ಭಾರತವು ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊಂದಿದೆ ಸುಸಂಸ್ಕೃತವಾದ ಆಚಾರ ವಿಚಾರಗಳನ್ನೊಳಗೊಂಡ ಪುರಾವೆಗಳು ಹಾಗೂ ದೇವಾಲಯಗಳು ಇಂದಿಗೂ ಜೀವಂತವಾಗಿರುವುದನ್ನು ನೋಡಬಹುದು. ನಾವಿಂದು ಅಂತಹ ದೇವಾಲಯಗಳಲ್ಲಿ ಒಂದಾದ ತಿರುಪತಿಯ ದೇವಾಲಯದಂತೆ ತಿಳಿದುಕೊಳ್ಳೋಣ.

ತಿರುಪತಿ ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರ ಸಾಕ್ಷಾತ್ ಭಗವಂತನೇ ನೆಲೆ ನಿಂತಿರುವ ಪುಣ್ಯ ಭೂಮಿ ಇದು ಶ್ರೀವಿಷ್ಣು ವೈಕುಂಠವನ್ನು ಬಿಟ್ಟರೆ ನೆಲೇನಿಂತಿರುವುದು ಇದೊಂದೇ ಜಾಗ ಎಂಬ ನಂಬಿಕೆ ಇದೆ. ಸಪ್ತಗಿರಿವಾಸನ ದಿವ್ಯ ಕ್ಷೇತ್ರದಲ್ಲಿ ನಿತ್ಯವೂ ಹಬ್ಬವೇ ಭಗವಂತನ ನಾಮ ಸ್ಮರಣೆಯೆ ಭಕ್ತರ ಪಾಲಿನ ಭವ್ಯ ಸಾಗರ ಅದು ಎಂತಹದ್ದೇ ಕಷ್ಟಗಳಿರಲಿ ಎಂತಹದ್ದೇ ಆರ್ಥಿಕ ಸಮಸ್ಯೆಗಳು ಭಾದಿಸುತ್ತಿರಲಿ ಅದಕ್ಕೆಲ್ಲ ಪರಿಹಾರ ತಿರುಪತಿ ಒಂದೇ ಎಂಬ ನಂಬಿಕೆ ಇದೆ. ಇಲ್ಲಿಗೆ ಬಂದು ಭಕ್ತಿಯಿಂದ ಭಗವಂತನನ್ನು ನೆನೆದರೆ ಸಾಕು ಇಷ್ಟಾರ್ಥಗಳು ಈಡೇರಲಿಲ್ಲ ಎಂಬ ಮಾತೇ ಇಲ್ಲ ಹೀಗಾಗಿ ನಿತ್ಯವೂ ಸಾವಿರಾರು ಭಕ್ತರು ಭಗವಂತನ ಗಿರಿಯನ್ನು ಏರಿ ಬರುವುದು.

ಆದರೆ ತಿರುಪತಿಗೆ ಹೋದಾಗ ಕೆಲವೊಂದು ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕೆಂದು ಪದ್ಧತಿ ಇದೆ. ಅಪ್ಪಿ ತಪ್ಪಿ ಅದನ್ನು ಮರೆತಿದ್ದೆ ಆದಲ್ಲಿ ಕಷ್ಟ ಅನ್ನುವುದು ಕಟ್ಟಿಟ್ಟ ಬುತ್ತಿ. ಭಗವಂತನ ದರ್ಶನದಿಂದ ಪುಣ್ಯ ಬರುವುದಿರಲಿ ಪಾಪದ ಮುಟೆಯೆ ಹೆಗಲೆರದಿದ್ದರೆ ಸಾಕು ಎನ್ನುವಂತಹ ಪರಿಸ್ಥಿತಿ ಎದುರಾಗಬಹುದು. ಹಾಗಾದರೆ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮೊದಲು ಯಾವ ದೇವರ ದರ್ಶನವನ್ನು ಮಾಡಬೇಕು ಮರೆಯದೆ ಪಾಲಿಸಬೇಕಾದ ಮೂರು ರಹಸ್ಯ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳೋಣ.

ಕಲಿಯುಗದ ಪ್ರತ್ಯಕ್ಷ ದೈವ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ. ಸಾಕ್ಷಾತ್ ನಾರಾಯಣನೆ ಧರೆಗಿಳಿದು ಬಂದು ಲಕ್ಷ್ಮಿ, ಪದ್ಮಾವತಿಯ ಸಹಿತನಾಗಿ ವೆಂಕಟೇಶ್ವರನ ಸ್ವರೂಪನಾಗಿ ತಿರುಪತಿಯಲ್ಲಿ ನೆಲೆ ನಿಂತಿದ್ದಾನೆ ಹೀಗಾಗಿಯೇ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತ ಸಮೂಹ ವರ್ಷ ವರ್ಷವೂ ಹೆಚ್ಚುತ್ತಿದೆ. ತಿರುಪತಿಯಲ್ಲಿ ತಿಮ್ಮಪ್ಪನ ದೇಗುಲ ಮಾತ್ರವಲ್ಲ ಇನ್ನು ಹಲವಾರು ದೇವಸ್ಥಾನಗಳಿವೆ ಇಲ್ಲಿಗೆ ಭೇಟಿನೀಡಿದಾಗ ಎಲ್ಲ ದೇವರಿಗು ಪ್ರದಕ್ಷಿಣೆ ಹಾಕಿ ಬರುವುದನ್ನು ಮರೆಯಬೇಡಿ.

ತಿಮ್ಮಪ್ಪನ ದೇಗುಲದಲ್ಲಿರುವ ಬೆಳ್ಳಿ ಬಾಗಿಲಿಗೆ ಬಹಳಷ್ಟು ವೈಶಿಷ್ಟ್ಯತೆ ಇದೆ. ವಿಮಾನ ಪ್ರದಕ್ಷಿಣಂ ಸ್ಥಳದಲ್ಲಿ ವರದರಾಜ ದೇಗುಲವಿದೆ. ಈ ವರದರಾಜ ಸ್ವಾಮಿಯು ವಿಷ್ಣುವಿನ ಮತ್ತೊಂದು ರೂಪ ಹೀಗಾಗಿ ದೇವಾಲಯವನ್ನು ಪ್ರವೇಶ ಮಾಡಿತ್ತಿದ್ದಂತೆ ವರದರಾಜ ಸ್ವಾಮಿಯು ಕೂಡ ಭಕ್ತರಿಗೆ ವರವನ್ನು ನೀಡುತ್ತಾನೆ.

ಇನ್ನು ಯೋಗನರಸಿಂಹ ದೇವಾಲಯ. ಯೋಗನರಸಿಂಹನು ವಿಷ್ಣುವಿನ ಐದನೇ ಅವತಾರ ಎನ್ನಲಾಗಿದೆ ಈ ದೇವಾಲಯವು ಕೂಡ ವರದರಾಜ ದೇವಾಲಯದ ಸಮೀಪವೇ ಇದೆ ವಿಮಾನ ಪ್ರದಕ್ಷಿಣ ಸ್ಥಳದಲ್ಲಿ ಯೋಗನರಸಿಂಹನು ಪಶ್ಚಿಮಾಭಿಮುಖವಾಗಿ ಕುಳಿತಿದ್ದಾನೆ. ಧ್ಯಾನಾಸಕ್ತನಾಗಿ ಕುಳಿತಿರುವ ಯೋಗನರಸಿಂಹ ಸ್ವಾಮಿಯನ್ನು ಬೆಡುವುದರಿಂದ ಮಾಡಿದ ಪಾಪಗಳು ಅಲ್ಲೇ ಕರಗಿ ಹೋಗುತ್ತದೆ.ಎಲ್ಲಿ ಪರಮಾತ್ಮನಿರುತ್ತಾನೆ ಅಲ್ಲೆಲ್ಲ ಗರುಡದೇವನು ಇರುತ್ತಾನೆ.

ಪರಮಾತ್ಮನ ಅತೀ ಸಾನಿಧ್ಯ ದೊರಕುವುದೆಂದರೆ ಈ ಗರುಡನಿಗೆ ಮಾತ್ರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಸನಿಹದಲ್ಲೇ ಕೈ ಮುಗಿದು ನಿಂತಿರುತ್ತಾನೆ ಈ ಗರುಡದೇವ.ಆರಡಿ ಎತ್ತರದ ಗರುಡ ವಿಗ್ರಹವನ್ನು ಚಿನ್ನದ ಬಾಗಿಲಿನ ಎದುರಲ್ಲಿ ಸ್ಥಾಪನೆ ಮಾಡಲಾಗಿದೆ. ಗರ್ಭಗುಡಿಯ ಸ್ವರ್ಣ ಬಾಗಿಲಿನ ಅಕ್ಕ ಪಕ್ಕದಲ್ಲಿ ದ್ವಾರಪಾಲಕರಾದ ಜಯ ವಿಜಯ ಸಹೋದರರು ನಿಂತಿದ್ದಾರೆ ಅವರ ಎದುರಿನಲ್ಲಿ ಗರುಡ ದೇವ ತಿಮ್ಮಪ್ಪನಿಗೆ ಕೈ ಮುಗಿದು ನಿಂತಿರುತ್ತಾನೆ.

ತಿರುಮಲ ಬೆಟ್ಟದ ಮೇಲಿರುವ ಭುವರಹನಾಥ ಸ್ವಾಮಿ ದೇವಾಲಯವು ವೆಂಕಟೇಶ್ವರ ದೇವಾಲಯಕ್ಕಿಂತ ಅತ್ಯಂತ ಪುರಾತನವಾದದ್ದು ವೆಂಕಟೇಶ್ವರನಿಗೆ ಸಪ್ತಗಿರಿಯಲ್ಲಿ ನೆಲೆನಿಲ್ಲಲು ಜಾಗ ಕೊಟ್ಟಿದ್ದೆ ಈ ಭುವರಹನಾಥ ಸ್ವಾಮಿ. ತಿರುಮಲದಲ್ಲಿ ಉತ್ತರದಲ್ಲಿರುವ ಪುಷ್ಕರಣಿಯ ಬಳಿ ಭುವರಹನಾಥ ದೇವಾಲಯವಿದೆ ತಿರುಮಲದ ಸಂಪ್ರದಾಯದಂತೆ ದಿನದ ಮೊಟ್ಟಮೊದಲ ನೈವೇದ್ಯ ದಕ್ಕುವುದೇ ಈ ಭುವರಹನಾಥ ಸ್ವಾಮಿಗೆ. ಇದಾದ ನಂತರ ವೆಂಕಟೇಶ್ವರ ಸ್ವಾಮಿಗೆ ಸಲ್ಲುವುದು ಹೀಗಾಗಿಯೇ ತಿರುಪತಿಗೆ ಹೋಗುವ ಭಕ್ತರು ಮೊದಲು ವರಾಹ ಸ್ವಾಮಿಯ ದರುಶನ ಮಾಡಿ ನಂತರ ತಿಮ್ಮಪನನ್ನು ಕಾಣಬೇಕು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಬಕುಲಾಮಾತಾ ಪರಮಾತ್ಮ ಶ್ರೀನಿವಾಸನ ತಾಯಿ. ವೆಂಕಟೇಶ್ವರನ ಸನ್ನಿಧಿಯಲ್ಲಿ ಬಕುಲಾಮಾತಾ ಸನ್ನಿಧಿಯು ಇದೆ ಪುರಾಣ ಐತಿಹ್ಯದ ಪ್ರಕಾರ ಶ್ರೀನಿವಾಸನಿಗೆ ತಯಾರಿಸುವ ಅಡುಗೆ ಜವಾಬ್ದಾರಿಯನ್ನು ಬಕೂಲಾಮಾತೆ ನೋಡಿಕೊಳ್ಳುತ್ತಾರಂತೆ ಹೀಗಾಗಿ ಬಕುಲಾಮಾತಾ ದೇವಾಲಯದಲ್ಲಿ ಕಿಂಡಿ ಇದ್ದು ಅಡುಗೆಮನೆಯ ಆಗು ಹೋಗುಗಳನ್ನು ಬಕುಲಾಮಾತಾ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.

ತಿರುಪತಿ ತಿಮ್ಮಪ್ಪ ಸಾಮಾನ್ಯನಲ್ಲ ದೇವರ ದೇವ ಈ ಲಕ್ಷ್ಮಿನಾರಾಯಣ. ಹೀಗಾಗಿ ಭಗವಂತನ ದರ್ಶನ ಎಲ್ಲ ದೇವರಂತೆ ಮಾಡುವಂತಿಲ್ಲ ನಾರಾಯಣನ ದೇವಾಲಯಕ್ಕೆ ಹೋದಾಗ ಮೊದಲು ಭಗವಂತನ ನಾಮದ ದರ್ಶನ ಮಾಡಬೇಕು ನಂತರ ದೇವರ ಪಾದದಿಂದ ಹಿಡಿದು ಮುಖದವರೆಗೆ ಭಕ್ತಿಯಿಂದ ದರುಶನ ಮಾಡಿ ಅದು ನಿಧಾನವಾಗಿ ದೇವರನ್ನು ಕಣ್ಣುತುಂಬಿಕೊಳ್ಳುವ ಪದ್ಧತಿ ದೇವರಲ್ಲಿ ತನು ಮನವನ್ನು ಲಿನವಾಗಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಬೇಕು

ಇನ್ನು ಎರಡನೇ ವಿಚಾರ ತಿರುಪತಿ ತಿಮ್ಮಪ್ಪನಾಗಲಿ ಅಥವಾ ಬೇರೆಯಾವುದೆ ವಿಷ್ಣು ದೆಗುಲವಾಗಲಿ ಅಲ್ಲಿಗೆ ಹೋದಾಗ ತಪ್ಪದೇ ತುಳಸಿ ಹಾರವನ್ನು ತೆಗೆದುಕೊಂಡು ಹೋಗಿ ಯಾಕೆಂದರೆ ಭಗವಂತ ವಿಷ್ಣುವಿಗೆ ತುಳಸಿಹಾರ ಅತ್ಯಂತ ಪ್ರಿಯವಾದದ್ದು. ಯಾರು ನಾರಾಯಣನಿಗೆ ತುಳಸಿಯನ್ನು ಅರ್ಪಿಸುತ್ತಾರೆ ಅಂತವರ ಸಂಕಷ್ಟಗಳು ಆದಷ್ಟು ಬೇಗ ಪರಿಹಾರವಾಗುತ್ತದೆ ಅಲ್ಲದೆ ತಿಮ್ಮಪ್ಪನ ದೇಗುಲದಲ್ಲಿ ಒಂದು ವೇಳೆ ತುಳಸಿ ಪ್ರಸಾದ ಸಿಕ್ಕಿದ್ದೇ ಆದಲ್ಲಿ ಅದನ್ನು ಎಲ್ಲಿಯೂ ಬಿಸಾಡಬೇಡಿ ಅದು ತಿಮ್ಮಪ್ಪನ ವರ ಪ್ರಸಾದವೆಂದು ಮನೆಗೆ ತಂದು ದೇವರ ಕೊಣೆಯಲ್ಲಿಡಿ ಇದು ನಿಮ್ಮ ಮನೆಯಲ್ಲಿರುವ ದಾರಿದ್ರ್ಯವನ್ನು ಹೊರಹಾಕುತ್ತದೆ.

ಇನ್ನು ಮೂರನೆಯ ವಿಚಾರವೆಂದರೆ ಭಗವಂತ ನಾರಾಯಣನ ದೇವಾಲಯಕ್ಕೆಹೋದರು ಸಹ ವಿಷ್ಣುವಿನ ಜೊತೆಗೆ ಪಕ್ಷಿರಾಜ ಗರುಡದೇವನ ದರುಶನ ಮಾಡುವುದನ್ನು ಮರೆಯಬೇಡಿ. ಶಿವನ ದೇವಸ್ಥಾನದಲ್ಲಿ ಶಿವನ ಮುಂದೆ ನಂದಿ ಇರುವಂತೆ ಭಗವಾನ್ ಶ್ರೀಹರಿಯ ದೇವಾಲಯದಲ್ಲಿ ಗರುಡನ ವಿಗ್ರಹ ಇದ್ದೆ ಇರುತ್ತದೆ ಯಾರು ವಿಷ್ಣುವಿನ ದರುಶನ ಮಾಡಿ ಗರುಡ ದೇವರ ಪ್ರದಕ್ಷಿಣೆ ಹಾಕುತ್ತಾರೋ ಅಂತವರ ಬಾಳಲ್ಲಿ ಹೊಸದೊಂದು ಪರ್ವ ಶುರುವಾಗಲಿದೆ.

ಹೀಗೆ ತಿರುಪತಿಗೆ ಹೋದಾಗ ಕೆಲವೊಂದು ವಿಷಯಗಳನ್ನು ತಪ್ಪದೇ ಪಾಲಿಸಿದರೆ ಭಗವಂತನ ಕೃಪೆ ನಿಮ್ಮಮೇಲಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಅವನ ಕೃಪೆಗೆ ಪಾತ್ರರಾಗೊಣ.

Leave a Reply

Your email address will not be published. Required fields are marked *