ಕೃಷಿ ಹೊಂಡದಲ್ಲಿ ಮೀನು ಸಾಕಣೆಮಾಡಿ ಅಂದು ಕೊಂಡಿದ್ದಕಿಂತ ಹೆಚ್ಚಾಗಿ ಆಧಾಯ ಕಂಡ ಯುವ ರೈತ

0 26

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮೀನು ಸಾಕಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಬಹುದು. ಅದೂ ಶೂನ್ಯ ಬಂಡವಾಳದಲ್ಲಿ . ಅದರ ಮೂಲಕ ಉತ್ತಮ ಆದಾಯ ಗಳಿಸುವುದೂ ಸಾಧ್ಯ. ಕರ್ನಾಟಕದಲ್ಲಿ ೩೦೦೦೦ಕ್ಕೂ ಹೆಚ್ಚು ಸಣ್ಣ ಕೆರೆಗಳಿವೆ. ೨೫ಎಕರೆಗೂ ಕಡಿಮೆ ವಿಸ್ತೀರ್ಣ ಹೊಂದಿರುವ ಸಣ್ಣ ಕೆರೆಗಳಲ್ಲಿ ವರ್ಷವಿಡೀ ಕನಿಷ್ಠ ೩ ಅಡಿ ಆಳ ನೀರು ಇರುವುದರಿಂದ ಇಂತಹ ಪ್ರದೇಶಗಳಲ್ಲಿ ಮೀನು ಸಾಕಬಹುದು.

ಕೃಷಿ ಹೊಂಡಗಳು, ನಾಲಾಬದುಗಳು, ಸಂಗ್ರಹಣ ಕೊಳಗಳು, ಗ್ರಾಮದ ಕೆರೆ, ಕುಂಟೆಗಳು, ಪ್ರತಿ ಉಪಜಲಾನಯನ ಪ್ರದೇಶದ ಕಷಿ ಹೊಂಡಗಳು ಮತ್ತು ಅರೆ ಸಾಂದ್ರತೆಯ ಕೆರೆಗಳಲ್ಲೂ ಮೀನು ಸಾಕಣೆ ಮಾಡಲು ಅವಕಾಶ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ನೀರಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಹಾಗೂ ಕೃತಕ ಆಹಾರ ನೀಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು. ವಾರಕೋಮ್ಮೆ ಇಲ್ಲವೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಸಾವಯವ ಗೊಬ್ಬರವನ್ನು ರಾಡಿ ರೂಪದಲ್ಲಿ ಹಾಕಬೇಕು. ಕೃತಕ ಆಹಾರಗಳಾದ ಅಕ್ಕಿಹಿಂಡಿ, ಅಕ್ಕಿನುಚ್ಚು, ಬೂಸ, ರಾಗಿಪುಡಿ, ಜೋಳದಹಿಟ್ಟು, ಹಿಂಡಿ, ಮುಸುಕಿನ ಜೋಳದಪುಡಿ, ರಾಗಿ ಮುದ್ದೆ, ತರಕಾರಿ ಬೆಳೆಯ ಎಲೆಗಳು ಮುಂತಾದ ಸ್ಥಳೀಯವಾಗಿ ದೊರಕುವ ಆಹಾರ ಪದಾರ್ಥಗಳನ್ನು ನೀಡಬಹುದು.

ಹೊಂಡದ ಬದುಗಳ ಮೇಲೆ ಮತ್ತು ಹೊಂಡದ ಸುತ್ತ ಮುತ್ತವಿರುವ ಜಾಗಗಳಲ್ಲಿ ಸ್ವೈಲೋ, ಹೆಮ್ನಟ್, ಸೀಮೆ ಹುಲ್ಲು, ಕುದುರೆ ಮೆಂತೆಸೊಪ್ಪು ಮುಂತಾದವುಗಳು ಆಹಾರವಾಗುತ್ತವೆ. ನೀರಿನಲ್ಲಿ ಆಮ್ಲಜನಕ ಕೊರತೆಯಾದರೆ, ಆಹಾರ ಹಾಕುವುದನ್ನು ನಿಲ್ಲಿಸಬಹುದು. ಪ್ರತಿ ತಿಂಗಳಿಗೆ ಎರಡು ಅಥವಾ ಮೂರು ಬಾರಿ ಬೀಸುಬಲೆ ಅಥವಾ ಎಳೆಬಲೆಯ ಸಹಾಯದಿಂದ ಮೀನನ್ನು ಹಿಡಿದು ಪರೀಕ್ಷಿಸಿ ಬಿಡಬೇಕು.

