ವಿದ್ಯಾರ್ಥಿ ಜೀವನವನ್ನು ಗೋಲ್ಡನ್ ಲೈಫ್ ಎಂದು ಕರೆಯುತ್ತಾರೆ. ಬಹಳಷ್ಟು ವಿದ್ಯಾರ್ಥಿಗಳು ಈ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ. ರಾಜಕೀಯ ಧೀಮಂತ ವ್ಯಕ್ತಿ ಚಾಣಕ್ಯ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಮಯದಲ್ಲಿ ಯಾವ ರೀತಿ ಇರಬೇಕು ಎಂಬ ಅಮೂಲ್ಯವಾದ ಕಿವಿ ಮಾತನ್ನು ಹೇಳಿದ್ದಾರೆ. ಅವರು ಹೇಳಿದ ಕಿವಿ ಮಾತನ್ನು ಈ ಲೇಖನದ ಮೂಲಕ ತಿಳಿಯೋಣ.

ಚಾಣಕ್ಯರು ಪುಸ್ತಕಗಳಲ್ಲಿ ಬರೆದ ವಿದ್ಯೆ ಹಾಗೂ ಇನ್ನೊಬ್ಬರ ಬಳಿ ಕೂಡಿ ಇಟ್ಟ ಧನ ಎಂದಿಗೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ, ಇಂಥ ವಿದ್ಯೆ, ಧನ ಇಲ್ಲ ಎಂದು ತಿಳಿದುಕೊಳ್ಳಬೇಕು. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಪುಸ್ತಕಗಳನ್ನು ಮನೆಗೆ ತಂದು ಇಡುತ್ತೇವೆ ಆದರೆ ಅವುಗಳನ್ನು ಓದುವುದೇ ಇಲ್ಲ ಇದರಿಂದ ಜ್ಞಾನ ಬೆಳೆಯಲು ಸಾಧ್ಯವಿಲ್ಲ. ಪುಸ್ತಕಗಳಿಂದ ವಿದ್ವಾನರಾಗಬಹುದು ಎಂಬ ಮಾತು ಕೇಳಿ ಬರುತ್ತದೆ ಆದರೆ ಹಾಗಿದ್ದರೆ ಮೊದಲು ಲೈಬ್ರರಿಯನ್ ವಿದ್ವಾನನಾಗಬೇಕಿತ್ತು.

ಕೇವಲ ಪುಸ್ತಕಗಳಿದ್ದರೆ ಸಾಲದು ಅವುಗಳನ್ನು ಓದಬೇಕು, ತಿಳಿದುಕೊಳ್ಳಬೇಕು ಮುಂದೆ ನಾನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಪ್ರತಿಯೊಬ್ಬರ ನಿರೀಕ್ಷೆಯೂ ಭಿನ್ನವಾಗಿರುತ್ತದೆ, ವಿದ್ಯಾರ್ಥಿಗಳ ಮುಖ್ಯ ಉದ್ದೇಶ ಸ್ಟಡಿ ಮಾಡುವುದು ಆದರೆ ಸ್ಟಡಿ ಬಿಟ್ಟು ಬೇರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಉಳಿದ ಎಲ್ಲ ವಿಷಯದಲ್ಲಿ ಸರಿಯಾಗಿ ಇರುತ್ತಾರೆ ಆದರೆ ಅಭ್ಯಾಸದಲ್ಲಿ ವೀಕ್ ಇರುತ್ತಾರೆ. ವಿದ್ಯಾರ್ಥಿಗಳು ಸ್ಟಡಿಯ ಬಗ್ಗೆ ಗಮನ ಕೊಡಬೇಕು ಈ ವಿಷಯದಲ್ಲಿ ಆಲಸ್ಯ ಮಾಡಬಾರದು ಎಂದು ಚಾಣಕ್ಯ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು ಎನ್ನುವುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಅದಕ್ಕಾಗಿ ದೃಢಸಂಕಲ್ಪ ಮಾಡಬೇಕು ಜೊತೆಗೆ ಯಾರಲ್ಲಿಯೂ ಹೇಳಿಕೊಳ್ಳಬಾರದು ಮಾಡಿತೋರಿಸಬೇಕು.

