ಸರಳ ಮೂರ್ತಿಯಾದ ಸುಧಾಮೂರ್ತಿಯವರು ಪ್ರತಿಷ್ಠಿತ ಮಹಿಳೆಯಾಗಿದ್ದರೂ ಸಹ ಮಾಡೆಲ್ ಡ್ರೆಸ್ ಗಳನ್ನು ಹಾಕುವುದಿಲ್ಲ ಇದರ ಬಗ್ಗೆ ಅವರ ಅಭಿಪ್ರಾಯವನ್ನು ಈ ಲೇಖನದ ಮೂಲಕ ತಿಳಿಯೋಣ.

ನಾವು ಫಾರಿನ್ ಕಲ್ಚರ್ ಗೆ ಮಾರುಹೋಗುತ್ತಿದ್ದೇವೆ. ಸೀರೆ ಉಟ್ಟುಕೊಂಡು ಆಫೀಸ್ ಗೆ ಯಾರೂ ಹೋಗುವುದಿಲ್ಲ. ಆದರೆ ಸುಧಾ ಮೂರ್ತಿಯವರು ಸೀರೆ ಉಟ್ಟುಕೊಂಡೆ ಆಫೀಸ್ ಗೆ ಹೋಗುತ್ತಾರೆ. ನಾವು ಎರಡು ಭಾಷೆಯನ್ನು ಮಾತನಾಡಬೇಕು ಜಗತ್ತಿನ ಆಡಳಿತ ಭಾಷೆಯಾದ ಇಂಗ್ಲೀಷ್ ಮಾತನಾಡಬೇಕು ಎಂದು ಸುಧಾಮೂರ್ತಿ ಹೇಳಿದ್ದಾರೆ. ನಾವು ಸೀರಿಯಲ್, ಸಿನೆಮಾದಲ್ಲಿ ಬರುವ ಹೀರೊ ಹೀರೋಯಿನ್ ನೋಡಿ ಅವರು ಹಾಕುವ ಬಟ್ಟೆ ನಾವು ಹಾಕಿದರೆ ಸ್ಮಾರ್ಟ್ ಎಂದು ತಿಳಿದುಕೊಳ್ಳುತ್ತೇವೆ. ನಾವು ಹಾಕುವ ಬಟ್ಟೆಗೂ ನಾವು ಮಾಡುವ ಕೆಲಸಕ್ಕೂ ಸಂಬಂಧವಿರುವುದಿಲ್ಲ. ಸೀರೆ ಉಟ್ಟುಕೊಂಡರೆ ಕಡಿಮೆ ಸ್ಮಾರ್ಟ್ ಕಾಣುತ್ತೇವಾ ಎಂದು ನಾವು ಪ್ರಶ್ನೆ ಮಾಡುವುದಿಲ್ಲ. ಈಗಿನ ಜನರು ಹೀಗಿದ್ದರೆ ಸರಿ ಹೀಗಿದ್ದರೆ ತಪ್ಪು ಎಂದು ಅವರೆ ಅಂದುಕೊಳ್ಳುತ್ತಾರೆ ಅದನ್ನು ಅವರೆ ಬದಲಾಯಿಸಿಕೊಳ್ಳಬೇಕು ನಾವು ಬದಲಾಯಿಸಲು ಸಾಧ್ಯವಿಲ್ಲ. ನಾನು ಮೊದಲು ಜೀನ್ಸ್ ಹಾಕಿಕೊಳ್ಳುತ್ತಿದ್ದೆ ನಂತರ ನನಗೆ ಅರ್ಥವಾಯಿತು ನಾವು ಯಾವ ರೀತಿಯ ಬಟ್ಟೆಯನ್ನು ಹಾಕುತ್ತೇವೆ ಎನ್ನುವುದು ಮುಖ್ಯವಲ್ಲ ನಮ್ಮ ಕೆಲಸ ಮುಖ್ಯ ನಮ್ಮ ದೇಶದ ಕಲ್ಚರ್ ನಾವು ಅನುಸರಿಸಬೇಕು. ಯಾರಿಗೆ ಆತ್ಮವಿಶ್ವಾಸ ಇರುತ್ತದೆಯೋ ಅವರಿಗೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾರಿಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆಯೋ ಅವರಿಗೆ ಈ ರೀತಿಯ ವಿಷಯಗಳು ಮುಖ್ಯವೆನಿಸುತ್ತದೆ.

ಶಾಲೆಗಳಲ್ಲಿ ಮಕ್ಕಳಿಗೆ ವೆಸ್ಟರ್ನ್ ಕಲ್ಚರ್ ಬಗ್ಗೆ ಹೇಳಲಾಗುತ್ತದೆ ಹೊರತು ಶಾಕುಂತಲಾ, ಕಾಳಿದಾಸ ಅವರ ಬಗ್ಗೆ ತಿಳಿಸದೇ ಇರುವುದರಿಂದ ನಮಗೆ ವೆಸ್ಟರ್ನ್ ಕಲ್ಚರ್ ಗ್ರೇಟ್ ಅನಿಸುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಕಲ್ಚರ್ ಬಗ್ಗೆ ತಿಳಿಸಿಕೊಡಬೇಕು ಸಂಸ್ಕೃತದ ಬಗ್ಗೆ ಹೆಚ್ಚು ಅಧ್ಯಯನ ಮಾಡಿಸಬೇಕು ಇದರಿಂದ ಅವರು ನಮ್ಮ ಕಲ್ಚರ್ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ಸುಧಾಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸುಧಾಮೂರ್ತಿ ಅವರು ಎತ್ತರಕ್ಕೆ ಬೆಳೆದಿದ್ದರು ನಮ್ಮ ಸಂಪ್ರದಾಯ, ಪರಂಪರೆ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅವರು ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *