ಗರ್ಭಿಣಿಯರು ಪಪ್ಪಾಯ ಹಣ್ಣನ್ನು ತಿನ್ನದೇ ಇರುವುದು ಒಳ್ಳೆಯದು ಈ ಹಣ್ಣು ಗರ್ಭಿಣಿಯರಿಗೆ ಈ ಸಮಯದಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕಂದ್ರೆ ಇದು ಅಧಿಕ ಉಷ್ಣ ಇರುವ ಹಣ್ಣು ಇದರಿಂದ ಗರ್ಭ ಪಾತ ಆಗುವಂತಹ ಸಂದರ್ಭ ಹೆಚ್ಚು. ಹಾಗಾಗಿ ಪಪ್ಪಾಯ ಹಣ್ಣನ್ನು ತಿನ್ನಬಾರದು. ಹಾಗೇ ಅನಾನಸ್ ಕೂಡ ತಿನ್ನಬಾರದು. ಈ ಹಣ್ಣಿನಲ್ಲಿರುವ ಬ್ರೊಮೆಲಾನಿಲ್ ಎಂಬ ಅಂಶ ಅಧಿಕವಾಗಿದ್ದು ಇದು ಗರ್ಭ ಕಂಠವನ್ನ ಮೆದುವಾಗಿಸತ್ತೆ. ಈ ಗರ್ಭ ಕಂಠ ಮ್ರದು ಆದರೆ ಗರ್ಭ ಹೋಗಿಬಿಡತ್ತೆ .

ದ್ರಾಕ್ಷಿ ಹಣ್ಣುಗಳನ್ನೂ ಸಹ ತಿನ್ನಬಾರದು‌. ಇದರಲ್ಲಿ ವಿಟಮಿನ್ ಎ ಅಕಶ ಇರತ್ತೆ ಆದರೂ ಸಹ ಇದನ್ನ ಬೆಳೆಯೋವಾಗ ಅಧಿಕ ಕ್ರಿಮಿ ನಾಶಕ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಒಳ್ಳೆಯದಲ್ಲ. ತಿನ್ನಬೇಕು ಅನಸಿದ್ರೆ ಘರಡು ವಾರಕ್ಕೆ ಒಮ್ಮೆ ಉಪ್ಪು ನೀರಿನಲ್ಲಿ ಸರಿಯಾಗಿ ತೊಳೆದು ತಿನ್ನಬೇಕು. ಪೀಚ್ ಹಣ್ಣುಗಳನ್ನೂ ಸಹ ತಿನ್ನಬಾರದು. ಇದರಲ್ಲೀ ಸಹ ಅಧಿಕ ಉಷ್ಣ ಅಂಶ ಇರತ್ತೆ. ಇದರಿಂದ ರಕ್ತ ಸ್ರಾವ, ಗಂಟಲು ಕೆರೆತ, ಅಲರ್ಜಿ ಆಗತ್ತೆ. ‌ಹಾಗೇ ಲಿಚಿ ಹಣ್ಣನ್ನೂ ಕೂಡಾ ತಿನ್ನಬಾರದು ಇದರಲ್ಲೀ ಕೂಡ ಅಧಿಕ ಉಷ್ಣ ಅಂಶ ಇರತ್ತೆ. ಇದರಲ್ಲಿ ಸಕ್ಕರೆ ಅಂಶ ಅತಿಯಾಗಿ ಇರುವಕದರಿಂದ ಗರ್ಭಿಣಿಯರಿಗೆ ಮಧುಮೇಹ ಬಂದರೂ ಬರಬಹುದು. ಅಷ್ಟೇ ಅಲ್ಲ ದೇಹದ ತೂಕವನ್ನು ಸಹ ಬೇಗ ಹೆಚ್ಚು ಮಾಡತ್ತೆ. ಇನ್ನು ಸೀತಾಫಲ ಇದರಲ್ಲೀ ಕೂಡಾ ಉಷ್ಣ ಅಂಶ ಅಧಿಕವಾಗಿರತ್ತೆ. ಆದರೆ ಇದನ್ನ ವಾರಕ್ಕೆ ಒಂದು ತಿನ್ನಬಹುದು. ಹಾಗೇ ಸೀಬೆ / ಪೇರಳೇ ಕಾಯಿ. ಇದನ್ನ ತಿನ್ನಬಹುದು ಆದರೆ, ಸಿಪ್ಪೆ ತೆಗೆದು ತಿನ್ನಬೇಕು ಇಲ್ಲವಾದರೆ ಸಿಪ್ಪೆ ಸಮೇತ ತಿಂದರೆ ಮಲಬದ್ದತೆ ಉಂಟಾಗತ್ತೆ. ನಕ್ಷತ್ರ ಸೇಬು ಇದನ್ನ ಕೂಡಾ ಗರ್ಭಿಣಿಯರು ತಿನ್ನಬಾರದು ಇದರಲ್ಲಿಯೂ ಸಹ ಅಧಿಕ ಉಷ್ಣ ಅಂಶ ಇರತ್ತೆ. ಇದನ್ನ ತಿನ್ನುವುದರಿಂದ ರಕ್ತ ಸ್ರಾವ ಆಗುವ ಸಾಧ್ಯತೆ ಹೆಚ್ಚು.

