ಕ್ಷೀರ ಸಾಗರದ ಮದ್ಯದಲ್ಲಿ ಆದಿಶೇಷನನ್ನೆ ಹಾಸಿಗೆ ಮಾಡಿಕೊಂಡು ಲಕ್ಷ್ಮಿಯ ಜೊತೆ ವೈಕುಂಠದಲ್ಲಿ ವಿರಾಜಿಸುತ್ತಿರುವ ಮಹಾವಿಷ್ಣುವನ್ನು ನೆನೆದಾಗ ನೆನಪಾಗುವುದೇ ಅವನ ಆಯುಧಗಳಾದ ಗದೆ, ಶಂಖ, ಕಮಲ, ಸುದರ್ಶನ ಚಕ್ರ. ಮಹಾವಿಷ್ಣುವಿನ ಅತ್ಯಂತ ಶಕ್ತಿಯುಳ್ಳ ಅಸ್ತ್ರವೇ ಸುದರ್ಶನ ಚಕ್ರ. ಪುರಾಣಗಳಲ್ಲಿ ಸುದರ್ಶನ ಚಕ್ರ ಸೋತ ಉದಾಹರಣೆ ಇಲ್ಲ. ಸುದರ್ಶನದ ಹೆಸರು ಎತ್ತಿದರೆ ಸಾಕು ಘಟಾನುಘಟಿಗಳ ನಿದ್ದೆ ಹಾರಿಹೋಗುತ್ತಿತ್ತು. ಒಮ್ಮೆ ಸುದರ್ಶನದ ಪ್ರಯೋಗ ಮಾಡಿದರೆ ಅದು ತನ್ನ ಕೆಲಸ ಮುಗಿಸಿಯೆ ವಾಪಸ್ಸಾಗುವುದು. ಸುದರ್ಶನ ಚಕ್ರ ಬಳಕೆ ಮಾಡಿದಲ್ಲಿ ಎಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಶತ್ರುಗಳ ನಾಶ ಶತಸಿದ್ದ. ಇಂತಹ ಸುದರ್ಶನದ ಕೆಲವು ಸಂಗತಿಗಳು ಇಲ್ಲಿವೆ. ಮಹಾಭಾರತ ಯುದ್ಧದ ಸಮಯದಲ್ಲಿ ಕೊನೆಯ ಬಾರಿಗೆ ಸುದರ್ಶನ ಚಕ್ರ ಬಳಸಲ್ಪಟ್ಟಿತ್ತು. ಹಾಗಾದರೆ ಈಗ ಸುದರ್ಶನ ಚಕ್ರ ಎಲ್ಲಿ ಹಾಗೂ ಯಾವ ಸ್ಥಿತಿಯಲ್ಲಿ ಇದೆ ಎಂಬ ಮಾಹಿತಿ ಇಲ್ಲಿದೆ.

ಶಿವ ಪುರಾಣದ ಪ್ರಕಾರ ಸುದರ್ಶನ ಚಕ್ರದ ನಿರ್ಮಾಣ ಪರಶಿವ ಮಾಡಿದ್ದ ಎಂದು ನಂಬಲಾಗಿದೆ. ಪರಶಿವನ ವರದಾನವಾಗಿ ಸುದರ್ಶನ ಚಕ್ರ ವಿಷ್ಣುವಿಗೆ ಸಿಕ್ಕಿತು ಎಂದು ನಂಬಲಾಗಿದೆ. ಇನ್ನೊಂದು ಪುರಾಣದ ಪ್ರಕಾರ ಮಹಾಶಿಲ್ಪಿ ವಿಶ್ವಕರ್ಮ ನಿರ್ಮಿಸಿದ್ದು ಎನ್ನಲಾಗಿದೆ. ಪ್ರತಿನಿತ್ಯ ಉರಿಯುವ ಸೂರ್ಯನ ಬೂದಿಯಿಂದ ಮೂರು ವಸ್ತುಗಳನ್ನು ಮಾಡಿದನೆಂದು ಹೇಳಲಾಗಿದೆ. ಅವು ಯಾವುದೆಂದರೆ ಪುಷ್ಪಕವಿಮಾನ, ಶಿವನ ತ್ರಿಶೂಲ ಹಾಗೂ ಸುದರ್ಶನ ಚಕ್ರ ಎಂದು ನಂಬಲಾಗಿದೆ. ಆದರೆ ಋಗ್ವೇದದಲ್ಲಿ ಬೇರೆಯ ಉಲ್ಲೇಖವಿದೆ.ಋಗ್ವೇದದಲ್ಲಿ ಸುದರ್ಶನ ಚಕ್ರವನ್ನು ಕಾಲಚಕ್ರ ಎಂದು ಹೇಳಲಾಗಿದೆ. ಈ ಸುದರ್ಶನ ಚಕ್ರದಿಂದಲೆ ಸತಿಯ ದೇಹವನ್ನು 52 ಭಾಗಗಳಾಗಿ ವಿಭಾಗಿಸಲಾಯಿತು ಎಂಬ ಉಲ್ಲೇಖವಿದೆ. ಸತಿಯ ದೇಹದ ಭಾಗ ಬಿದ್ದಲ್ಲಿ ಇಂದು 51 ಶಕ್ತಿ ಪೀಠ ನಿರ್ಮಾಣವಾಗಿದೆ. ಎಲ್ಲಾ ಯುಗಗಳಲ್ಲಿ ಸಮಸ್ಯೆಗಳಿಗೆ ಅನುಗುಣವಾಗಿ ಸುದರ್ಶನ ಚಕ್ರ ಬಳಸಲಾಗಿದೆ. ಮಹಾಭಾರತದಲ್ಲಿ ಶಿಶುಪಾಲನ ಸಂಹಾರ ಮಾಡಿದ್ದು ಸುದರ್ಶನ ಚಕ್ರದಿಂದಲೆ. ಕುರುಕ್ಷೇತ್ರದ ಸಮಯದಲ್ಲಿ ಅರ್ಜುನನು ಜಯದೃತನನ್ನು ಸೂರ್ಯ ಮುಳುಗುವುದರೊಳಗೆ ಸಂಹರಿಸುವೆನು ಎಂದು ಮಾಡಿದ ಪ್ರತಿಜ್ಞೆ ಆಗದಿದ್ದಾಗ ಕೃಷ್ಣನು ಸುದರ್ಶನ ಬಳಸಿ ಸೂರ್ಯಾಸ್ತವನ್ನು ಸ್ಥಗಿತಗೊಳಿಸಿದ್ದನು.

