ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಅದೆಷ್ಟು ಬಾರಿ ನಿಜವಾಗಿದೆ. ಈ ಮಾತು ಕರ್ಜೂರಕ್ಕೇ ಕೂಡ ಅನ್ವಯ ಆಗುತ್ತದೆ. ಖರ್ಜೂರ ನೋಡುವುದಕ್ಕೆ ಬಹಳ ಚಿಕ್ಕದಾದ ಹಣ್ಣು ಆದರೆ ಇದರ ಉಪಯೋಗ ಮಾತ್ರ ಬಹಳ ಮಹತ್ತರವಾದದ್ದು. ನೈಸರ್ಗಿಕವಾಗಿ ಅತ್ಯಂತ ಸಿಹಿಯನ್ನು ಹೊಂದಿರುವ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದಿರುತ್ತದೆ. ಅತಿ ಹೆಚ್ಚು ನಾರಿನಂಶವನ್ನು ಪಡೆದುಕೊಂಡಿರುವ ಈ ಹಣ್ಣು ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳುಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಪ್ರತಿದಿನ ಕೇವಲ ಮೂರು ಖರ್ಜೂರದ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್, ನಾರಿನ ಅಂಶ, ಜೀವಸತ್ವವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ರಕ್ತಹೀನತೆ , ರಕ್ತದ ಒತ್ತಡ , ಕೊಲೆಸ್ಟ್ರಾಲ್ ಸೇರಿದಂತೆ ಇನ್ನೂ ಇತರ ರೋಗಗಳನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಪ್ರತಿದಿನ ಖರ್ಜೂರ ಸೇವಿಸುವುದರಿಂದ ಮಲಬದ್ಧತೆ, ಹೃದಯದ ಅಸ್ವಸ್ಥತೆ, ಕರುಳಿನ ತೊಂದರೆ, ಅತಿಸಾರ ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ಈ ರೋಗಗಳ ಪರಿಹಾರ ಮಾಡುವಲ್ಲಿ ಖರ್ಜೂರದ ಪಾತ್ರ ಏನು ಅನ್ನುುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ಕರ್ಜೂರವನ್ನು ಸೇವಿಸುವುದರಿಂದ ಗುಣಮುಖರಾಗಬಹುದು. ಪ್ರತಿ 100 ಗ್ರಾಂ ಕರ್ಜೂರ ದಲ್ಲಿ ಶೇಕಡಾ 0.90 ಗ್ರಾಂ ಅಷ್ಟು ಕಬ್ಬಿಣ ಅಂಶ ಇದೆ. ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆ ಸೋಂಕನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸುತ್ತದೆ. ಇನ್ನು ಖರ್ಜೂರದ ಹಣ್ಣು ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವ ವಿಟಮಿನ್ ಹಾಗೂ ಯೂತೆರಿಯನ್ ಗಳನ್ನು ಒಳಗೊಂಡಿದೆ. ಎರಡು ವಿಟಮಿನ್ಗಳು ರೇಟಿನ , ಅಕ್ಷಿಪಟಲಕ್ಕೇ ಬರುವಂತಹ ತೊಂದರೆಗಳನ್ನು ಸಹ ನಿವಾರಣೆ ಮಾಡಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕರ್ಜೂರ ಅತಿಸಾರವನ್ನು ನಿಯಂತ್ರಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ ಪ್ರತಿದಿನ ಮೂರ್ಖರು ನಿಯಮಿತವಾಗಿ ಸೇವಿಸಿದರೆ ಕಾರಣ ಎಲ್ಲಾ ಸಮಸ್ಯೆಗಳು ಸಹ ದೂರವಾಗುತ್ತದೆ.

ಪ್ರತಿದಿನ ಮಲಗುವ ಮುನ್ನ ಖರ್ಜೂರವನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿಟ್ಟು ಅದನ್ನು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ಕರುಳಿನ ಕಾರ್ಯನಿರ್ವಹಣೆ ಸರಾಗವಾಗುತ್ತದೆ ಇದರ ಜೊತೆಗೆ ಮಲಬದ್ಧತೆ ಕೂಡ ಕಡಿಮೆಯಾಗುತ್ತದೆ. ಇನ್ನು ಗರ್ಭಿಣಿ ಸ್ತ್ರೀಯರು ಹೆರಿಗೆಗೆ ಒಂದು ತಿಂಗಳು ಮೊದಲು ಖರ್ಜೂರವನ್ನು ಮಿತವಾಗಿ ಸೇವಿಸುವುದರಿಂದ ಹೆರಿಗೆ ಸರಾಗವಾಗಿ ನಡೆಯುತ್ತದೆ ಹಾಗೂ ನೋವು ಕೂಡ ಅಷ್ಟೊಂದು ಇರುವುದಿಲ್ಲ. ರಕ್ತಸ್ರಾವದ ತೀವ್ರತೆ ಕೂಡ ಕಡಿಮೆಯಾಗುತ್ತದೆ. ಖರ್ಜೂರದಲ್ಲಿ ಹಲವಾರು ರೀತಿಯ ಆರೋಗ್ಯಕರ ಪೋಷಕಾಂಶಗಳು ತುಂಬಿರುತ್ತವೆ. ಖಾಲಿ ಹೊಟ್ಟೇಲಿ ಕರ್ಜೂರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹತೋಟಿಯಲ್ಲಿರುತ್ತದೆ. ಜೊತೆಗೆ ಕರುಳಿನ ಕೆಲಸವನ್ನು ಸಹ ನಿಯಂತ್ರಣ ಮಾಡಬಹುದು. ಇದರಿಂದ ತೂಕದಲ್ಲಿ ಸಹ ಬದಲಾವಣೆ ಉಂಟಾಗುತ್ತದೆ. ಹೃದಯದ ಸಮಸ್ಯೆ ಇರುವವರಿಗೆ ಪ್ರತಿದಿನ ಕರ್ಜೂರವನ್ನು ತಿನ್ನಲು ತಿಳಿಸಲಾಗುತ್ತದೆ. ಪ್ರತಿಯನ್ನು ಕರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೃದಯಾಘಾತ ಆಗುವುದನ್ನು ತಡೆಗಟ್ಟಬಹುದು. ಐದರಿಂದ ಆರು ಖರ್ಜೂರವು 80 ಮಿಲಿ ಗ್ರಾಂ ಮ್ಯಾಗ್ನಿಷಿಯಂ ಅಂಶವನ್ನು ಹೊಂದಿರುತ್ತದೆ.

ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಪ್ರತಿದಿನ 370 ಮಿಲಿಗ್ರಾಂ ಮೆಗ್ನೀಷಿಯಂ ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕರ್ಜೂರ ಅಧಿಕ ಪ್ರಮಾಣದ ಪೊಟ್ಯಾಷಿಯಂ ಅನ್ನು ಸಹ ಹೊಂದಿರುವುದರಿಂದ ಪಾರ್ಶುವಾಯು ಬರುವುದನ್ನು ಸಹ ತಡೆಗಟ್ಟಬಹುದು. ಖರ್ಜೂರದಲ್ಲಿ ರಂಜಕವು ಸಮೃದ್ಧವಾಗಿರುತ್ತದೆ ಹಾಗಾಗಿ ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಎರಡರಿಂದ ಮೂರು ಖರ್ಜೂರವನ್ನು ತಿನ್ನುವುದನ್ನು ರೂಡಿಸಿಕೊಂಡರೆ ಕೂದಲ ಬುಡ ದೃಢ ವಾಗುವಂತೆ ನೋಡಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಬಿ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುವ ಮೂಲಕ ಕೂದಲು ಉದುರುವ ಸಮಸ್ಯೆಯನ್ನು ಸಹ ನಿವಾರಣೆ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಖರ್ಜೂರದಿಂದ ನಮ್ಮ ದೇಹಕ್ಕೆ ಉಪಯೋಗಗಳು ಹಲವಾರು ಇವೆ ಅಂತ ಹೇಳಬಹುದು.

By

Leave a Reply

Your email address will not be published. Required fields are marked *