ನಮ್ಮ ಜೀವನದಲ್ಲಿ ನಾವು ಏನೇನೋ ಆಗಬೇಕು ಹೇಗೆ ಇರಬೇಕು ಎನ್ನುವುದನ್ನು ಕನಸು ಕಂಡಿರುತ್ತೇವೆ ಆದರೆ ವಿಧಿ ಇನ್ನೇನನ್ನು ಬಯಸಿರುತ್ತದೆ. ನಮ್ಮೆಲ್ಲ ಕನಸುಗಳಿಗೆ ತಣ್ಣೀರೆರಚಿ ನಮ್ಮನ್ನು ಈ ಲೋಕದಿಂದಲೇ ದೂರಮಾಡುತ್ತದೆ. ಆಗ ತಾನೆ ಮೊದಲ ಮಗುವಿಗೆ ಜನ್ಮ ನೀಡಿದ ಮೂವತ್ತೊಂದು ವರ್ಷದ ಖ್ಯಾತನಟಿ ತನ್ನ ಮಗನ ಜನ್ಮವಾದ ನಂತರ ಮಗನ ಆಗಮನದಿಂದ ಸಂತಸದಲ್ಲಿ ಇರುತ್ತಾರೆ ಹಾಗೂ ಆತನ ಬಗ್ಗೆ ಹತ್ತಾರು ಕನಸುಗಳನ್ನು ಕೂಡ ಕಂಡಿರುತ್ತಾರೆ. ಆದರೆ ಆ ನಟಿಯ ಜೀವನದಲ್ಲಿ ಇನ್ನೇನೋ ಬದಲಾವಣೆ ಆಗಿರುತ್ತದೆ. ಸಹಜ ನಟನೆ, ಸಹಾನುಭೂತಿಯ ನೋಟ, ಮುಖವೆಲ್ಲ ಮಮಕಾರದ ಭಾವನೆಗಳನ್ನು ತೋರ್ಪಡಿಸುತ್ತಿದ್ದ ನಟಿ ಸ್ಮಿತಾ ಪಾಟೀಲ್ ಕನ್ನಡದ ಅನ್ವೇಷಣೆ ಎಂಬ ಚಿತ್ರದಲ್ಲಿ ತಮ್ಮ ಸಹಜ ಹಾಗೂ ಅತ್ಯದ್ಭುತ ನಟನೆಯ ಮೂಲಕ ಎಲ್ಲರ ಮನಸ್ಸಿನಲ್ಲಿ ಉಳಿದ ನಟಿ ಇವರು. ಇಂತಹ ನಟಿಯ ಜೀವನದಲ್ಲಿ ಮಗು ಬಂದ ನಂತರ ಏನಾಯಿತು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತನ್ನ 19ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ಗಂಭೀರ ನಟನೆಯಲ್ಲಿ ತನಗಿಂತ ಯಾರು ಸಾಟಿ ಇಲ್ಲ ಎನ್ನುವುದನ್ನು ಭಾರತ ಚಿತ್ರರಂಗದಲ್ಲಿ ರೂಪಿಸಿಕೊಂಡರು. ಹತ್ತಾರು ಹಿಟ್ ಚಿತ್ರಗಳನ್ನು ನೀಡಿದ ನಟಿ ಸ್ಮಿತಾ ಪಾಟೀಲ್ ಖ್ಯಾತ ಚಿತ್ರನಟ ರಾಜ್ ಬಾಪನ್ನ ಅವರನ್ನು ಮದುವೆಯಾದರು. ಚಿತ್ರರಂಗದಲ್ಲಿ ಟಾಪ್ ನಟಿ ಆಗಿದ್ದರೂ ಕೂಡ ಮಗುವಿಗೆ ಜನ್ಮ ನೀಡುವುದರಲ್ಲಿ ಹೆಚ್ಚು ಒಲವು ನೀಡಿದ ಈ ನಟಿ ಮಗು ಹುಟ್ಟಿದ ನಂತರ ಒಂದೆರಡು ವರ್ಷ ನಟನೆಯ ಕಡೆ ಮುಖ ಮಾಡಲೇಬಾರದು, ಅವರ ಮಗುವಿನ ಜೊತೆ ಆಟವಾಡುತ್ತಾ ಇರಬೇಕು ಎನ್ನುವ ಹತ್ತಾರು ಆಸೆಗಳನ್ನು ಹೊತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದರು. ಮಗು ಹುಟ್ಟಿದ ನಂತರ ನಟಿ ಸ್ಮಿತ ಪಾಟೀಲ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆಗತಾನೆ ಹುಟ್ಟಿದ ಮಗುವಿನ ಜೊತೆಗೂ ಕೂಡ ಮಾತನಾಡುತ್ತ ತನ್ನ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದರು. ಮುಂದೆ ನೀನು ಕೂಡ ಒಬ್ಬ ದೊಡ್ಡ ನಟನಾಗಬೇಕು ಎನ್ನುವುದನ್ನು ಹೇಳುತ್ತಿದ್ದರು.

ಇಷ್ಟೊಂದು ಮಮಕಾರ ಇರುವ ತಾಯಿಯನ್ನು ಕಂಡು ಬಹುಶಹ ವಿಧಕ್ಕೆ ಸಹಿಸಲಾಗಲಿಲ್ಲ ಅನಿಸುತ್ತದೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ನಟಿ ಸ್ಮಿತಾ ಅವರಿಗೆ ಭಾರಿ ತಲೆ ನೋವು ಕಾಣಿಸಿಕೊಂಡಿತ್ತು. ಆದರೆ ಮಗುವನ್ನು ಬಿಟ್ಟಿರಲಾಗದ ಈ ನಟಿ ಆಸ್ಪತ್ರೆಗೆ ಹೋಗುವುದನ್ನು ಮುಂದೂಡಿದರು. ಒಂದು ದಿನ ಬೆಳಗ್ಗೆ ಮಗು ಅಳುತ್ತಿತ್ತು ತಕ್ಷಣಕ್ಕೆ ಎದ್ದ ಸ್ಮಿತಾ ಪಾಟೀಲ್ ಅವರು ಮಗುವಿಗೆ ಹಾಲುಣಿಸಿ ಮಗುವನ್ನು ಮಲಗಿಸಿ ಮಗುವಿನ ಕಡೆಗೆ ನೋಡುತ್ತಾ ಮಲಗಿದ್ದರೂ. ಅಷ್ಟೇ ನಟಿ ಸ್ಮಿತಾ ಪಾಟೀಲ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಉಯ್ಯಾಲೆ ಯಲ್ಲಿದ್ದ ಮಗುವಿನ ಮುಖ ನೋಡುತ್ತಲೇ ತಮ್ಮ ಕೊನೆಯುಸಿರೆಳೆದರು ನಟಿ ಸ್ಮಿತಾ ಪಾಟೀಲ್. ಮಗು ಹುಟ್ಟಿದ ಕೇವಲ ಎರಡೇ ವಾರಕ್ಕೆ ಮಗುವಿನಿಂದ ತಾಯಿ ದೂರವಾಗಿದ್ದರು. ಡಿಲೆವರಿ ಸಂದರ್ಭದಲ್ಲಿ ಚಿಕಿತ್ಸೆಯಲ್ಲಿ ಆದ ಕೆಲವು ಲೋಪಗಳಿಂದಲೆ ನಟಿ ಸ್ಮಿತಾ ಪಾಟೀಲ್ ಮರಣ ಹೊಂದಿದರು ಎಂದು ಹೇಳಲಾಯಿತು. ಪಕ್ಕಾ ತಾಯಿಯನ್ನೇ ಹೋಲುವಂತೆ ಹುಟ್ಟಿದ ಮಗ ಪ್ರತೀಕ್ ಬಬ್ಬರ್ ತಾಯಿಯ ಆಸೆಯಂತೆ ಇಂದು ಬಾಲಿವುಡ್ನಲ್ಲಿ ಒಬ್ಬ ಸ್ಟಾರ್ ನಟನಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಹೆಸರು ಕೂಡಾ ಗಳಿಸಿದ್ದಾರೆ. ಕನ್ನಡದ ಅನ್ವೇಷಣೆ ಹಾಗೂ ಆಸೆ ಹೊನಲಿನ ಹಾಡನ್ನು ನೋಡಿದರೆ ಎಂತಹವರಿಗೂ ನಟಿ ಸ್ಮಿತಾ ಪಾಟೀಲ್ ಅವರ ನಟನೆ ಅದ್ಭುತ ಎಂದೆನಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!