ನೀರಿಲ್ಲದೆ ಅಡಿಕೆ ಮರ ಬೆಳೆಸೋದು ಹೇಗೆ, ಇಲ್ಲಿದೆ ರೈತರಿಗೆ ನೈಸರ್ಗಿಕ ಕೃಷಿಯ ಮಾಹಿತಿ

0 21

ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ತುಂಬಾ ಹಣವನ್ನು ಕರ್ಚುಮಾದುತ್ತಾರೆ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ ಇದರಿಂದ ಹಂತ ಹಂತವಾಗಿ ಭೂಮಿಯ ಫಲವತ್ತತೆ ಕುಸಿಯುತ್ತದೆ ಇದರಿಂದ ಇಳುವರಿ ಕಡಿಮೆಯಾಗುತ್ತದೆ ಹಾಗಾದರೆ ಇಂದು ನಾವು ಕಾಲಿ ಇರುವ ಅಡಿಕೆ ತೋಟದಲ್ಲಿ ಶೂನ್ಯ ಬಂಡವಾಳದಲ್ಲಿ ಹೇಗೆ ನೈಸರ್ಗಿಕ ಕೃಷಿಯನ್ನು ಅಳವಡಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ಅಡಿಕೆ ಬೆಳೆ ಉತ್ರ್ಕಷ್ಟವಾದ ಲಾಭ ಕೊಡುತ್ತದೆ. ಆದರೆ ಅಡಿಕೆ ಬೇಳೆಯಲು ಹೆಚ್ಚು ನೀರು ಬೇಕು ಅಂದರೆ ಮಾತ್ರ ಹೆಚ್ಚು ಇಳುವರಿ ಬರುವುದು ಗಿಡ ಉಳಿಯುವುದು ಎಂಬ ತಪ್ಪು ಕಲ್ಪನೆಗಳನ್ನು ನಾವು ಇಟ್ಟುಕೊಂಡಿದ್ದೇವೆ. ಆದರೆ ನಾವು ಗಿಡಗಳಿಗೆ ಹೆಚ್ಚೆಚ್ಚು ನಿರುಗಳನ್ನು ಕೊಟ್ಟು ಅವುಗಳನ್ನು ಹೆಚ್ಚೆಚ್ಚು ರೋಗಗ್ರಸ್ಥವಾಗಿ ಮಾಡುತ್ತಿದ್ದೇವೆ.

ನೀರಿಲ್ಲದೆ ಇರುವಂತಹ ಅಡಿಕೆ ತೋಟಗಳು ಬೇರೆ, ಚೆನ್ನಾಗಿ ಹಸಿರಾಗಿ ಸಮೃದ್ಧಿಯಾಗಿರುವ ಅಡಿಕೆ ತೋಟಗಳಲ್ಲಿ ಬರೆ ಅಡಿಕೆ ಕಂಬಗಳು ನಿಂತಿರುವುದು ಅಂದರೆ ಅಡಿಕೆ ಮರ ಮೇಲೆ ಗರಿಗಳಿಲ್ಲದೆ ಅವು ಬಿದ್ದು ಬರಿ ಕಂಬಗಳಿರುವ ಅಡಿಕೆಮರಗಳನ್ನು ನಾವು ನೋಡುತ್ತೇವೆ.

ಯಾಕೆ ಹಾಗಾಗುತ್ತದೆ ಏನು ತಪ್ಪು ನಡೆಯುತ್ತದೆ ಹಾಗಾದರೆ ಅಡಿಕೆ ಗಿಡಗಳಿಗೆ ಗೊಬ್ಬರ ಕೊಡಬೇಕೆ ಅಥವಾ ಗಿಡಕ್ಕೆ ಇಂತಿಷ್ಟು ನೀರನ್ನು ಹಾಕಬೇಕು ನಮ್ಮಲ್ಲಿರುವ ಅಡಿಕೆ ತೋಟಗಳಿಗೆ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೊಣ.

ಇವತ್ತಿನ ದಿನ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಕಡಿಮೆ ನೀರಲ್ಲಿ ಅತಿ ಹೆಚ್ಚು ಇಳುವರಿ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಅಡಿಕೆ ತೋಟ ಎಂದರೆ ಪೂರ್ತಿ ಸ್ವಚ್ಛವಾಗಿರಬೇಕು ಕೆಳಗಡೆ ಕುಳಿತು ಊಟ ಮಾಡುವಂತಿರಬೇಕು. ಯಾವುದೇ ಕಳೆ ಇರಬಾರದು ಎಂದು ಹೆಚ್ಚಿನ ರೈತರು ಕಳೆನಾಶಕಗಳನ್ನು ಬಳಸುತ್ತಿದ್ದಾರೆ ಇದು ತುಂಬಾ ತಪ್ಪು.

ಎರಡನೆಯದು ಸ್ವಚ್ಚಮಾಡುವ ಉದ್ದೇಶದಿಂದ ವರ್ಷಕ್ಕೆ ಎರಡು ಬಾರಿ ಉಳುಮೇಮಾಡುತ್ತಾರೆ ಇದರಿಂದ ಮೇಲಿನ ಬೇರು ಅಂದರೆ ಆಹಾರ ನೀರು ತೆಗೆದುಕೊಳ್ಳುವ ಬೇರುಗಳನ್ನು ಕತ್ತರಿಸುತ್ತಿದ್ದೇವೆ ಇದರಿಂದ ಆಹಾರದ ಶೇಖರಣೆ ಕೊರತೆ ಆಗುತ್ತಿದೆ ಆದ್ದರಿಂದ ಇಳುವರಿ ಕಡಿಮೆ ಆಗುತ್ತಿದೆ.

ಕೆಲವರು ಅಡಿಕೆ ತೋಟ ಎಂದರೆ ಕೇವಲ ಅಡಿಕೆ ಮಾತ್ರ ಬೆಳೆಯಬೇಕು ಅಂತ ತಿಳಿದುಕೊಂಡಿರುತ್ತಾರೆ. ಅದರೊಳಗೆ ತೆಂಗು ಬೆಳೆಯುವುದಾಗಲಿ ಅಥವಾ ತೆಂಗಿನೊಳಗೆ ಅಡಿಕೆ ಬೆಳೆಯುವುದಾಗಲಿ ಅಥವಾ ಅಡಿಕೆಯಲ್ಲಿ ಬಾಳೆ ಬೆಳೆಯುವುದಾಗಲಿ ಇದನ್ನು ಮಾಡುವುದರಿಂದ ಮುಖ್ಯ ಬೆಳೆಗಳಲ್ಲಿ ಸೋಲಾಗುತ್ತದೆ ಅಂದರೆ ಕಡಿಮೆ ಇಳುವರಿ ಬರುತ್ತದೆ ತೆಂಗು ಅಡಿಕೆಯ ಆಹಾರ ತೆಗೆದುಕೊಳ್ಳುತ್ತದೆ ಅಡಿಕೆ ಬಾಳೆಯ ಆಹಾರ ತೆಗೆದುಕೊಳ್ಳುತ್ತದೆ ಬಾಳೆ ಅಡಿಕೆಯ ಆಹಾರ ತೆಗೆದುಕೊಳ್ಳುತ್ತದೆ ಪೋಷಕಾಂಶ ತೆಗೆದುಕೊಳ್ಳುತ್ತದೆ.

ಇದರಿಂದ ಇಳುವರಿ ತುಂಬಾ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಭೂಮಿಯ ಒಳಗಡೆ ಬೇರುಗಳು ಒಂದಕ್ಕೊಂದು ಹಿಡಿದಿರುತ್ತವೆ ಆದರೆ ಇದರಿಂದ ಆಹಾರದ ಕೊರತೆ ಆಗುವುದಿಲ್ಲ ಯಾಕೆಂದರೆ ಶೇಕಡಾ ತೊಂಬತ್ತೆಂಟುವರೆ ಭಾಗ ಆಹಾರವನ್ನು ಪುಕ್ಕಟೆಯಾಗಿ ಸೂರ್ಯ ಶಕ್ತಿಯಿಂದ ತೆಗೆದುಕೊಂಡು ಭೂಮಿಯಿಂದ ನೀರನ್ನು ವಾತಾವರಣದಿಂದ ಗಾಳಿಯನ್ನು ತೆಗೆದುಕೊಂಡು ಶೇಕಡಾ ತೊಂಬತ್ತೆಂಟುವರೆ ಭಾಗ ಆಹಾರವನ್ನು ತಯಾರಿಸಿಕೊಳ್ಳುತ್ತದೆ.

ಅದೇ ರೀತಿ ಕೇವಲ ಒಂದೂವರೆ ಭಾಗ ಆಹಾರವನ್ನು ಭೂಮಿಯಿಂದ ತೆಗೆದುಕೊಳ್ಳುತ್ತದೆ. ತೆಂಗಿನ ಮರದ ಕೆಳಗೆ ಅಡಿಕೆ ಮರ ಅದರ ಕೆಳಗೆ ಬಾಳೆ ಅದರ ಕೆಳಗೆ ಕಾಫಿ ಅಥವಾ ಕೊಕ್ಕೋ ಬೆಳೆಯುವುದು ಇವುಗಳ ಮದ್ಯೆ ಸಾರಜನಕ ಒದಗಿಸುವುದಕ್ಕೆ ನುಗ್ಗೆ ಗಿಡಗಳನ್ನು ಬೆಳೆಸಬಹುದು. ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ನೀವು ತೋಟದಲ್ಲಿ ಅಡಿಕೆ ಗಿಡಗಳ ಬೇರು ತೆಂಗಿನ ಗಿಡಗಳ ಬೇರು ಭೂಮಿಯ ಮೇಲೆ ಬರುವುದನ್ನು ನೋಡುತ್ತೀರಿ. ಇದಕ್ಕೆ ಕಾರಣ ನಾವು ಗಟ್ಟದಲ್ಲಿ ಅತೀ ಹೆಚ್ಚು ನೀರಿರುವ ಪ್ರದೇಶದಿಂದ ಗಿಡಗಳನ್ನು ತಂದು ನೆಟ್ಟಿರುವುದರಿಂದ ಅತಿ ಹೆಚ್ಚು ನೀರು ಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಮಣ್ಣನ್ನು, ತೋಟವನ್ನು ಸಂಪೂರ್ಣವಾಗಿ ನೀರುಮಯವಾಗಿ ಮಾಡುತ್ತಿದ್ದೇವೆ ಇದರಿಂದ ಮಣ್ಣಿನ ಕಣಗಳ ನಡುವೆ ಇರುವ ಸಂದುಗಳನ್ನು ಸಂಪೂರ್ಣವಾಗಿ ನೀರುಮಯವಾಗಿ ಮಾಡಿ ಸಂದುಗಳಲ್ಲಿ ಒಂದುಚುರು ಗಾಳಿ ಇರದಹಾಗೆ ಮಾಡಿ ಪೂರ್ತಿ ನೀರುಮಯವಾಗಿ ಮಾಡಿ ಮತ್ತು ಯಾವಾಗ ನಾವು ಹೆಚ್ಚು ಹೆಚ್ಚು ನೀರನ್ನು ಕೊಡುವುದರಿಂದ ಮಣ್ಣು ಗಡಸಾಗುತ್ತದೆ

ನೀರು ಪೂರ್ತಿಯಾಗಿ ಆವರಿಸಿ ಕೊಳ್ಳುವುದರಿಂದ ಪ್ರಾಣವಾಯು ಅಥವಾ ಗಾಳಿ ಒಳಗೆ ಪ್ರವೇಶವಾಗದೆ ಬೇರುಗಳಿಗೆ ಗಾಳಿ ಸಿಗುವುದಿಲ್ಲ ಆಗ ಬೇರುಗಳು ಗಾಳಿ ತೆಗೆದುಕೊಳ್ಳುವುದಕ್ಕೆ ಮೇಲೆ ಬರುತ್ತದೆ ಆಗ ನಾವು ಅದಕ್ಕೆ ಪೋಷಕಾಂಶ ಕೊರತೆಯಾಗಿದೆ ಇದರಿಂದ ಇಳುವರಿ ಕಡಿಮೆಯಾಗುತ್ತದೆ ಎಂದು ತಿಳಿದುಕೊಳ್ಳುತ್ತೇವೆ ನಂತರ ಮತ್ತೆ ಮಣ್ಣನ್ನು ಒಡೆದು ಮತ್ತೆ ಗೊಬ್ಬರ ನೀಡುತ್ತೇವೆ ಇದನ್ನೇ ಪುನರಾವರ್ತನೆ ಮಾಡುತ್ತೆವೆ ಅಂದರೆ ನಿರಂತರವಾಗಿ ತೋಟದಲ್ಲಿ ಮಣ್ಣನ್ನು ಒಡೆಯುವುದು ಗೊಬ್ಬರ ಹಾಕುತ್ತೆವೆ ಇದರಿಂದ ಗಿಡಗಳ ಬೇರುಗಳಿಗೆ ಗಾಳಿ ಸಿಗುವುದಿಲ್ಲ ಹಾಗಾಗಿ ನೀವು ನೀರು ಕೊಡುವುದನ್ನು ಕಡಿಮೆ ಮಾಡದಿದ್ದಾಗ ತೋಟ ಹಾಳಾಗುತ್ತದೆ.

