್ಭುತವಾದ ನಟನೆಗೆ ಒಬ್ಬ ಮಗ ಕೂಡ ಇದ್ದಾರೆ ಅನ್ನೋದು ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯ.

ವಜ್ರಮುನಿ ಅವರ ಮಗ ವಿಶ್ವನಾಥ್ ವಜ್ರಮುನಿ ಅವರು. ಅವರು ಕೂಡ ತಂದೆಯಂತೆ ಮುಂದೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಲಿಲ್ಲ ಕಾರಣ ತಮ್ಮ ತಂದೆಯ ಕಾಲಕ್ಕೆ ಈ ಸಿನಿಮಾರಂಗ ಸಾಕು, ಅವರು ಪಟ್ಟ ಕಷ್ಟವನ್ನು ನಾನು ಕಣ್ಣಾರೆ ನೋಡಿದ್ದೇನೆ ಆದ್ದರಿಂದ ನನಗೆ ಈ ಸಿನಿಮಾರಂಗ ಬೇಡ ಇಂದು ತಮ್ಮ ಜಮೀನಿನಲ್ಲಿ ಈಗ ವ್ಯವಸಾಯವನ್ನು ಮಾಡಿಕೊಂಡು ಭೂಮಿ ತಾಯಿಯ ಸೇವೆಯನ್ನು ಮಾಡುತ್ತಿದ್ದಾರೆ. ನನಗೆ ವ್ಯವಸಾಯ ಮಾಡುವುದರಲ್ಲಿಯೇ ತೃಪ್ತಿ ಸಿಕ್ಕಿದೆ ಅಂತಲೂ ಹೇಳುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇವೆ ಮತ್ತು ಬಡವರಿಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಾ ವಜ್ರಮುನಿ ಅವರ ಹೆಸರನ್ನು ಚಿರಸ್ಥಾಯಿ ಮಾಡಿದ್ದಾರೆ.

By

Leave a Reply

Your email address will not be published. Required fields are marked *