ಯಾವುದೇ ಸಮಸ್ಯೆಗೆ ಪರಿಹಾರ ಇರುತ್ತದೆ. ಹುಡುಗಿಯರಾಗಲಿ, ಹುಡುಗರಾಗಲಿ ಕೆಲವು ವಿಷಯ ಸೂಕ್ಷ್ಮವಾಗಿದ್ದು ಎಲ್ಲರ ಬಳಿ ಹೇಳಿಕೊಳ್ಳಲು ಆಗುವುದಿಲ್ಲ. ಅಂತಹ ವಿಷಯಗಳಲ್ಲಿ ದೇಹದ ಬೇಡದ ಜಾಗದಲ್ಲಿ ಕೂದಲು ಬೆಳೆಯುವುದು. ಈ ಸಮಸ್ಯೆಗೆ ಕಾರಣಗಳಿವೆ ಅದರ ಬಗ್ಗೆ ಹಾಗೂ ಈ ಸಮಸ್ಯೆಗೆ ಪರಿಹಾರ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಹುಡುಗ ಅಥವಾ ಹುಡುಗಿಗಾಗಲಿ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ, ಇದರಿಂದ ಅವರು ಆತಂಕಕ್ಕೆ ಒಳಗಾಗುತ್ತಾರೆ.‌ ಸಾಮಾನ್ಯವಾಗಿ ಎಲ್ಲರಿಗೂ ಸೌಂದರ್ಯ ಪ್ರಜ್ಞೆ ಇರುತ್ತದೆ ಇದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಅಲ್ಲದೆ ಎಲ್ಲರ ಬಳಿ ಈ ವಿಷಯವನ್ನು ಹೇಳಿಕೊಳ್ಳಲು ಸಂಕೋಚವಾಗುತ್ತದೆ. ಕೆಲವರಿಗೆ ಅನುವಂಶಿಕವಾಗಿ ಅವರ ದೇಹದಲ್ಲಿ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಹುಡುಗಿಯ ಮುಖದಲ್ಲಿ ಕೂದಲು ಬೆಳೆಯಬಾರದು ಆದರೆ ಕೆಲವು ಹುಡುಗಿಯರ ಮುಖದಲ್ಲಿ, ಎದೆ ಭಾಗದಲ್ಲಿ, ಹೊಟ್ಟೆಯ ಭಾಗದಲ್ಲಿ ಕೂದಲು ಬೆಳೆಯುವುದರಿಂದ ಅವರಿಗೆ ಹೊರಗೆ ಹೋಗಲು ಮುಜುಗರವಾಗುತ್ತದೆ ಜೊತೆಗೆ ಆತಂಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹರೆಯದ ಹುಡುಗಿಯರ ಮುಖದಲ್ಲಿ ಬೇಡದ ಕೂದಲು ಗಡ್ಡ, ಮೀಸೆ ಹೀಗೆ ಬೇಡದ ಜಾಗದಲ್ಲಿ ಕೂದಲು ಬೆಳವಣಿಗೆಯಾಗುವುದನ್ನು ಹೆಚ್ಚಾಗಿ ಕಂಡುಬರುತ್ತದೆ. ಹೀಗೆ ಹೆಣ್ಣುಮಕ್ಕಳಿಗೆ ಬೇಡದ ಕೂದಲು ಬೆಳೆಯಲು ಕಾರಣವಿದೆ ಅಂಡಾಶಯದಲ್ಲಿ ನೀರಿನ ಗುಳ್ಳೆಗಳು ತುಂಬಿಕೊಂಡು ಅಂಡಾಣು ಸರಿಯಾಗಿ ಬಿಡುಗಡೆಯಾಗದೆ ಹೆಣ್ಣುಮಕ್ಕಳಿಗೆ ಬೇಡದ ಜಾಗದಲ್ಲಿ ಕೂದಲ ಬೆಳವಣಿಗೆ ಕಂಡುಬರುತ್ತದೆ. ಮೊದಲೇ ಇದಕ್ಕೆ ಚಿಕಿತ್ಸೆ ಪಡೆಯದೆ ಇದ್ದರೆ ನಂತರದ ದಿನಗಳಲ್ಲಿ ಹೆಚ್ಚಿನ ಕೂದಲು ಬೆಳೆದು ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಅದಲ್ಲದೆ ಕೆಲವರಿಗೆ ನಿರ್ನಾಳ ಗ್ರಂಥಿಯ ಸಮಸ್ಯೆಯಿಂದ ಹೆಣ್ಣು ಮಕ್ಕಳಿಗೆ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಹಾರ್ಮೋನ್ ವ್ಯತ್ಯಾಸದಿಂದಾಗಿ ಕೆಲವರಿಗೆ ಬೇಡದ ಜಾಗದಲ್ಲಿ ಕೂದಲು ಬೆಳೆಯುತ್ತದೆ. ಇದರ ಜೊತೆಗೆ ಮುಟ್ಟಿನ ತೊಂದರೆ ಸಹ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹದ ತೂಕ ಅತಿಯಾಗಿ ಹೆಚ್ಚಾಗುತ್ತದೆ.

ಈ ರೀತಿಯ ಸಮಸ್ಯೆ ಅನುಭವಿಸುವವರು ಸಂಕೋಚ ಪಟ್ಟುಕೊಳ್ಳದೆ ವೈದ್ಯರನ್ನು ಸಂಪರ್ಕಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬೆಳೆಯುವುದನ್ನು ತಡೆಯಬಹುದು. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬೆಳೆದರೆ ಅದನ್ನು ನಿವಾರಿಸುವುದು ಕಷ್ಟವಾಗುತ್ತದೆ. ಕೆಲವರು ಲೇಸರ್ ಚಿಕಿತ್ಸೆ ಅಥವಾ ಬ್ಯೂಟಿ ಪಾರ್ಲರ್ ನಲ್ಲಿ ಬೇಡದ ಕೂದಲನ್ನು ತೆಗೆಯಲು ಕೆಲವು ವಿಧಾನಗಳಿವೆ ಅದರ ಮೊರೆ ಹೋಗುತ್ತಾರೆ ಆದರೆ ಬೇಡದ ಕೂದಲು ಬೆಳೆಯಲು ಮೂಲ ಕಾರಣವನ್ನು ತಿಳಿದು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು ಇದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ ಎಂಬುದು ಸ್ತ್ರೀರೋಗ ತಜ್ಞರ ಅಭಿಪ್ರಾಯವಾಗಿದೆ. ಈ ವಿಷಯ ಸೂಕ್ಷ್ಮವಾಗಿದ್ದು ಬಹಳಷ್ಟು ಮಹಿಳೆಯರು ಎದುರಿಸುವ ಸಮಸ್ಯೆಯಾಗಿದ್ದು ಸಂಕೋಚ ಮನೋಭಾವನೆ ಇಟ್ಟುಕೊಳ್ಳದೆ ವೈದ್ಯರ ಸಂಪರ್ಕ ಮಾಡಬೇಕು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *