ತುಳಸಿ ಎಲೆಯಿಂದ ಹಲ್ಲುಗಳ ಅರೋಗ್ಯ ಹಾಗೂ ಶರೀರದ ಆರೋಗ್ಯ ಹೇಗಿರತ್ತೆ ನೋಡಿ

0 1

ತುಳಸಿ ಗಿಡ ಹಿಂದೂಧರ್ಮದ ಎಲ್ಲರ ಮನೆಯ ಅಂಗಳದಲ್ಲಿಯೂ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮುಗಿಸಿ ತುಳಸಿ ಪೂಜೆ ಮಾಡುವುದು ಹಿಂದೂಗಳ ಕರ್ತವ್ಯವಾಗಿದೆ. ಹಾಗೆಯೇ ಇದು ನಮ್ಮ ಭಾರತೀಯ ಸಂಸ್ಕೃತಿ ಆಗಿದೆ. ತುಳಸಿ ಗಿಡವು ಅನೇಕ ಔಷಧಿಗಳನ್ನು ಹೊಂದಿದೆ. ಇದನ್ನು ಔಷಧಿಗಳಿಗೆ ಬಳಸುತ್ತಾರೆ. ಆದ್ದರಿಂದ ನಾವು ಇಲ್ಲಿ ತುಳಸಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ತುಳಸಿ ಗಿಡದಲ್ಲಿ ಹಲವಾರು ವಿಧಗಳಿವೆ. ರಾಮ ತುಳಸಿ ಮತ್ತು ಕೃಷ್ಣ ತುಳಸಿ ಕೂಡ ಒಂದು. ಆದರೆ ಎಲ್ಲಾ ವಿಧಗಳನ್ನು ಔಷಧಿಗಾಗಿ ಬಳಸುವುದಿಲ್ಲ. ಕೃಷ್ಣ ತುಳಸಿ ಮತ್ತು ರಾಮ ತುಳಸಿಯನ್ನು ಮಾತ್ರ ಔಷಧಿಗಳಿಗೆ ಬಳಸುತ್ತಾರೆ. ತುಳಸಿಯಲ್ಲಿ ಅನೇಕ ಔಷಧಿಗಳು ಇವೆ. ಬಾಯಿಯಲ್ಲಿ ಹುಳುಕುಗಳು ಆದಾಗ ತುಳಸಿ ಎಲೆಯನ್ನು ತಿಂದರೆ ಕಡಿಮೆಯಾಗುತ್ತದೆ. ಹಾಗೆಯೇ ಕೆಮ್ಮು, ತಂಡಿ, ಜ್ವರಗಳು ಉಂಟಾದಾಗ ತುಳಸಿಯ ಚಹಾವನ್ನು ಮಾಡಿ ಕುಡಿದರೆ ಇದರಿಂದ ಮುಕ್ತಿ ಹೊಂದಬಹುದು. ತುಳಸಿಯನ್ನು ದಿನನಿತ್ಯ ಬಳಕೆ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಇದರಿಂದ ಕಫ ಕೂಡ ಕಡಿಮೆಯಾಗುತ್ತದೆ.

ಹಾಗೆಯೇ ಮಕ್ಕಳಲ್ಲಿ ಜಂತುಗಳು ಆಗಿದ್ದರೆ ಇದನ್ನು ಅವರಿಗೆ ಕೊಡುವುದರಿಂದ ಕಡಿಮೆಯಾಗುತ್ತದೆ. ಡಯಾಬಿಟಿಸ್ ಇರುವವರು ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಶುಗರ್ ಲೆವೆಲ್ ಒಂದು ಪ್ರಮಾಣದಲ್ಲಿರುತ್ತದೆ. ಹಾಗೆಯೇ ಇದು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಉಳಿಯುತ್ತದೆ. ಮೂತ್ರಕ್ಕೆ ಸಂಬಂಧಿಸಿದ ಯಾವುದಾದರೂ ತೊಂದರೆ ಇದ್ದರೆ ತುಳಸಿಯ ರಸಕ್ಕೆ ಸ್ವಲ್ಪ ಹಾಲನ್ನು ಹಾಕಿ ಅದಕ್ಕೆ ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಒಳ್ಳೆಯ ಪರಿಣಾಮವನ್ನು ಕಾಣಬಹುದು.

ಹಾಗೆಯೇ ಇದನ್ನು ತಿನ್ನುವುದರಿಂದ ಹಲ್ಲು ಬಿಳಿಯಾಗುತ್ತದೆ. ತುಳಸಿ ರಸ ಅಥವಾ ಒಣಗಿದ ತುಳಸಿಯ ಪುಡಿ ಹಾಗೆಯೇ ಅದಕ್ಕೆ ಸ್ವಲ್ಪ ಅರಿಶಿಣ, 2 ಚಮಚ ಸಾಸಿವೆ ಎಣ್ಣೆ ಇದರ ಜೊತೆ ಚೂರು ಉಪ್ಪನ್ನು ಹಾಕಿ ಚೆನ್ನಾಗಿ ಜಜ್ಜಬೇಕು. ಅದನ್ನು ದಿನನಿತ್ಯ ಬೆಳಿಗ್ಗೆ ಹಲ್ಲುಜ್ಜಬೇಕು. ಇದರಿಂದ ಹಲ್ಲುನೋವು ಮತ್ತು ಹಲ್ಲಿನ ಹುಳಗಳು ಸತ್ತು ಹೋಗುತ್ತದೆ. ಹಾಗೆಯೇ ತುಳಸಿಯ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಇರುವ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ. ನಿದ್ರಾಹೀನತೆ ಸಮಸ್ಯೆ ಇರುವವರು ತುಳಸಿಯ ಚಹಾವನ್ನು ದಿನನಿತ್ಯ ಸೇವನೆ ಮಾಡುವುದರಿಂದ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು. ಕೊನೆಯದಾಗಿ ಹೇಳುವುದೇನೆಂದರೆ ತುಳಸಿಯು ಒಂದು ಅದ್ಭುತ ಸಸ್ಯ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.

Leave A Reply

Your email address will not be published.