ಇನ್ನೊಂದು ತೋಟದಲ್ಲಿ ಕಲೆಗಳಿದ್ದರೆ ಇದರಿಂದ ಅಡಿಕೆ ಗಿಡಗಳಿಗೆ ಪೋಷಕಾಂಶ ಕಡಿಮೆಯಾಗುತ್ತದೆ ಎಂದು ತಿಳಿದುಕೊಳ್ಳುತ್ತೇವೆ ಆದರೆ ಭೂಮಿಯಲ್ಲಿರುವ ಗಿಡಗಳು ಒಂದಕ್ಕೊಂದು ಆಹಾರವನ್ನು ಹಂಚಿಕೊಳ್ಳುತ್ತವೆ ಸಾರಜನಕಕ್ಕೆ ಬೇಕಾದದ್ದನ್ನು ಮಾತ್ರ ವ್ಯವಸ್ಥೆ ಮಾಡಬೇಕು. ಗಿಡಗಳಿಗೆ ಅವಶ್ಯಕ್ಕಿಂತ ಹೆಚ್ಚಿನ ನೀರನ್ನು ಕೊಟ್ಟು ಅಲ್ಲಿ ಕೆಟ್ಟ ಶಿಲೀಂದ್ರಗಳ ಉತ್ಪಾದನೆಯನ್ನು ಮಾಡುತ್ತೇವೆ ಆ ಶಿಲೀಂದ್ರಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ವಿಡಿಯೋ ಕ್ರೆಡಿಟ್ for ರೈತ ಪ್ರಗತಿ

ಹಾಗಾಗಿ ನೀರನ್ನು ಕೊಡುವುದನ್ನು ಕಡಿಮೆ ಮಾಡಬೇಕು. ಹೇಗೆ ಅಂದರೆ ತೋಟಕ್ಕೆ ನೀರು ಕಡಿಮೆಯಾಗಿದ್ದನ್ನು ನಿಮಗೆ ತಿಳಿಸಲು ನೀವು ಕಳೆಗಳನ್ನು ಬೆಳೆಯಲು ಬಿಡಬೇಕು. ಈ ಕಳೆಗಳು ಯಾವಾಗ ಬೆಳಿಗ್ಗೆ ಒಂಬತ್ತು ಗಂಟೆಯ ಸುಮಾರಿಗೆ ತಲೆ ತಗ್ಗಿಸುತ್ತದೆ ಆಗ ನೀರನ್ನು ಕೊಡಬೇಕು ಆ ಕಳೆಗಳು ಹತ್ತು ದಿನಕ್ಕೆ ತಲೆ ಬಗ್ಗಿಸಬಹುದು ಹದಿನೈದು ದಿನಕ್ಕೆ ಬಗ್ಗಿಸಬಹುದು ಬಗ್ಗಿಸದೆ ಇರಬಹುದು ಆಗ ನೀರು ಕೊಡುವ ಅಗತ್ಯವಿಲ್ಲ

ಚಿಕ್ಕ ಸಸ್ಯಗಳಿಗೆ ಸಮಸ್ಯೆ ಆಗದಿದ್ದಾಗ ದೊಡ್ಡಮರಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕಾಲ ಕಾಲಕ್ಕೆ ಅವುಗಳಿಗೆ ಕೆಲವು ಜೀವಾಮೃತಗಳನ್ನ ಒದಗಿಸಬೇಕು. ಗಿಡಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳುವುದರ ಜೋತೆಗೆ ಪೋಷಕಾಂಶಗಳನ್ನು ಪಡೆದುಕೊಂಡು ಉತ್ತಮವಾಗಿರುತ್ತದೆ

ಈ ರೀತಿ ಶೂನ್ಯ ಬಂಡವಾಳ ಕೃಷಿಯನ್ನು ಅಳವಡಿಸಿಕೊಂಡು ಯಾವುದೇ ಕರ್ಚಿಲ್ಲದೆ ಹೆಚ್ಚು ಇಳುವರಿಯನ್ನು ಪಡೆಯಬಹುದು ಇದರಿಂದ ಗಿಡಗಳು ಯಾವುದೇ ರೋಗಗಳಿಲ್ಲದೆ ಉತ್ತಮವಾಗಿರುತ್ತದೆ ಈ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಲಾಭವನ್ನು ಪಡೆದುಕೊಳ್ಳಿ.

Leave A Reply

Your email address will not be published.