ನಾಲಿಗೆಯು ರುಚಿಯನ್ನು ತಿಳಿಸುವ ಅಂಗವಾಗಿದೆ. ನಾಲಿಗೆಯ ಬಣ್ಣದಿಂದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಅದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಆಹಾರ, ನಿದ್ರೆ ಕೊರತೆ ಮುಂತಾದವುಗಳಿಂದ ನಾಲಿಗೆ ಬಣ್ಣ ಬದಲಾಗುತ್ತದೆ. ಧೂಮಪಾನ ಬಳಸುವುದರಿಂದ ನಾಲಿಗೆ ಮೇಲೆ ಹಳದಿ ಬಿಳಿ ಪದರ ಹೆಪ್ಪುಗಟ್ಟುತ್ತದೆ ಆಗ ನಾಲಿಗೆ ಕೆಂಪು, ಕಪ್ಪು ಬಣ್ಣಕ್ಕೆ ಬದಲಾಗುತ್ತದೆ ಇದು ಅಪಾಯಕಾರಿ. ನಾಲಿಗೆ‌ ಆರೋಗ್ಯವಾಗಿದ್ದರೆ ತಿಳಿ ಗುಲಾಬಿ ಬಣ್ಣದಲ್ಲಿರುತ್ತದೆ. ನಾಲಿಗೆ ಬಿಳಿ ಪದರವನ್ನು ಹೊಂದಿದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ರಕ್ತಹೀನತೆ, ಜ್ವರದಿಂದಾಗಿ ನಾಲಿಗೆ ಬಣ್ಣ ಕಡು ಕೆಂಪು ಆಗುತ್ತದೆ ಇದಲ್ಲದೆ ವಿಟಮಿನ್ ಬಿ 12 ರ ಕೊರತೆಯಿಂದಲೂ ಕಡು ಕೆಂಪಾಗುತ್ತದೆ. ಹಾಗೂ ನಾಲಿಗೆಯ ಕೆಳಗಿನ ಭಾಗವು ಡಾರ್ಕ್ ಕೆಂಪು ಬಣ್ಣದ್ದಾಗಿದ್ದರೆ ಕರುಳಿನಲ್ಲಿ ಉಷ್ಣತೆಯು ಹೆಚ್ಚಾಗಿದೆ ಎಂದು ಅರ್ಥ. ನಾಲಿಗೆಯ ಮೇಲಿನ ದಪ್ಪ ಹಳದಿ ಪದರವು ಓವರ್ ಈಟಿಂಗ್ ನ ಸಂಕೇತವಾಗಿದೆ ಅಲ್ಲದೇ ಪಿತ್ತಜನಕಾಂಗ ಅಥವಾ ಬಾಯಿಯಲ್ಲಿ ಅತಿಯಾದ ಬ್ಯಾಕ್ಟೀರಿಯಾದಿಂದ ನಾಲಿಗೆ ಮೇಲೆ ಹಳದಿ ಪದರವು ಸಂಗ್ರಹವಾಗುತ್ತದೆ ಇದು ದಣಿವು, ಜ್ವರಕ್ಕೆ ಕಾರಣವಾಗಬಹುದು.

ಹೆಚ್ಚುವರಿ ಕೆಫೀನ್, ಧೂಮಪಾನ ಅಥವಾ ಮಧ್ಯದಿಂದ ನಾಲಿಗೆ ಕಂದು ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ಆಕಸ್ಮಿಕ ನಾಲಿಗೆ ಕಚ್ಚುವಿಕೆ, ಒಣ ಅಥವಾ ತೀಕ್ಷ್ಣವಾದ ಆಹಾರದಿಂದಾಗಿ ಬಾಯಿ ಗುಳ್ಳೆಗಳು ಸಂಭವಿಸುತ್ತವೆ. ಈ ಗುಳ್ಳೆಗಳು ವಾರಕ್ಕಿಂತ ಹೆಚ್ಚು ದಿನಗಳವರೆಗೆ ಇದ್ದರೆ ಇದನ್ನು ನಿರ್ಲಕ್ಷಿಸಬಾರದು ಇದು ಅಲ್ಸರ್ ಗೆ ಕಾರಣವಾಗುತ್ತದೆ. ಆಗಾಗ್ಗೆ ಗುಳ್ಳೆಗಳು ಬರುತ್ತಿದ್ದರೆ ಹಾರ್ಮೋನ್ ಅಸಮತೋಲನದ ಸಂಕೇತವಾಗಿದೆ. ಹೃದಯದ ಸಮಸ್ಯೆ ಮತ್ತು ರಕ್ತ ದೇಹದಲ್ಲಿ ಸರಿಯಾಗಿ ಹರಿಯದೆ ಇದ್ದರೆ ನಾಲಗೆಯ ಬಣ್ಣ ನೇರಳೆ ಬಣ್ಣಕ್ಕೆ  ತಿರುಗುತ್ತದೆ. ನಾಲಿಗೆ ಮೇಲಿನ ಕಪ್ಪು ಕಲೆಗಳು ದೇಹದಲ್ಲಿ ರಕ್ತದ ಕೊರತೆ, ಮಧುಮೇಹವನ್ನು ಸೂಚಿಸುತ್ತವೆ. ರಕ್ತದಲ್ಲಿ ಅಮ್ಲಜನಕ ಸರಿಯಾಗಿ ಹರಿಯದೆ ಇದ್ದರೆ ನಾಲಿಗೆಯ ಬಣ್ಣ ನೀಲಿಯಾಗುತ್ತದೆ. ಇದರಿಂದ ಶ್ವಾಸಕೋಶದ ಸಮಸ್ಯೆ, ಕಿಡ್ನಿ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಏನಾದರೂ ಇದ್ದರೆ ನಾಲಿಗೆ ಗ್ರೇ ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

Leave a Reply

Your email address will not be published. Required fields are marked *