Ultimate magazine theme for WordPress.

ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಬೆಲೆ ಬಾಳುವ ಮುತ್ತುರತ್ನಗಳನ್ನು ರಸ್ತೆ ಬದಿಯಲ್ಲಿ ಮಾರುತಿದ್ದರು ಯಾಕೆ ಗೊತ್ತೇ

0 7

ಇತಿಹಾಸದಲ್ಲಿ ಸಾಕಷ್ಟು ರಾಜಮನೆತನಗಳು ಮತ್ತು ರಾಜರು ಬಂದು ಹೋಗಿದ್ದಾರೆ. ಕೆಲವು ಮನೆತನಗಳು ಮಾತ್ರ ಪರಂಪರೆ ಮತ್ತು ಸಮೃದ್ಧಿಗೆ ಹೆಸರುವಾಸಿಯಾಗಿದೆ. ಅಂತಹ ಹೆಸರಾಂತ ರಾಜಮನೆತನದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

200 ವರ್ಷಗಳ ಕಾಲ ಇತಿಹಾಸದಲ್ಲಿ ತನ್ನ ಪ್ರಭಾವ ಮೂಡಿಸಿದ್ದ ಸಾಮ್ರಾಜ್ಯವಿದು. ಈ 200 ವರ್ಷಗಳಲ್ಲಿ 16 ರಾಜರು ಬಂದು ಹೋಗಿದ್ದಾರೆ. 13ನೇ ಶತಮಾನದ ಕಂಪ್ಲಿ ರಾಜನಾದ ಕುಮಾರರಾಮನನ್ನು 1336ರಲ್ಲಿ ಮಹಮ್ಮದ್ ಬಿನ್ ತುಘಲಕ್ ಕುತಂತ್ರದಿಂದ ಸಾಯಿಸುತ್ತಾನೆ. ಇದರಿಂದ ಕುಮಾರರಾಮನ ಮಾವನ ಮಕ್ಕಳಾದ ಹಕ್ಕ- ಬುಕ್ಕರು ಕುಮಾರರಾಮನ ಆಸೆಯನ್ನರಿತು ಸಾಮ್ರಾಜ್ಯವನ್ನು ಕಟ್ಟುತ್ತಾರೆ ಎನ್ನಲಾಗಿದೆ. ಹೊಯ್ಸಳ ದೊರೆ ಮೂರನೇ ಬಲ್ಲಾಳನನ್ನು ಸೋಲಿಸಿದ ಹರಿಹರ ಈ ಸಾಮ್ರಾಜ್ಯದ ಸೃಷ್ಟಿಕರ್ತನಾಗುತ್ತಾನೆ. ದಕ್ಷಿಣದ ಕನ್ಯಾಕುಮಾರಿಯಿಂದ ಕೃಷ್ಣ ನದಿಯವರೆಗೆ ಹಬ್ಬಿದ ಈ ಸಾಮ್ರಾಜ್ಯದ ಪ್ರಸಿದ್ಧ ದೊರೆ ಕೃಷ್ಣ ದೇವರಾಯ ಇಮ್ಮಡಿ ದೇವರಾಯ ಮತ್ತು ಕೃಷ್ಣ ದೇವರಾಯನ ಕಾಲದಲ್ಲಿ ಈ ಸಾಮ್ರಾಜ್ಯ ವಿಸ್ತಾರವಾಯಿತೆಂದು ಹೇಳಲಾಗುತ್ತದೆ. ಇತಿಹಾಸ ತಜ್ಞರು ಮತ್ತು ಆ ಕಾಲದ ಯಾತ್ರಿಕರ ಪ್ರಕಾರ ಕೃಷ್ಣದೇವರಾಯ ನ್ಯಾಯ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದನಂತೆ.

ಮೊಘಲ್ ಸಾಮ್ರಾಜ್ಯದ ದೊರೆ ಬಾಬರ್ ಪ್ರಕಾರ ” ಕೃಷ್ಣ ದೇವರಾಯ ಭಾರತದ ಅತೀ ಶ್ರೇಷ್ಠ ದೊರೆ” ಆತನ ಕಾಲದಲ್ಲಿ ಮುತ್ತು-ರತ್ನಗಳನ್ನು ರಸ್ತೆಬದಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೂ ಕುತಂತ್ರ, ಆಂತರ್ಯದ ರಾಜಕೀಯದಿಂದ ಕೃಷ್ಣದೇವರಾಯ ತನ್ನ ಮಗನನ್ನು ಕಳೆದುಕೊಳ್ಳುತ್ತಾನೆ. ತನ್ನ ಕಂದನ ಸಾವಿನಿಂದ ನೊಂದು ಅನಾರೋಗ್ಯಕ್ಕೀಡಾಗಿ ಕೃಷ್ಣದೇವರಾಯ ಸಾವನ್ನಪ್ಪುತ್ತಾನೆ. ಆತನ ಕಾಲ ಮುಗಿಯುತ್ತಿದ್ದಂತೆ ಸಾಮ್ರಾಜ್ಯದ ಅವನತಿ ಪ್ರಾರಂಭವಾಗುತ್ತದೆ. ಗೋಲ್ಕಂಡ ಮತ್ತು ಅಹಮದ್ ನಗರದ ಸುಲ್ತಾನರು ಕುತಂತ್ರದಿಂದ ನೋಡ ನೋಡುತ್ತಿದ್ದಂತೆ ವಿಜಯನಗರ ಸಾಮ್ರಾಜ್ಯ ನಾಶವಾಗಿಬಿಟ್ಟಿತು ಎನ್ನಲಾಗುತ್ತದೆ. 1564 ರಲ್ಲಿ ಐವರು ಸುಲ್ತಾನರಲ್ಲಿ ನಾಲ್ವರು ಯುದ್ಧಕ್ಕೆ ಮುಂದಾಗುತ್ತಾರೆ. ತಾಳಿಕೋಟೆ ಕದನದಲ್ಲಿ ರಾಮರಾಯನನ್ನು ಕೊಂದುಬಿಡುತ್ತಾರೆ. ಆದರೆ ಆತನ ಸಹೋದರ ತಿರುಮಲ ಪೆಣಕೊಂಡಕ್ಕೆ ಖಜಾನೆಯೊಂದಿಗೆ ಪರಾರಿಯಾಗುತ್ತಾನೆ. ಇತಿಹಾಸ ತಜ್ಞರ ಪ್ರಕಾರ ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣ ಸಾಮ್ರಾಜ್ಯದ ಸೈನಿಕರ ನಂಬಿಕೆದ್ರೋಹ, ಸತತ ಖಜಾನೆಯ ಲೂಟಿ ಮತ್ತು ನಾಶ. ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ವಿಜಯನಗರ ಸಾಮ್ರಾಜ್ಯ 1585 ರ ನಂತರ ಇತಿಹಾಸದ ಪುಟಗಳಲ್ಲಿ ಕೇವಲ ಹೆಸರಾಗಿ ಇದ್ದುಬಿಡುತ್ತದೆ. ಇಂದು ಹಾಳುಹಂಪೆಯಲ್ಲಿ ಭಿನ್ನಗೊಂಡಿರುವ ಶಿಲೆಗಳು ವಿಜಯನಗರದ ವೈಭವವನ್ನು ಮೆಲುಕುಹಾಕುತ್ತಿವೆ.

Leave A Reply

Your email address will not be published.