ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮನೆಮದ್ದು, ಮನೆಯಲ್ಲೇ ಸುಲಭವಾಗಿ ತಯಾರಿಸಿ

0 4

ಈಗೀಗ ಮನುಷ್ಯನಿಗೆ ಹೊರಗಡೆ ಇಂದ ಸ್ವಲ್ಪ ಗಾಳಿ ಬಂದರೂ, ಧೂಳಿನಿಂದ ಕೂಡಿದ ವಾತಾವರಣ ಇದ್ದರು ಸಹ ಅಲರ್ಜಿ, ಶೀತ, ತಲೆನೋವು, ಜ್ವರ, ಹೊಟ್ಟೆ ನೋವು ಎಲ್ಲವೂ ಶುರು ಆಗತ್ತೆ. ಹಿಂದಿನ ಕಾಲದಲ್ಲಿ ಹಬ್ಬ ಹರಿದಿನಗಳಲ್ಲಿ ತುಂಬಾ ಖುಷಿಯಿಂದ ಆಚರಣೆ ಮಾಡುತ್ತಾ ಇದ್ದರು. ಆದರೆ ಇವತ್ತಿನ ದಿನಗಳಲ್ಲಿ ನಾವು ಯಾವುದೇ ಹಬ್ಬಗಳಲ್ಲಿ ಪಾಲ್ಗೊಂಡರು, ಎಲ್ಲಾದ್ರೂ ಹೋದ್ರೆ ಸಾಕು ಏನಾದರು ಒಂದು ಖಾಯಿಲೆಗಳು ಬಂದುಬಿಡುತ್ತದೆ. ಅದನ್ನ ಸುಧಾರಿಸಿಕೊಳ್ಳೋಕೇ ಸುಮಾರು ಒಂದು ವಾರ ಬೇಕಾಗತ್ತೆ.

ಇದಕ್ಕೆಲ್ಲ ಕಾರಣ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದು. ನಮ್ಮ ದೇಹದಲ್ಲಿ ಹೊರಗಿನ ರೋಗಾಣುಗಳು ಅಥವಾ ವೈರಸ್ ಗಳು ಮಾಡುವ ದಾಳಿಯನ್ನು ತಡೆಯಲು ಆಗದೆ ಇರುವುದು. ನಮ್ಮ ದೇಹದಲ್ಲಿ ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಹೊರಗಿನ ಸಣ್ಣ ಪುಟ್ಟ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಬರೀ ಊಟ ಮಾಡಿ ತರಕಾರಿ ತಿನ್ನುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಲ್ಲ ಅದಕ್ಕೆ ಕೆಲವು ಮನೆ ಮದ್ದುಗಳನ್ನು ಸಹ ಮಾಡಬೇಕು. ಹಾಗಾಗಿ ಮನೆಯಲ್ಲಿಯೇ ಇರುವ ಔಷಧೀಯ ಗುಣಗಳನ್ನು ಹೊಂದಿರುವ ವಸ್ತುಗಳನ್ನು ಬಳಸಿಕೊಂಡು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಅಂತ ನೋಡೋಣ.

ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ನಂತರ ೫/೬ ತುಳಸಿ ಎಲೆಗಳನ್ನು ಹಾಕಿ ಅರ್ಧ ಚಮಚ ಜೀರಿಗೆ, ೨ ಲವಂಗ, ಅರ್ಧ ಚಮಚ ಸೋಂಪು ಕಾಳು, ೪ ಮೆಣಸಿನ ಕಾಳು(ಕುಟ್ಟಿ ಪುಡಿ ಮಾಡಿರಬೇಕು), ಚಿಕ್ಕದಾಗಿ ಹೆಚ್ಚಿದ ಒಂದು ಬೆಳ್ಳುಳ್ಳಿ, ಅರ್ಧ ಇಂಚಿನಷ್ಟು ಶುಂಠಿ, ಒಂದು ವಿಲ್ಯದೆಲೆ, ಕಟ್ ಮಾಡಿದ ಒಂದು ಪುಟ್ಟ ಈರುಳ್ಳಿ(ಈರುಳ್ಳಿ ಇಂದ ಗಂಟಲಲ್ಲಿ ಕೆರೆತ, ಕಫ ಕಟ್ಟಿದ್ದರೆ ಕಡಿಮೆ ಆಗತ್ತೆ). ಒಂದು ಚಮಚ ಅರಿಶಿನ ಪುಡಿ ಹಾಗೂ ಒಂದು ಪಲಾವ್ ಎಲೆ (ಗಂಟು ನೋವು, ಕೀಲು ನೋವಿಗೆ ಪಲಾವ್ ಎಲೆ ಒಳ್ಳೆಯದು) ಹಾಕಿ, ಮಧ್ಯಮ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕುದಿಸಿ ಎರಡು ನಿಮಿಷದ ನಂತರ ಒಂದು ಚಮಚ ಬೆಲ್ಲವನ್ನು ಹಾಕಬೇಕು(ಬೆಲ್ಲ ಅಜೀರ್ಣ ಮತ್ತು ಆಸಿಡಿಟಿ ಸಮಸ್ಯೆಯನ್ನ ದೂರ ಮಾಡುತ್ತದೆ). ಒಂದು ಲೋಟ ನೀರು ಅರ್ಧ ಲೋಟ ಆಗುವಷ್ಟು ಕುದಿಸಬೇಕು. ನಂತರ ಗ್ಯಾಸ್ ಆಫ್ ಮಾಡಿ ಸ್ವಲ್ಪ ತಣ್ಣಗಾದ ನಂತರ ಕುಡಿಯಬಹುದು. ಇದನ್ನ ಮಕ್ಕಳಿಗೆ ಕೂಡ ೨/೩ ಸ್ಪೂನ್ ಕೊಡಬಹುದು.

ತುಂಬಾ ಕಾಲು ನೋವು ಶೀತ ಕೆಮ್ಮು ಜ್ವರ ಇದ್ದರೆ, ಅಂತವರು ಇದನ್ನ ಬೆಳಿಗ್ಗೆ ತಿಂಡಿ ಆದ ಮೇಲೆ ಮತ್ತು ರಾತ್ರಿ ಊಟ ಆದ ನಂತರವೂ ಕುಡಿಯಬೇಕು. ಕಾಯಿಲೆ ಇರಲಿ ಬಿಡಲಿ, ವಾರದಲ್ಲಿ ೨/೩ ದಿನ ಈ ರೀತಿ ಕಶಾಯಗಳನ್ನು ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ನಾವು ಯಾವಾಗಲೂ ಆರೋಗ್ಯದಿಂದಲೂ ಇರಬಹುದು.

Leave A Reply

Your email address will not be published.