Ultimate magazine theme for WordPress.

ಮೆಣಸಿನಕಾಯಿ ಬೆಳೆದು ಹೆಚ್ಚು ಲಾಭ ಕಂಡ ರೈತ

0 1

ಬಳ್ಳಾರಿ ಜಿಲ್ಲೆಯ ಕೆಲವು ರೈತರು ಗುಂಟೂರು ಜಾತಿಯ ಮೆಣಸಿನಕಾಯಿಯನ್ನು ಬೆಳೆದು ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾ ಇದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಕೊಡುವ ಬೆಳೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಸಾಂಬಾರು ಪದಾರ್ಥಗಳನ್ನು ಬೆಳೆಯುವಲ್ಲಿ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡ ದೇಶ. ಅದೇ ರೀತಿ ಜಗತ್ತಿನಲ್ಲಿ ಅತೀ ಹೆಚ್ಚು ಮೆಣಸಿನಕಾಯಿಯನ್ನು ಬೆಳೆಯುವ ದೇಶ ಎಂದರೆ ಅದೂ ಕೂಡ ಭಾರತ ದೇಶ. ಅಂದ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳು ಮೆಣಸಿನಕಾಯಿಯನ್ನು ಬೆಳೆಯಲು ಉತ್ತಮ ವಾತಾವರಣವನ್ನು ಹೊಂದಿರುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತದೆ. ಇಲ್ಲಿನ ಒಣ ಮೆಣಸಿನಕಾಯಿ ಹೆಚ್ಚು ಪ್ರಸಿದ್ಧಿ ಪಡೆದಿರುವುದರಿಂದ ಜಗತ್ತಿನಾದ್ಯಂತ ರಫ್ತು ಮಾಡಲಾಗುತ್ತದೆ. ಬಳ್ಳಾರಿ ಅಂತೂ ಆಂಧ್ರಪ್ರದೇಶದ ಗಡಿ ಭಾಗದ ಜನರು ಪಾರಂಪರಿಕವಾಗಿ ಮೆಣಸಿನಕಾಯಿ ಬೆಳೆಯನ್ನೇ ಬೆಳೆದುಕೊಂಡು ಬಂದಿದ್ದಾರೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಬಂಗಾರಂ ಹೆಸರಿನ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ಮತ್ತು ಲಾಭವನ್ನು ಪಡೆಯುತ್ತಿದ್ದಾರೆ.

ಪ್ರತೀ ವರ್ಷ ಸುಮಾರು 40 ಎಕರೆ ಜಮೀನಿನಲ್ಲಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಓಂದು ಎಕರೆ ಜಮೀನಿನಿನಲ್ಲಿ ಪ್ರಾಯೋಗಿಕವಾಗಿ ಬಂಗಾರಮ್ ತಳಿಯ ಮೆಣಸಿನಕಾಯಿಯನ್ನು ಬೆಳೆದಿದ್ದು ಉತ್ತಮ ಇಳುವರಿಯನ್ನು ಪಡೆದಿದ್ದಾರೆ. ಬಂಗಾರಮ್ ತಳಿಯ ಮೆಣಸಿನಕಾಯಿ ಪ್ರತಿಷ್ಠಿತ ಹೈಬ್ರೀಡ್ ಸೀಡ್ಸ್ ತಯಾರಿಕೆ ಕಂಪನಿಯಾದ ಕಲಶ ಕಂಪನಿಯ ಉತ್ಪಾದನೆ ಆಗಿಫ್ದು ಪ್ರಸ್ತುತ ದಿನಗಳಲ್ಲಿ ರಾಯಚೂರು, ಕೊಪ್ಪಳ , ದಾವಣಗೆರೆ ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.

ಬಂಗಾರಮ್ ಮೆಣಸಿನ ಬೀಜ ಇಷ್ಟೊಂದು ಪ್ರಸಿದ್ಧಿಯನ್ನು ಪಡೆಯಲು ಕಾರಣ ರೈತರು ಇಟ್ಟಿರುವ ನಂಬಿಕೆ. ಉತ್ತಮ ಫಲಿತಾಂಶವನ್ನು ಹೊಂದಿರುವ ಬಂಗಾರಮ್ ಬೀಜವು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಚುಕ್ಕೆ ರೋಗ ಕೀಟ ಬಾಧೆಯಿಂದ ಮುಕ್ತವಾಗಿದೆ. ಆ ಕಾರಣಕ್ಕೆ ಈ ಮೆಣಸಿನಕಾಯಿಗೆ ಹೆಚ್ಚು ರಸಗೊಬ್ಬರ ಮತ್ತು ಕೀಟ ನಾಶಕಗಳನ್ನು ಹಾಕುವ ಅಗತ್ಯ ಇರುವುದಿಲ್ಲ. ಬಂಗಾರಮ್ ಮೆಣಸಿನಕಾಯಿಯು ಗುಂಟೂರು ಖ್ಯಾತಿಯ ಖಾರವನ್ನು ಹೊಂದಿದ್ದು ಮಧ್ಯ ಕರ್ನಾಟಕದ ಬಹುತೇಕ ಕಡೆ ಬೆಳೆಯಬಹುದಾಗಿದೆ. ಕಡುಗೆಂಪು ಬಣ್ಣವನ್ನು ಹೋಮಡಿರುವ ಈ ಮೆಣಸಿನಕಾಯಿಯು ನಾಲ್ಕರಿಂದ ಐದು ಇಂಚು ಉದ್ದವನ್ನು ಹೊಂದಿರುತ್ತದೆ. ಮೆಣಸಿನಕಾಯಿಯಲ್ಲಿ ಸರಿಸುಮಾರು 130ಕ್ಕೂ ಹೆಚ್ಚು ಬೀಜಗಳನ್ನು ಹೊಂದಿದ್ದು ಹೆಚ್ಚು ಖಾರವನ್ನು ಹೊಂದಿರುತ್ತದೆ. ಸತ್ಯನಾರಾಯಣ ರೆಡ್ಡಿ ಎಂಬ ರೈತ ಒಂದು ಎಕರೆ ಜಮೀನಿನಲ್ಲಿ ಬಾಂಗಾರಮ್ ಮೆಣಸಿನಕಾಯಿಯನ್ನು ಬೆಳೆದಿದ್ದು 25 ಕ್ವಿಂಟಲ್ ಬೆಳೆ ಬರುವ ನಿರೀಕ್ಷೆಯಲ್ಲಿದ್ದಾರೆ.

ಪ್ರಸ್ತುತ ಗುಂಟೂರು ಜಾತಿಯ ಈ ಮೆಣಸಿನಕಾಯಿಗೆ ಕ್ವೀನ್ಟಾಲ್ ಗೆ 15ಸಾವಿರ ರೂಪಾಯಿಯವರೆಗೆ ಇದ್ದು ಸತ್ಯನಾರಾಯಣ ರೆಡ್ಡಿ ಅವರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಸಾಂಪ್ರದಾಯಕ ಕೃಷಿ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುವ ನಮ್ಮ ರೈತರು ಹೈಬ್ರೀಡ್ ಬೀಜ ಅಂದ್ರೆ ಆತಂಕ ಪಡುತ್ತಾರೆ. ನೀವು ಕೂಡ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರೆ ಅಕ್ಕ ಪಕ್ಕದ ರೈತನನ್ನು ಅಥವಾ ಕೃಷಿ ಕೇಂದ್ರದಲ್ಲಿ ಯಾವ ಬೆಳೆಯನ್ನು ಬೆಳೆಯುವುದು ಸೂಕ್ತ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ. 9606209369

Leave A Reply

Your email address will not be published.