ಮನೆಯ ಆ ಸ್ಥಳದಲ್ಲಿ ತಾಮ್ರದ ಸೂರ್ಯನನ್ನ ಇಟ್ಟರೆ ಏನಾಗುತ್ತೆ ಗೊತ್ತೇ.!

0 0

ನಿಸರ್ಗವನ್ನು ಪೂಜಿಸುವ ನಾವು ಸೂರ್ಯನನ್ನು ಸಹ ದೇವರು ಎಂದು ಪೂಜಿಸುತ್ತೇವೆ ಸೂರ್ಯ ದೇವನ ಅನುಗ್ರಹ ಬಹಳ ಮುಖ್ಯ. ನಾವು ಮನೆಯಲ್ಲಿ ಸೂರ್ಯ ದೇವನ ಬಿಂಬವನ್ನು ಇಟ್ಟುಕೊಳ್ಳಬೇಕು. ಸೂರ್ಯನಿಗೆ ಪ್ರಿಯವಾದ ಲೋಹ ಯಾವುದು ಹಾಗೂ ಸೂರ್ಯ ದೇವನ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ.

ಸೂರ್ಯನನ್ನು ಅಗ್ನಿ ದೇವನ ಸ್ವರೂಪ ಎಂದು ಪೂಜಿಸಲಾಗುತ್ತದೆ. ಮನೆಯಲ್ಲಿ ಬಳಸುವ ತಾಮ್ರ ಸೂರ್ಯನಿಂದ ಪ್ರಭಾವಿತವಾಗುವ ಲೋಹ. ಆದ್ದರಿಂದ ತಾಮ್ರದಿಂದ ತಯಾರಿಸಿದ ಸೂರ್ಯನು ದೃಷ್ಟಿಯನ್ನು, ನೆಗೆಟಿವ್ ಎನರ್ಜಿಯನ್ನು ಹಾಗೂ ಅನೇಕ ಕೆಟ್ಟ ವಿಷಯದಿಂದ ಮನುಷ್ಯನನ್ನು ಕಾಪಾಡುತ್ತದೆ. ಅಲ್ಲದೇ ಇದು ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನು ನಿವಾರಿಸಿ ಪೊಸಿಟಿವ್ ಎನರ್ಜಿಯನ್ನು ತುಂಬುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ನೆಲೆಸುವಂತೆ ಮಾಡಿ ಕುಟುಂಬದ ಸದಸ್ಯರಲ್ಲಿ ಆತ್ಮವಿಶ್ವಾಸ, ನಂಬಿಕೆಯನ್ನು ಬೆಳೆಸುತ್ತದೆ. ತಾಮ್ರದ ಸೂರ್ಯನ ಬಿಂಬದ ಮುಂದೆ ಕಾರ್ಯೋನ್ಮುಖರಾದರೆ ಕಾರ್ಯದಲ್ಲಿ ಯಶಸ್ಸು, ಗೌರವ, ಕೀರ್ತಿ, ಪ್ರತಿಷ್ಠೆ ಬೆಳೆಯುತ್ತದೆ. ಜಾತಕದಲ್ಲಿ ಸೂರ್ಯ ಬಲ ಕಡಿಮೆ ಇದ್ದರೆ ಮನೆಯಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು.

ಈ ಬಿಂಬವನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಡಬಹುದು. ಕೆಲವು ಮನೆಗಳಿಗೆ ಗಾಳಿ-ಬೆಳಕು ಬರುವುದಿಲ್ಲ ಸೂರ್ಯೋದಯ ಮತ್ತು ಸೂರ್ಯಾಸ್ತ ಆಗುವುದು ತಿಳಿಯುವುದೇ ಇಲ್ಲ ಅಲ್ಲಿ ನೆಗೆಟಿವ್ ಎನರ್ಜಿ ತುಂಬಿರುತ್ತದೆ. ಮನೆಯಲ್ಲಿ ಜಗಳ, ಕಾದಾಟ, ವೈಮನಸ್ಸು, ತೊಂದರೆಗಳು, ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದರೆ ಮನೆಯ ಯಜಮಾನ ತನ್ನ ರೂಮಿನಲ್ಲಿ ತಾಮ್ರದ ಸೂರ್ಯ ಬಿಂಬವನ್ನು ತಂದು ಇಟ್ಟುಕೊಳ್ಳಬೇಕು. ವ್ಯಾಪಾರ, ವ್ಯವಹಾರ, ಉದ್ಯೋಗ ಸರಿಯಾಗಿ ನಡೆಯದಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ನೋಡಲಾಗುತ್ತದೆ. ಮನೆಯ ಉತ್ತರದಲ್ಲಿ ಗೋಡೆ, ಅಂಗಡಿಗಳು ಇದ್ದರೆ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು ಆಗ ಒಳ್ಳೆಯದಾಗುತ್ತದೆ. ಮನೆಯ ದ್ವಾರ ಸರಿಯಾಗಿಲ್ಲದೆ ಇದ್ದಾಗ ಸಮಸ್ಯೆಗಳು ಕಂಡುಬರುತ್ತದೆ ಅದಕ್ಕೆ ಪರಿಹಾರವಾಗಿ ಮನೆಯಲ್ಲಿ ಸೂರ್ಯಬಿಂಬವನ್ನು ಇಟ್ಟುಕೊಳ್ಳಬೇಕು.

ಮನೆಯಲ್ಲಿ ಕರೆಂಟ್ ಶಾಕ್ ಹೆಚ್ಚಾಗಿ ತಗಲುತ್ತಿದ್ದರೆ ಮನೆಯ ಕರೆಂಟ್ ಸ್ವಿಚ್ ಇದ್ದಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಡಬೇಕು. ಸಾಲ ಹೆಚ್ಚಾಗಿ ಸಂಪಾದನೆ ಸಾಕಾಗದಿದ್ದರೆ ಮನೆಯ ಉತ್ತರ ಭಾಗದಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು. ಮನೆಯಲ್ಲಿ ಕಾಗದಪತ್ರಗಳು, ಬೆಲೆಬಾಳುವ ವಸ್ತುಗಳು, ಹಣ ಇವುಗಳನ್ನು ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಮಕ್ಕಳ ಕೋಣೆಗಳಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ನೇತಾಕುವುದರಿಂದ ಅವರ ಬುದ್ಧಿವಂತಿಕೆ, ಸಂತೋಷ ಹೆಚ್ಚುತ್ತದೆ. ಯಾವುದೇ ಒಬ್ಬ ವ್ಯಕ್ತಿ ಮಾನಸಿಕ ಸಮಸ್ಯೆ ಇದ್ದವರು ಮನೆಯ ಜಾಯಿಂಟ್ ಕೋಣೆಯಲ್ಲಿ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು. ಅಡುಗೆ ಮನೆಯಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ನೇತಾಕುವುದರಿಂದ ಅಡುಗೆಯಲ್ಲಿ ಪಾಸಿಟಿವ್ ಎನರ್ಜಿ ಉತ್ಪಾದನೆಯಾಗುತ್ತದೆ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.