ಯಾವುದೇ ಪದ್ಧತಿಯನ್ನು ತರಲು ಬೇರೆಯವರ ಬಳಿ ಹೇಳುವುದು ಪ್ರಯೋಜನಕ್ಕೆ ಬರುವುದಿಲ್ಲ ಸ್ವತಃ ತಾವೇ ಪ್ರಾರಂಭಿಸಬೇಕು. ಗುರಿಯನ್ನು ಸಾಧಿಸಲು ಕಷ್ಟಪಡಬೇಕು ಮುಂದೆ ಸಾಗಬೇಕು ಎಂಬ ಅಮೂಲ್ಯ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ಚಾಣಕ್ಯರು ಹೇಳಿದ್ದಾರೆ. ವಿದ್ಯಾರ್ಥಿಗಳು ಒಂದೇ ದಿನ ಎಲ್ಲಾ ಪುಸ್ತಕಗಳಲ್ಲಿನ ಜ್ಞಾನವನ್ನು ತಿಳಿದುಕೊಳ್ಳುತ್ತೇವೆ ಎಂದುಕೊಂಡರೆ ಅದು ಅಸಾಧ್ಯ. ಹನಿ ಹನಿ ಕೂಡಿದರೆ ಹಳ್ಳ ಅದೇ ರೀತಿ ಜೀವನದಲ್ಲಿ ಪ್ರತಿಯೊಂದು ವಿಷಯವು 0 ಯಿಂದ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳಿಗೆ ಏನು ಜ್ಞಾನ ತಿಳಿದಿಲ್ಲ ಎಂದಾಗ ಪ್ರಾರಂಭಿಸುವ ಹಂತದಲ್ಲಿ ಇದ್ದೀರಿ ಎಂಬ ಅರ್ಥ. ಜಗತ್ತಿನಲ್ಲಿ ಎಲ್ಲವೂ ಫ್ರೀಯಾಗಿ ಸಿಗುತ್ತದೆ. ಆದರೆ ಅದರಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದ ಜ್ಞಾನವನ್ನು ಎಷ್ಟು ಪಡೆಯುತ್ತೇವೆ ಅಷ್ಟು ಪಡೆಯಬೇಕು ಅದಕ್ಕೆ ಗಡಿಯೆ ಇರುವುದಿಲ್ಲ ಹಾಗೂ ಫ್ರೀಯಾಗಿ ಸಿಗುತ್ತದೆ. ಜ್ಞಾನವನ್ನು ಕೋಟ್ಯಂತರ ರೂಪಾಯಿಗಳನ್ನು ಕೊಡುವುದರಿಂದ ಸಿಗುವುದಿಲ್ಲ ಅದಕ್ಕಾಗಿ ಎಷ್ಟು ಪಡೆದರು ಕಡಿಮೆಯೇ. ಯಾವುದೇ ಕೆಲಸ ಪ್ರಾರಂಭಿಸುವಾಗ ವಿಫಲತೆಗೆ ಹೆದರಬಾರದು ನಿಯತ್ತಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಸಮಯ ಭಿನ್ನವಾಗಿರುತ್ತದೆ ಕೆಲವರು ಕಡಿಮೆ ಸಮಯದಲ್ಲಿ, ಕೆಲವರು ಹೆಚ್ಚಿನ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ. ಎಂದಿಗೂ ಏನನ್ನಾದರೂ ಕಲಿಯುತ್ತಿರಬೇಕು. ಈ ಮಾಹಿತಿಯನ್ನು ತಪ್ಪದೇ ವಿದ್ಯಾರ್ಥಿಗಳಿಗೆ ತಿಳಿಸಿ ಅವರ ಭವಿಷ್ಯ ಉಜ್ವಲವಾಗಿರಲಿ.

Leave a Reply

Your email address will not be published. Required fields are marked *