ನಿಜವಾದ ಪ್ರೀತಿ ಯಾವುದು ಗೊತ್ತೇ? ಶ್ರೀ ಕೃಷ್ಣಾ ಹೇಳುವ ಮಾತು ಕೇಳಿ

0 5

ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಪ್ರೀತಿ ತಂದೆ ತಾಯಿ ಮತ್ತು ಮಕ್ಕಳ ನಡುವೆ, ಇಬ್ಬರು ಪ್ರೇಮಿಗಳ ನಡುವೆ ಹುಟ್ಟಬಹುದು ಆದರೆ ಇದನ್ನೇ ಪ್ರೀತಿ ಎಂದು ಹೇಳುತ್ತಾರಾ? ಹಾಗಾದರೆ ಪ್ರೀತಿ ಎಂದರೆ ಏನು ಎಂಬ ಪ್ರಶ್ನೆಗೆ ಜಗತ್ತಿನ ಮೊದಲ ಪ್ರೇಮ ಕಥೆಯ ರೂವಾರಿ ಶ್ರೀಕೃಷ್ಣನ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರತಿಯೊಬ್ಬರ ಜೀವನದಲ್ಲಿ ಯಾವಾಗಲಾದರೂ ಯಾವುದಾದರೂ ಸ್ಥಾನದಲ್ಲಿ ಪ್ರೀತಿ ಹುಟ್ಟುತ್ತದೆ ಎಂದು ನಂಬಿದ್ದೇವೆ. ತಂದೆ-ತಾಯಿಗೆ ತಮ್ಮ ಸಂತಾನದಿಂದ ಇರಬಹುದು, ಬುದ್ಧಿವಂತರಿಗೆ ತಮ್ಮ ಜ್ಞಾನದಿಂದ ಇರಬಹುದು, ಕಲಾಕಾರರಿಗೆ ತಮ್ಮ ಕಲೆಯಿಂದ ಪ್ರೀತಿ ಹುಟ್ಟಬಹುದು ಆದರೆ ವಾಸ್ತವದಲ್ಲಿ ಇದು ಪ್ರೀತಿ ಎಂದೆನಿಸಿಕೊಳ್ಳಲಾರದು ಮೋಹವು ಆಗಿರುತ್ತದೆ. ಪ್ರೀತಿ ಎಂದರೆ ಕೇವಲ ಆಕರ್ಷಣೆ, ಮದುವೆ ಎಂದಲ್ಲಾ ಪ್ರೀತಿಗೆ ತನ್ನದೇ ಆದ ಸ್ಥಾನವಿದೆ.

ಪ್ರೀತಿ ಮತ್ತು ಮೋಹದ ಅಂತರವೆಂದರೆ ಅದು ಬಂಧನವಾಗಿದೆ. ನಿಮ್ಮನ್ನು ಬಂಧಿಸುವ ಅಂಶಗಳೇ ಮೋಹ. ಒಂದು ಸಂಬಂಧ ಬಂಧಿತವಾದರೆ ಅದು ಪ್ರೀತಿ ಎಂದೆನಿಸುವುದಿಲ್ಲ. ಪ್ರೀತಿ ಎಂದರೆ ಸ್ವತಂತ್ರವಾಗಿ ವಿಕಾಸದತ್ತ ನಿಮ್ಮನ್ನು ನಡೆಸುತ್ತದೆ. ಕೆಲವು ತಂದೆ-ತಾಯಿಯರು ತಮ್ಮ ಮಕ್ಕಳನ್ನು ಬೇರೊಂದು ನಗರಕ್ಕೆ ಓದಲು ಕಳುಹಿಸುವುದಿಲ್ಲ ಏಕೆಂದರೆ ತಂದೆ ತಾಯಿಗೆ ತಮ್ಮ ಮಕ್ಕಳಿಗೆ ಏನಾದರೂ ಆಗಿಬಿಡುತ್ತದೆ ಎಂದು ಚಿಂತೆ ಕಾಡುತ್ತಿರುತ್ತದೆ. ಈ ಒಂದು ಕಾರಣಕ್ಕಾಗಿ ಮಕ್ಕಳನ್ನೂ ಎಲ್ಲೂ ಹೋಗದಂತೆ ಕಟ್ಟಿ ಹಾಕಲಾಗುತ್ತದೆ ಇದನ್ನು ಪ್ರೀತಿ ಎಂದು ಹೇಳಲಾಗುವುದಿಲ್ಲ ಇದು ಮೋಹವಾಗಿದೆ.

ಹಾಗೆಯೇ ಕೆಲವು ತಂದೆ-ತಾಯಿಯರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದ ದೃಷ್ಟಿಯಿಂದ ಬೇರೆ ನಗರಕ್ಕೆ ಕಳುಹಿಸುತ್ತಾರೆ ಹಾಗಂದ ಮಾತ್ರಕ್ಕೆ ಅವರಿಗೆ ಪ್ರೀತಿ ಇಲ್ಲ ಎಂದು ಅರ್ಥವಲ್ಲ. ನಿಷ್ಕಲ್ಮಶ ಪ್ರೀತಿ ಇದ್ದರೆ ಮಕ್ಕಳು ತಂದೆ ತಾಯಿಯ ನೆರಳಿನಿಂದ ಆಚೆ ಬಂದು ಜಗತ್ತನ್ನು ನೋಡಲು ಇಷ್ಟ ಪಡುತ್ತಾರೆ ಅದನ್ನು ಅರಿತವರು ತಮ್ಮ ಮಕ್ಕಳನ್ನು ಜ್ಞಾನ ಪಡೆಯಲು ಬಿಡುತ್ತಾರೆ. ಇದರಿಂದ ಅವರು ತಮ್ಮ ಅನುಭವದಿಂದ ಸ್ವಯಂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ.

ಮೋಹದಿಂದ ಭಯ ಹುಟ್ಟುತ್ತದೆ ನಮ್ಮವರಿಗೆ ಏನಾದರೂ ಆಗಬಹುದು, ಹೇಗಿರುತ್ತಾರೆ ನಮ್ಮನ್ನು ಬಿಟ್ಟು ಎಂಬಂತಹ ಯೋಚನೆಗಳು ಕಾಡುತ್ತವೆ. ಪ್ರೀತಿ ಆನಂದವನ್ನು ಕೊಡುತ್ತದೆ. ನಾವು ನಮ್ಮ ಜೀವನವನ್ನು ಕಟ್ಟಿಕೊಳ್ಳಬಾರದು ಮುಕ್ತವಾಗಿ ಸಂಚರಿಸಲು ಬಿಡಬೇಕು. ಮುಕ್ತವಾಗಿ ಸಂಚರಿಸಿ ಜ್ಞಾನ, ಸಂತೋಷವನ್ನು ಪಡೆಯುವುದೇ ನಿಷ್ಕಲ್ಮಶ ಪ್ರೀತಿಯಾಗಿದೆ. ನಿಷ್ಕಲ್ಮಶತೆ, ಮುಗ್ಧತೆ ಹಾಗೂ ಸ್ವತಂತ್ರವಾದ ಜೀವನವನ್ನು ಹೊಂದುವುದು ಪ್ರೀತಿ. ಬಲವಂತದ ಸಂಬಂಧ ಪ್ರೀತಿಯಾಗುವುದಿಲ್ಲ.

Leave A Reply

Your email address will not be published.