ವಿನೋದ ಪ್ರಭಾಕರ್ ಕುಟುಂಬದವರ ಅಪರೂಪದ ಕ್ಷಣಗಳು

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Actor Prabhakar Family: ವಿನೋದ ಪ್ರಭಾಕರ್ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ದಿವಂಗತ ಟೈಗರ್ ಪ್ರಭಾಕರ್ (Actor Prabhakar) ಅವರ ಮಗ. ಕನ್ನಡ ಉದ್ಯಮದಲ್ಲಿ ಸಾಧಾರಣ ಫೈಟರ್ ಆಗಿ ಬಂದು ಕನ್ನಡ ಸಿನಿಮಾ ಉದ್ಯಮವನ್ನು ಆಳುವ ಹಂತಕ್ಕೆ ಬೆಳೆದರು. ನಂತರ ತೆಲುಗು, ತಮಿಳಿನಲ್ಲಿಯೂ ಸಹ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ದೊಡ್ಡ ನಟ ಟೈಗರ್ ಪ್ರಭಾಕರ್ (Tiger Prabhakar) ಅವರ ಪುತ್ರ ವಿನೋದ್ ಪ್ರಭಾಕರ್ ಇಂದು ನಮ್ಮ ಜೊತೆ ಇದ್ದಾರೆ. 2015 ರಲ್ಲಿ ಗಡಿಪಾರ್ ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್ ಟೈಸನ್, ಕ್ರ್ಯಾಕ್, ಬೆಳ್ಳಿ, ಗಜೇಂದ್ರ, ಹೋರಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿನೋದ್ ಪ್ರಭಾಕರ್ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ದರ್ಶನ್ ಅವರ ಗೆಳೆಯನ ಪಾತ್ರ ಎನ್ನಲಾಗುತ್ತಿದೆ. ಈ ಹಿಂದೆ ದರ್ಶನ್ ನಟಿಸಿದ್ದ ನವಗ್ರಹ ಸಿನಿಮಾದಲ್ಲಿಯೂ ವಿನೋದ್ ಪ್ರಭಾಕರ್ ನಟಿಸಿದ್ದರು. ನಟ ವಿನೋದ್ ಪ್ರಭಾಕರ್ ಹಾಗೂ ಶೋಭಿತಾ ರಾಣಾ ಅಭಿನಯದ ‘ಶ್ಯಾಡೋ’ ಸಿನಿಮಾ ರಿಲೀಸ್ ಆಗುತ್ತಿದೆ. ತುಂಬ ವಿಭಿನ್ನವಾಗಿ ಈ ಚಿತ್ರ ತಯಾರಾಗಿದ್ದು ಬೇರ್ ಬಾಡಿಯಲ್ಲಿ ವಿನೋದ್ ಫೈಟ್ ಮಾಡಲಿದ್ದಾರೆ. ಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ‘ಶ್ಯಾಡೊ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ.

ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾ ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು ಎಲ್ಲೋ ಒಂದು ಕಡೆ ಭಯ ಇದೆ ಆದರೂ ಒಳ್ಳೇ ಕಥೆಯೊಂದಿಗೆ ಈ ಬಾರಿ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ ಇಲ್ಲಿಯವರೆಗೂ ನನ್ನ ಸಿನಿಮಾಗಳಲ್ಲಿ ಮಾಸ್ ಅಂಶಗಳೇ ಹೆಚ್ಚಿರುತ್ತಿತ್ತು ಆದ್ರೆ, ಶ್ಯಾಡೋ ಸಿನಿಮಾ ಮಾತ್ರ ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗಲಿದೆ ಅಂದುಕೊಂಡಿದ್ದಕ್ಕಿಂತ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇಲ್ಲಿಯೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು ಎಂದು ಹೇಳಿದ್ದಾರೆ ವಿನೋದ್. ಇನ್ನು ಈ ಚಿತ್ರದಲ್ಲಿ ವಿನೋದ್‌ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಬರೆದಿದ್ದಾರೆ ಅಚ್ಚು ಅವರ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ಚೋಟಾ ಪ್ರಸಾದ್ ಸಂಕಲನ, ವಿನೋದ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನು ವಿನೋದ್ ಪ್ರಭಾಕರ್ ಅವರ ಜೀವನ ನೋಡುವುದಾದರೆ ಟೈಗರ್ ಪ್ರಭಾಕರ್ ಅವರಂತೆಯೇ ಇವರು ಕೂಡಾ. ಇವರು ನಿಶಾ ಎಂಬವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸುಮಾರು ಹದಿನಾಲ್ಕು ವರ್ಷಗಳ ಕಾಲ ಪ್ರೀತಿಸಿ ನಂತರ ೨೦೧೪ ರಲ್ಲಿ ಸಪ್ತಪದಿ ತುಳಿದಿದ್ದಾರೆ. ನಿಶಾ ಮೂಲತಃ ಹೈದ್ರಾಬಾದ್ ನ ತೆಲುಗು ಕುಟುಂಬಕ್ಕೆ ಸೇರಿದವರು ಹಾಗೂ ಇವರೊಬ್ಬ ದಕ್ಷ ಆರ್ಮಿ ಆಫೀಸರ್ ಒಬ್ಬರ ಮಗಳು. ವಿನೋದ್ ಪ್ರಭಾಕರ್ ಅವರು ತಮ್ಮ ಕುಟುಂಬದ ಜೊತೆ ಕಾಲ ಕಳೆದ ಕೆಲವು ಅಪರೂಪದ ಫೋಟೋಗಳನ್ನು ನೀವು ನೋಡಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *