ಈತನ ಅಕೌಂಟ್ ಗೆ 5 ಕೋಟಿ ಹಣ ಬಂದಿರುತ್ತೆ ಆದ್ರೆ ಬ್ಯಾಂಕ್ ಗೆ ಹೋಗಿ ನೊಡಿದಾಗ ಕಾದಿತ್ತು ಶಾಕ್

0 2

ಇಪ್ಪತ್ತೊಂದನೆ ಶತಮಾನಗಳಲ್ಲಿಯೂ ಅದೃಷ್ಟ ದುರಾದೃಷ್ಟಗಳ ಬಗೆಗೆ ಈಗಲೂ ನಂಬಿಕೆ ಇಟ್ಟವರೂ ಇದ್ದಾರೆ. ಅದೃಷ್ಟ ದುರಾದೃಷ್ಟಗಳು ನಿಜವಾಗಿಯೂ ಇದೆಯೋ ಇಲ್ಲವೋ ಗೊತ್ತಿಲ್ಲ. ಅದೃಷ್ಟ ಕೈ ಹಿಡಿದರೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಬಹುದು. ಅದೇ ದುರಾದೃಷ್ಟ ಹೆಗಲೇರಿದರೆ ಕೋಟ್ಯಾಧಿಪತಿಯೂ ರಾತ್ರೋರಾತ್ರಿ ಭಿಕ್ಷುಕನಾಗಿಬಿಡಬಹುದು. ಆದರೆ ಅದೃಷ್ಟ ಹಾಗೂ ದುರಾದೃಷ್ಟ ಒಟ್ಟಿಗೆ ಬಂದಾಗ ಹೇಗಿರುತ್ತದೆ ಎನ್ನುವುದಕ್ಕೆ ಇಲ್ಲಿದೆ ಒಂದು ಸಾಕ್ಷಿ. ಉತ್ತರ ಪ್ರದೇಶಕ್ಕೆ ಸೇರಿದ ಪರವಂಗಿ ಗ್ರಾಮದಲ್ಲಿ ವಾಸವಾಗಿರುವ ಹುಡುಗನ ಹೆಸರು ಶರ್ಮ. ಸೆಂಟರ್ ಅಕಾಡೆಮಿಯಲ್ಲಿ ಓದುತ್ತಿರುವ ಹುಡುಗ. ತಂದೆ ನರೇಂದ್ರ ಶರ್ಮ. ಒಂದು ದಿನ ಶರ್ಮನ ಮೊಬೈಲ್ ಗೆ ಒಂದು ಮೆಸೇಜ್ ಬರುತ್ತದೆ ಅವನ ಖಾತೆಗೆ ಐದು ಕೋಟಿ ಐವತ್ತೈದು ಲಕ್ಷದ ಐವತ್ತೈದು ಸಾವಿರ ಐದು ನೂರಾ ಐವತ್ತೈದು ರೂಪಾಯಿ ಜಮಾ ಆಗಿದೆ ಎಂದು. ಇದರಿಂದ ಗಾಬರಿಗೊಂಡ ಶರ್ಮ ತನ್ನ ತಂದೆಗೆ ವಿಷಯ ತಿಳಿಸುತ್ತಾನೆ. ನರೇಂದ್ರ ಶರ್ಮ ಅವರು ಬ್ಯಾಂಕ್ ನ ಮಿನಿ ಸ್ಟೆಟ್ಮೆಂಟ್ ತೆಗೆದು ನೋಡಿದಾಗ ಅದರಲ್ಲಿಯೂ ಅಷ್ಟೇ ಹಣವಿರುವುದಾಗಿ ತೋರಿಸುತ್ತದೆ. ಆದರೆ ಶರ್ಮನ ಖಾತೆಯಲ್ಲಿ ಒಂದು ಲಕ್ಷದ ಐವತ್ತು ಸಾವಿರ ಹಣ ಮಾತ್ರ ಇರಬೇಕಾಗಿತ್ತು. ಆದರೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಕಾಡಿ ತಲೆ ಕೆಡಿಸಿಕೊಳ್ಳುತ್ತಾರೆ.

ಸ್ವಲ್ಪ ಸಮಯ ಬಿಟ್ಟು ನೋಡುವ ಎಂದು ಸುಮ್ಮನಾಗುತ್ತಾರೆ. ಐದು ನಿಮಿಷಗಳ ನಂತರದಲ್ಲಿ ನೋಡಿದಾಗ ಶರ್ಮನ ಖಾತೆಯಲ್ಲಿ ಒಂದು ರೂಪಾಯಿಗಳು ಉಳಿದಿರುವುದಿಲ್ಲ. ಆಕಸ್ಮಿಕವಾಗಿ ಬಂದ ಹಣ ವಾಪಸ್ಸಾಗುವುದರ ಜೊತೆಗೆ ಖಾತೆಯಲ್ಲಿ ಇರಬೇಕಾಗಿದ್ದ ಒಂದು ಲಕ್ಷದ ಐವತ್ತು ಸಾವಿರವೂ ಇಲ್ಲವಾಗಿತ್ತು. ಇದನ್ನು ನೋಡಿದ ನರೇಂದ್ರ ಶರ್ಮ ಅವರಿಗೆ ಯೋಚನೆ ಶುರುವಾಗುತ್ತದೆ. ತಕ್ಷಣವೇ ಶರ್ಮನನ್ನು ಕರೆದುಕೊಂಡು ನರೇಂದ್ರ ಶರ್ಮ ಅವರು ಬ್ಯಾಂಕ್ ಗೆ ತೆರಳುತ್ತಾರೆ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಸ್.ಬಿ.ಐ ಅವರ ನಿರ್ಲಕ್ಷ್ಯ ಇದಕ್ಕೆಲ್ಲ ಕಾರಣವಾಗಿದೆ ಎಂದು. ಬೇರೆ ಯಾರಿಗೋ ಹಾಕಬೇಕಾದ ಹಣವನ್ನು ಶರ್ಮನ ಖಾತೆಗೆ ಹಾಕಿರಲಾಗುತ್ತದೆ. ಬ್ಯಾಂಕ್ ನಿರ್ಲಕ್ಷ್ಯದಿಂದ ಜಮೆಯಾದ ಆ ಹಣವನ್ನು ವಾಪಸ್ಸು ತೆಗೆದುಕೊಳ್ಳಬೇಕಾದರೆ ಶರ್ಮನ ಖಾತೆಯಲ್ಲಿ ಇದ್ದ ಹಣವನ್ನು ತೆಗೆದುಬಿಟ್ಟಿರುತ್ತಾರೆ. ನರೇಂದ್ರ ಶರ್ಮರ ಮಾತು ಕೇಳಿ ಕ್ಷಮೆ ಕೋರಿದ ಬ್ಯಾಂಕ್ ನವರು ಹಣವನ್ನು ಮರಳಿಸುತ್ತೆವೆ ಎನ್ನುತ್ತಾರೆ. ಆದರೆ ಎರಡು ದಿನ ತಡವಾಗುವುದು ಶನಿವಾರ ಆದ್ದರಿಂದ ಸೋಮವಾರ ಬೆಳಿಗ್ಗೆ ಹಣ ಖಾತೆಗೆ ಹಾಕುತ್ತೆವೆ ಎನ್ನುತ್ತಾರೆ. ಒಬ್ಬರ ನಿರ್ಲಕ್ಷ್ಯದಿಂದ ಇಂತಹ ಎಷ್ಟೋ ಜನರಿಗೆ ತೊಂದರೆ ಉಂಟಾಗುತ್ತದೆ. ಕೆಲಸದ ಸಮಯದಲ್ಲಿ ಏಕಾಗ್ರತೆ ಅಗತ್ಯವಾಗಿಬೇಕು.

Leave A Reply

Your email address will not be published.