ಹೀಗೆ ಮಂಡ್ಯ ಜಿಲ್ಲೆಯಲ್ಲಿ ಮನುಕುಮಾರ್ ಎಂಬಾತನು ಕೃಷಿ ಹೊಂಡದಲ್ಲಿ ಮೀನುಗಾರಿಕೆ ಮಾಡಿ ಲಾಭಗೊಳಿಸುತ್ತಿರುವ ಬಗೆ ಇದಾಗಿದೆ. ಇವರು ತನ್ನ ಗದ್ದೆಯ ಪಕ್ಕದಲ್ಲಿಯೇ ಕೃಷಿ ಹೊಂಡವನ್ನು ನಿರ್ಮಿಸಿದ್ದಾರೆ ಹಾಗೂ ಗದ್ದೆಯಲ್ಲಿ ಬೋರ್ವೆಲ್ ಕೊರೆಸಿದ್ದಾರೆ ಇದರಿಂದ ವ್ಯವಸಾಯ ಹಾಗೂ ಮೀನು ಸಾಕಾಣಿಕೆ ಕೆಲಸವನ್ನು ಸುಗಮವಾಗಿ ಸಾಗಿಸಲು ಅನುಕೂಲಕರವಾಗಿದೆ.

ಒಂದು ಎಕರೆ ಜಮೀನಿನಲ್ಲಿ ನಾಲ್ಕು ರೀತಿಯ ಮೀನುಗಳ ತಳಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಮೀನುಗಳನ್ನು ಗುಂಡಿ ಒಳಗಡೆ ಬಿಡುವ ಮೊದಲು ಹಸಿ ಸಗಣಿ ಹಾಗೂ ಸುಣ್ಣವನ್ನು ಸಿಂಪಡಿಸಬೇಕು ಇದರಿಂದ ಅಲ್ಲಿರುವ ಸಣ್ಣ ಕ್ರಿಮಿಗಳನ್ನು ತಡೆಗಟ್ಟುವ ಕಾರ್ಯವಾಗುತ್ತದೆ. ಸರ್ಕಾರದಿಂದ ಕಡಿಮೆ ಮೊತ್ತದಲ್ಲಿ ಮೀನುಗಳ ಮರಿಗಳನ್ನು ನೀಡುತ್ತಾರೆ ೧೦೦೦೦೦೦ ಮರಿಗೆ ಒಂದುವರೆ ಸಾವಿರ ತೆಗೆದುಕೊಳ್ಳುತ್ತಾರೆ.

ಗ್ರಾಮದ ಕೆರೆಕುಂಟೆ, ನಾಲೆ, ಜೌಗು ತಗ್ಗು ಪ್ರದೇಶಗಳಲ್ಲಿ, ಕತಕವಾಗಿ ಕೆರೆ ನಿರ್ಮಿಸಿದ ಜಲಾಶಯಗಳು, ಹಳ್ಳಕೊಳ್ಳಗಳು, ಕಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಬಹುದು. ಮತ್ತು ಕೃಷಿಗೆ ಯೋಗ್ಯವಲ್ಲದ ಭೂಮಿಯ ಉಪಯೋಗ ಪಡೆದುಕೊಳ್ಳಬಹುದು.ವ್ಯವಸಾಯ, ತೋಟಗಾರಿಕೆ, ರೇಷ್ಮೆ ಸಾಕಣಿ, ಕೋಳಿ ಮತ್ತು ಡೈರಿ, ಹಂದಿ ಸಾಕಣಿ ಹಾಗೂ ಇತರೇ ಕಸುಬುಗಳ ಜೊತೆಗೆ ಮೂಲ ಉದ್ದೇಶಕ್ಕೆ ಧಕ್ಕೆಯಾಗದ ರೀತಿ ಮೀನು ಸಾಕಣಿಕೆ ಮಾಡಬಹುದು. ಮೇಲಿನ ಕಸುಬುಗಳ ತ್ಯಾಜ್ಯ ವಸ್ತುಗಳನ್ನು ಮೀನಿಗೆ ಆಹಾರವಾಗಿ ಬಳಸುವ ಮೂಲಕ ಶೂನ್ಯ ಬಂಡವಾಳದಲ್ಲಿ ಅಧಿಕ ಇಳುವರಿ ಮತ್ತು ಲಾಭ ಪಡೆಯಬಹುದು.

ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೆರೆಯ ನೀರಿನ ಬಳಕೆಯಿಂದ ಉತ್ತಮ ಪೌಷ್ಠಿಕ ನೀರು ದೊರೆಯುತ್ತದೆ.ಮೀನಿನ ಮರಿಗಳಿಗೆ ಮಾತ್ರ ಪ್ರಥಮ ಬಂಡವಾಳದ ಅವಶ್ಯಕತೆ ತದನಂತರ ಶೂನ್ಯ ಬಂಡವಾಳದಲ್ಲಿ ಮೀನಿನ ಕೃಷಿ ಮಾಡಬಹುದು ಮತ್ತು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೂರ ರಾಜ್ಯಕ್ಕೆ ವಲಸೆ ಹೋಗುವುದನ್ನು ತಡೆಗಟ್ಟುವ ಜೂತೆಗೆ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದು.

Leave A Reply

Your email address will not be published.