ಮುಖದಲ್ಲಿ ಅಪ್ಪರ್ ಲಿಪ್ಸ್ ಮೇಲೆ ಇರುವ ಅನ್ ವಾಂಟೆಡ್ ಕೂದಲುಗಳನ್ನು ತೆಗೆಯುವುದು ಹೇಗೆಂದು ಬಹಳಷ್ಟು ಮಹಿಳೆಯರು ತಲೆ ಕೆಡಿಸಿಕೊಳ್ಳುತ್ತಾರೆ. ಮನೆಯಲ್ಲೇ ಮುಖದ ಮೇಲಿನ ಅನ್ ವಾಂಟೆಡ್ ಕೂದಲುಗಳನ್ನು ತೆಗೆಯಲು ಸಹಾಯಕವಾಗುವ ಹೋಮ್ ರೆಮಿಡಿಯನ್ನು ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮನೆಯಲ್ಲೇ ತಯಾರಿಸುವ ಹೋಮ್ ರೆಮಿಡಿಗೆ ಬೇಕಾಗುವ ಸಾಮಗ್ರಿಗಳೆಂದರೆ ಗೋಧಿ ಹಿಟ್ಟು ಅಥವಾ ಕಡಲೆ ಹಿಟ್ಟು, ಕಸ್ತೂರಿ ಅರಿಶಿಣ ಅಥವಾ ಅಡುಗೆ ಅರಿಶಿಣ, ಉಪ್ಪು. ಮೊದನೆಯದಾಗಿ ಒಂದು ಬೌಲ್ ನಲ್ಲಿ ಅರ್ಧ ಸ್ಪೂನ್ ಗೋಧಿ ಹಿಟ್ಟು ಒಂದು ವೇಳೆ ಗೋಧಿ ಹಿಟ್ಟು ಇಲ್ಲದಿದ್ದರೆ ಕಡಲೆ ಹಿಟ್ಟನ್ನು ಬಳಸಬಹುದು. ಅದಕ್ಕೆ ಒಂದು ಸ್ಪೂನ್ ಕಸ್ತೂರಿ ಅರಿಶಿಣ ಒಂದು ವೇಳೆ ಕಸ್ತೂರಿ ಅರಿಶಿಣ ಇಲ್ಲದಿದ್ದರೆ ಅಡುಗೆಗೆ ಬಳಸುವ ಅರಿಶಿಣವನ್ನು ಬಳಸಬಹುದು. ಇದಕ್ಕೆ ಅರ್ಧ ಸ್ಪೂನ್ ಪುಡಿ ಉಪ್ಪು ಹಾಕಿ ಇವುಗಳನ್ನು ಮಿಕ್ಸ್ ಮಾಡಿ ಇದಕ್ಕೆ ಎರಡು ಸ್ಪೂನ್ ಆಕಳಿನ ಹಾಲು ಕಾಯಿಸಿರಬಾರದು ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಥಿಕ್ ಆಗಿರಬೇಕು ನೀರು ನೀರಾಗಿ ಇರಬಾರದು.

ಮುಖವನ್ನು ಕ್ಲೀನಾಗಿ ವಾಷ್ ಮಾಡಿದ ನಂತರ ಇದನ್ನು ಮುಖದ ಮೇಲೆ ಅನ್ ವಾಂಟೆಡ್ ಹೇರ್ ಇರುವ ಜಾಗದಲ್ಲಿ ಅಪ್ಲೈ ಮಾಡಬೇಕು ನಂತರ 20 ನಿಮಿಷಗಳ ಕಾಲ ಡ್ರೈ ಆಗಲು ಬಿಡಬೇಕು ಒಣಗಿದ ನಂತರ ಅಪ್ಪರ್ ಡೈರೆಕ್ಷನ್ ನಲ್ಲಿ ಕ್ಲೀನಾಗಿ ರಿಮೂವ್ ಮಾಡಬೇಕು. ರಿಮೂವ ಮಾಡುವಾಗ ಸ್ವಲ್ಪ ನೋವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿಕೊಳ್ಳಬೇಕು ಆಗ ಉರಿ ನಿವಾರಣೆಯಾಗುತ್ತದೆ. ಈ ಪ್ಯಾಕ್ ಅನ್ನು ವಾರದಲ್ಲಿ ಒಮ್ಮೆ ಒಂದು ತಿಂಗಳವರೆಗೆ ಅಪ್ಲೈ ಮಾಡುತ್ತಾ ಬಂದರೆ ಮುಖದ ಮೇಲಿನ ಅನ್ ವಾಂಟೆಡ್ ಹೇರ್ ಹೋಗುತ್ತದೆ. ಈ ಪ್ಯಾಕ್ ನಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು ಇದಕ್ಕೆ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿ ಮಾಡಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *