ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಮುಂದೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಬಹಳಷ್ಟು ಕುತೂಹಲ ಇದ್ದೆ ಇರುತ್ತದೆ. ಅದೇ ರೀತಿ ನಾವು ನಮ್ಮ ಜೀವನದಲ್ಲಿ ಮುಂದೆ ಏನಾಗುತ್ತದೆ ಎನ್ನೋದನ್ನ ತಿಳಿದುಕೊಳ್ಳಲು ನಮ್ಮ ರಾಶಿ ಭವಿಷ್ಯ ನಮಗೆ ತುಂಬಾ ಮುಖ್ಯವಾಗಿ ಇರುತ್ತದೆ ಹಾಗೂ ನಮ್ಮ ಹೆಸರು ಸಹ ಯಾವ ಅಕ್ಷರದಿಂದ ಆರಂಭ ಆಗಿದೆ ಎನ್ನುವುದೂ ಸಹ ಬಹಳ ಮುಖ್ಯವಾಗಿ ಇರುತ್ತದೆ. ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿ ಇರುತ್ತದೋ ಆ ಹೆಸರು ನಮ್ಮ ಭವಿಷ್ಯವನ್ನು ಸಹ ತಿಳಿಸುತ್ತದೆ. ಹಾಗಾಗಿ ಈ ಲೇಖನದ ಮೂಲಕ T ಅಕ್ಷರದಿಂದ ಹೆಸರು ಆರಂಭ ಆಗುವವರ ರಾಶಿ ಭವಿಷ್ಯ, ಅವರ ವ್ಯಕ್ತಿತ್ವ ಹೆಗೆ ಇರುತ್ತದೆ ಅನ್ನೋದನ್ನ ನೋಡೋಣ.

T ಅಕ್ಷರದಿಂದ ಹೆಸರು ಆರಂಭ ಆಗುವ ಜನರ ವ್ಯಕ್ತಿತ್ವ ಬಹಳಷ್ಟು ವಿಭಿನ್ನವಾಗಿ ಇರುತ್ತದೆ. ಎಲ್ಲರ ಜೊತೆಗೂ ಹೆಚ್ಚು ಸಮಯ ಕಳೆಯುತ್ತಾರೆ ಆದರೂ ಸಹ ಇವರು ಸ್ವಲ್ಪ ವಿಭಿನ್ನ ವ್ಯಕ್ತಿಗಳು ಎಂದು ಎಲ್ಲರೂ ಸಹ ಸುಲಭವಾಗಿ ಗುರುತಿಸಬಹುದು. ಸದಾ ಕಾಲ ತಮ್ಮ ವಿಭಿನ್ನತೆ ವಿಶಿಷ್ಟತೆಯಿಂದ ಗುರುತಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. T ಅಕ್ಷರದಿಂದ ಹೆಸರು ಆರಂಭ ಆಗುವ ಜನರಲ್ಲಿ ಇರುವಂತಹ ಅಪಾರವಾದ ಬುದ್ಧಿ ಶಕ್ತಿ ಇವರನ್ನ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ನಿಲ್ಲುವಂತೆ ಮಾಡುತ್ತದೆ. ಇವರಲ್ಲಿ ಇರುವಂತಹ ತೇಜಸ್ಸು ಜನರ ಗುಂಪಿನ ಮಧ್ಯೇಯೂ ಎದ್ದು ಕಾಣುವಂತೆ ಮಾಡುತ್ತದೆ.

ವ್ಯಾಪಾರ, ವ್ಯಹಾರಗಳಲ್ಲಿ ಇವರ ಬುದ್ಧಿವಂತಿಕೆ ಹಾಗೂ ಚಾಕ ಚಕ್ಯತೆಯಿಂದ ಸಾಕಷ್ಟು ಮುಂದೆ ಬರುತ್ತಾರೆ. ಎಲ್ಲರೂ ಇವರನ್ನ ಮೆಚ್ಚಿಕೊಳ್ಳುತ್ತಾರೆ. ಇನ್ನು ಪ್ರೀತಿಯ ವಿಷಯಕ್ಕೆ ಬಂದರೆ ಇವರ ತೇಜಸ್ಸಿಗೆ ಒಲಿಯದ ಸಂಗಾತಿ ಇಲ್ಲ. ಎಲ್ಲರೂ ಇವರನ್ನ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಇವರು ಇಷ್ಟ ಪಟ್ಟವರೂ ಸಹ ಇವರನ್ನು ಇಷ್ಟ ಪಡುತ್ತಾರೆ ಉತ್ತಮ ಜೀವನವನ್ನು ನಡೆಸುತ್ತಾರೆ. ಎಲ್ಲರೂ ಇವರನ್ನು ಇಷ್ಟ ಪಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಎಲ್ಲಾ ಜನರಲ್ಲೂ ಇವರನ್ನು ನಂಬಿ ಒಳ್ಳೆಯ ಆತ್ಮ ವಿಶ್ವಾಸ ಇಟ್ಟುಕೊಂಡಿರುತ್ತಾರೆ ಹಾಗಾಗಿ ಇವರನ್ನು ನಂಬಿಕೆಗೆ ಇನ್ನೊಂದು ಹೆಸರು ಎನ್ನಬಹುದು. ಹಾಗಾಗಿ ಇವರೂ ಸಹ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿ ಆಗಿದ್ದು ಎಲ್ಲರ ಕೆಲಸವನ್ನೂ ಮಾಡುತ್ತಾ ಎಲ್ಲರ ನಂಬಿಕೆಗೆ ಪಾತ್ರರಾಗುತ್ತಾರೆ. ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ಕುಟುಂಬ ಜನರಲ್ಲಿ ಸಹ ಪ್ರೀತಿಯಿಂದ ಇರುತ್ತಾರೆ. ಪ್ರೀತಿ ಪಾತ್ರರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಮಕ್ಕಳಿಗೆ ಒಳ್ಳೆಯ ಪ್ರೀತಿಯನ್ನು ನೀಡುತ್ತಾರೆ. ಸಮಾಜಕ್ಕೆ ಒಳ್ಳೆಯ ಆದರ್ಶಪ್ರಾಯ ವ್ಯಕ್ತಿಗಳು ಆಗಿರುತ್ತಾರೆ. ಇವಿಷ್ಟು T ಅಕ್ಷರದಿಂದ ಹೆಸರು ಆರಂಭ ಆಗುವ ವ್ಯಕ್ತಿಗಳ ಭವಿಷ್ಯ ಹಾಗೂ ಅವರ ವ್ಯಕ್ತಿತ್ವ.

By

Leave a Reply

Your email address will not be published. Required fields are marked *