ಆದರೆ ಮಹಾಭಾರತದ ನಂತರ ಯಾವ ಕಡೆಯಲ್ಲಿಯೂ ಸುದರ್ಶನ ಚಕ್ರದ ಉಲ್ಲೇಖವಿಲ್ಲ. ಮಹಾಭಾರತ ಯುದ್ಧದ ನಂತರ ಶ್ರೀ ಕೃಷ್ಣನ ದೇಹತ್ಯಾಗದ ನಂತರ ಸುದರ್ಶನ ಚಕ್ರ ಏನಾಯಿತು ಎನ್ನುವುದು ಒಂದು ಪ್ರಶ್ನೆಯಾಗೆ ಉಳಿದಿದೆ. ಇದಕ್ಕೆ ಉತ್ತರ ಭವಿಷ್ಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸುದರ್ಶನ ಚಕ್ರವನ್ನು ಕೇವಲ ವಿಷ್ಣು ಹಾಗೂ ವಿಷ್ಣುವಿನ ಅವತಾರಗಳು ಮಾತ್ರ ಬಳಸಲು ಸಾಧ್ಯ ಎಂದು ಭವಿಷ್ಯ ಪುರಾಣದಲ್ಲಿದೆ. ಎಲ್ಲಿ ಶ್ರೀ ಕೃಷ್ಣನ ದೇಹತ್ಯಾಗವಾಯಿತೊ ಆಗ ಅಲ್ಲಿಯೆ ಸುದರ್ಶನ ಚಕ್ರ ನೆಲದ ಒಳಗೆ ಸೇರಿಕೊಂಡಿತಂತೆ. ಭವಿಷ್ಯ ಪುರಾಣದಲ್ಲಿ ಹೇಳಿರುವ ಪ್ರಕಾರ ಕಲ್ಕಿಯ ಅವತಾರ ಆದ ಮೇಲೆ ಮಾತ್ರ ಭೂಮಿಯ ಒಳಗಿರುವ ಸುದರ್ಶನ ಚಕ್ರ ಹೊರತೆಗೆದು ಬಳಸಲು ಸಾದ್ಯ ಎಂದು. ಅಧರ್ಮದ ಎಲ್ಲೆ ಮೀರಿದಾಗ ಧರ್ಮ ಸ್ಥಾಪನೆಗೆ ಆಜನೇಯ ಹಾಗೂ ಪರಶುರಾಮ ಸೇರಿ ಕಲ್ಕಿಯ ಅವತಾರವೆತ್ತುತ್ತಾರೆ ಎಂದು ಭವಿಷ್ಯ ಪುರಾಣದಲ್ಲಿ ಉಲ್ಲೇಖವಿದೆ. ಋಗ್ವೇದದ ಪ್ರಕಾರ ಸುದರ್ಶನ ಒಮದು ಭೌತಿಕ ವಸ್ತು ಆಗಿರಲೇ ಇಲ್ಲ ಅದು ಒಂದು ಸಮಯ ಚಕ್ರವಾಗಿತ್ತು ಅಷ್ಟೇ. ಅದನ್ನು ಧಾರಣೆ ಮಾಡಲು ಸಾಧ್ಯವಿಲ್ಲ. ಈ ಸುದರ್ಶನ ಚಕ್ರ ವಿಷ್ಣುವಿನ ಅಂಗವಾಗಿದೆ. ಅದು ವಿಷ್ಣುವಿನ ಜೊತೆಯಲ್ಲಿಯೆ ಇರುತ್ತದೆ ಎಮಬುದು ಒಂದು ನಂಬಿಕೆ.

Leave a Reply

Your email address will not be published. Required fields are marked *