ಇವುಗಳ ಜೊತೆಗೆ ಗರ್ಭಿಣಿಯರು ಜಂಕ್ ಫುಡ್ ಗಳನ್ನು ಸಹ ತಿನ್ನಬಾರದು. ಹೆಚ್ಚು ಸಿಹಿ ಪದಾರ್ಥಗಳು, ಪಿಜ್ಜಾ, ಬರ್ಗರ್, ಎಣ್ಣೆಯಲ್ಲಿ ಕರಿದ ತಿಂಡಿಗಳು ಇವುಗಳನ್ನ ಮಗುವಿನ ಆರೋಗ್ಯದ ದ್ರಷ್ಟಿಯಿಂದ ತಿನ್ನಬಾರದು. ಹಸಿ ಮೊಟ್ಟೆ ಮತ್ತು ಹಸೀ ಮಂಸ ಮತ್ತೆ ಅರ್ಧ ಬೇಯಿಸಿದ ಮೊಟ್ಟೆ ಮತ್ತು ಅರ್ಧ ಬೇಯಿಸಿದ ಮಾಂಸ ಅವುಗಳನ್ನು ಹಾಗೂ ತಿನ್ನಲೇಬಾರದು. ಇವು ತುಂಬಾ ಅಪಾಯಕಾರಿ. ಹಾಗೇ ಹಸಿ ಹಾಲು ಕೂಡಾ. ಅದನ್ನೂ ಕೂಡಾ ಚೆನ್ನಾಗಿ ಕುದಿಸಿ ಕುಡಿಯಬೇಕು.

ಇನ್ನೂ ಸಮುದ್ರ ಆಹಾರಗಳು ಅಂದ್ರೆ, ಶಾರ್ಕ್ ಏಡಿ ಮುಂತಾದವುಗಳನ್ನ ತಿನೊನಲೇಬಾರದು ಯಾಕೆಂದ್ರೆ ಅವುಗಳಲ್ಲಿರುವ ಪರ್ಕುರಿ ಅಕಶ ಹೆಚ್ಚಾಗಿರುವುದರಿಂದ ಮಗುವಿನ ಮೆದುಳಿನ ಬೆಳವಣಿಗೆ ಸರಿಯಾಗಿ ಆಗಲ್ಲ. ಹಾಗಾಗಿ ಗರ್ಭಿಣಿಯರು ಸಮುದ್ರದ ಆಹಾರಗಳನ್ನ ತಿನ್ನಬಾರದು. ಹಾಗೇ ಟೀ, ಕಾಫಿ, ಆಲ್ಕೋಹಾಲ್, ಸಿಗರೆಟ್ ಇವೆಲ್ಲವನ್ನೂ ಬಿಡಬೇಕು. ಮೊಳಕೆ ಬಂದಿರುಲಂತಹ ತರಕಾರಿಗಳು, ಕಾಳುಗಳನ್ನ ಹಸಿಯಾಗಿ ಗರ್ಭಿಣಿ ಸ್ತ್ರೀಯರು ತಿನ್ನಬಾರದಂತೇ ಬೇಯಿಸಿ ತಿನ್ನಬೇಕು. ಹಾಗೆ ಯಾವುದೇ ಹಣ್ಣು , ತರಕಾರಿ , ಸೊಪ್ಪುಗಳನ್ನು ತಿನ್ನುವಾಗ ಚೆನ್ನಾಗಿ ೨/೩ ಬಾರಿ ತೊಳೆದು ತಿನ್ನಬೇಕು. ಒಳ್ಳೇ ಆಹಾರ ತೆಗೆದುಕೊಳ್ಳಬೇಕು ಹೆಚ್ಚು ನಿರು ಕುಡಿಯಬೇಕು. ಡ್ರೈ ಫ್ರೂಟ್ಸ್ ಚೆನ್ನಾಗಿ ತಿನ್ನಬೇಕು ಅದರ ಜೊತೆಗೇ ಸಣ್ಣ ಪುಟ್ಟ ವ್ಯಾಯಾಮಗಳನ್ನೂ ಸಹ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!