ಜಿಯೋ ಸಿಮ್ ಬಳಸುವವವರಿಗೆ ಅಂಬಾನಿ ಕಡೆಯಿಂದ ರಿಚಾರ್ಜ್ ನಲ್ಲಿ ಬಂಪರ್ ಆಫರ್

0 1

ಮೊಬೈಲ್ ನಮ್ಮ ಜೀವನದ ಒಂದು ಮುಖ್ಯವಾದ ಭಾಗ ಎಂದು ಹೇಳಿದರೆ ತಪ್ಪಾಗಲಾರದು. ಮೊಬೈಲ್ ಇಲ್ಲದ ಮನೆಯನ್ನು ಹುಡುಕಿದರೆ ಬಹುಶಃ ಸಿಗಲಾರದು. ಮೊಬೈಲ್ ಸಿಮ್ ಕಂಪನಿಗಳಲ್ಲಿ ಜಿಯೋ ಸಿಮ್ ನಂಬರ್ ಒನ್ ಸ್ಥಾನದಲ್ಲಿದೆ. ಬಹುತೇಕ ಎಲ್ಲರೂ ಜಿಯೋ ಸಿಮ್ ಅನ್ನೆ ಬಳಸುತ್ತಿದ್ದಾರೆ. ಇದೀಗ ಜಿಯೋ ಕಂಪನಿಯಿಂದ ಮತ್ತೊಂದು ಆಫರ್ ಬಂದಿದೆ ಅದೇನೆಂದು ಈ ಲೇಖನದಲ್ಲಿ ನೋಡೋಣ.

ಜಿಯೋ ಸಿಮ್ ಬಂದಾಗಿನಿಂದ ದೇಶದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಜನರಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯವನ್ನು ನೀಡುವುದರ ಮೂಲಕ ದೇಶದ ಎಲ್ಲಾ ಸಿಮ್ ಕಂಪನಿಗಳಿಗೆ ದೊಡ್ಡ ಶಾಕ್ ನೀಡಿತು. ನೆಟ್ವರ್ಕ್ ವಿಭಾಗದಲ್ಲಿ ಜಿಯೋ ಸಿಮ್ ದೊಡ್ಡ ಸಾಧನೆಯನ್ನು ಮಾಡಿತು ಎಂದು ಹೇಳಬಹುದು.

ಇನ್ನು ದೇಶದಲ್ಲಿ ಇತರೆ ಸಿಮ್ ಗಳನ್ನು ಬಳಕೆ ಮಾಡುವವರಿಗಿಂತ ಜಿಯೋ ಸಿಮ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಇತರೆ ಸಿಮ್ ಗಳಿಗೆ ಹೋಲಿಕೆ ಮಾಡಿದರೆ ಜಿಯೋ ಸಿಮ್ ರಿಚಾರ್ಜ್ ಮೌಲ್ಯ ಕೂಡ ಕಡಿಮೆ ಎಂದು ಹೇಳಬಹುದು.

ಈಗ ಮತ್ತೆ ಜಿಯೋ ಬಳಕೆದಾರರಿಗೆ ಬಂಪರ್ ಆಫರ್ ಬಂದಿದ್ದು ಜನರಿಗೆ ಇನ್ನಷ್ಟು ಲಾಭವನ್ನು ತಂದುಕೊಡಲಿದೆ. ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಈಗಾಗಲೇ ವಿಶೇಷ ರಿಚಾರ್ಜ್ ಕೊಡುಗೆ ನೀಡಿದೆ. ಜಿಯೋ ಸಿಮ್ ಬಳಕೆ ಮಾಡುತ್ತಿರುವವರು ಒಮ್ಮೆ ರಿಚಾರ್ಜ್ ಮಾಡಿದರೆ ಅದೇ ಮೊತ್ತದ ಮತ್ತೊಂದು ರಿಚಾರ್ಜ್ ಗ್ರಾಹಕರಿಗೆ ಲಭ್ಯವಿದೆ.

ಜಿಯೋ ಗ್ರಾಹಕರು 39 ರೂಪಾಯಿ ರಿಚಾರ್ಜ್ ಮಾಡಿದರೆ ರಿಚಾರ್ಜ್ ಮಾಡಿದ ಸಂದರ್ಭದಲ್ಲಿ 39 ರೂಪಾಯಿ ಹೆಚ್ಚುವರಿ ಕೊಡುಗೆ ಲಭ್ಯವಿದೆ. ಇನ್ನು ಅದೇ ರೀತಿಯಲ್ಲಿ 69 ರೂಪಾಯಿ 14 ದಿನಗಳ ರಿಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ 14 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಜೊತೆಗೆ 75 ರೂಪಾಯಿಯ ರಿಚಾರ್ಜ್ ನಲ್ಲಿಯೂ ಕೂಡ ವಿಶೇಷವಾದ ಕೊಡುಗೆಯನ್ನು ನೀಡಲಾಗಿದೆ, ಅಲ್ಲದೆ 125 ರೂಪಾಯಿ, 155 ಹಾಗೂ 185 ರೂಪಾಯಿ ರಿಚಾರ್ಜ್ ನಲ್ಲೂ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ.

ಈ ಅದ್ಭುತ ಆಫರ್ ಇನ್ನೇನು ಕೆಲವು ದಿನಗಳು ಮಾತ್ರ ಜಾರಿಯಲ್ಲಿದ್ದು ನೀವು ಕೂಡ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೂ ಕೂಡ ಆಫರ್ ಲಭ್ಯವಾಗಲಿದೆ. ಈ ಮಾಹಿತಿ ನಿಜಕ್ಕೂ ಉಪಯೋಗವಾಗಲಿದೆ, ಜಿಯೋ ಸಿಮ್ ಬಳಕೆ ಮಾಡುವ ಗ್ರಾಹಕರಿಗೆ ತಪ್ಪದೆ ತಿಳಿಸಿ. ಜಿಯೋ ಗ್ರಾಹಕರಾಗದೆ ಇದ್ದಲ್ಲಿ ಇಂದೆ ಜಿಯೋ ಸಿಮ್ ಖರೀದಿಸಿ.

Leave A Reply

Your email address will not be published.