ತಂದೆ ತಾಯಿ ಕೂಲಿ ಮಾಡಿ ಓದಿಸಿದಕ್ಕೂ ಸಾರ್ಥಕ ಆಯಿತು, ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಳ್ಳಿ ಹುಡುಗಿ

0 351

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗಂಗುರೂ ಗ್ರಾಮದ ಯುವತಿ ಭಾಗ್ಯಶ್ರೀ ಸತತ ಪರಿಶ್ರಮದಿಂದ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಭಾಗ್ಯಶ್ರೀ ಅವರ ಪರಿಶ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನೋಡೋಣ

ಭಾಗ್ಯಶ್ರೀ ಅಪ್ಪಟ ಗ್ರಾಮೀಣ ಪ್ರತಿಭೆ ಹಳ್ಳಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರು. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಕೂಲಿಕಾರರು. ಇವರಿಗೆ ದುಡಿದರೆ ಮಾತ್ರ ಸಂಬಳ, ಇಲ್ಲದಿದ್ದರೆ ಇರುವುದರಲ್ಲೆ ನೀಗಿಸಿಕೊಂಡು ಹೋಗಬೇಕು. ಉತ್ತರ ಕರ್ನಾಟಕದ ಬರದ ಪರಿಸ್ಥಿತಿ ಇಂತಹ ಸಮಯದಲ್ಲಿ ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಓದಬೇಕು, ಸಾಧಿಸಬೇಕು ಎಂಬ ಛಲ ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ದರೆ ಗೆಲುವು ಸಾಧ್ಯ. ನಿರಂತರ ಪ್ರಯತ್ನದಿಂದ ಈಗ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಶಾಲೆಯ ಮೆಟ್ಟಿಲನ್ನು ಹತ್ತದ ತಂದೆ ತಾಯಿಯ ಕಠಿಣ ಪರಿಶ್ರಮವಿದೆ ಹಾಗೂ ಅವಿರತ ಬೆಂಬಲದಿಂದ ಭಾಗ್ಯಶ್ರೀ ಅವರು ಸಾಧಿಸಿದರು. ಭಾಗ್ಯಶ್ರೀ ಅವರ ತಂದೆ ದುರ್ಗಪ್ಪ ಮಾದರ ಹಾಗೂ ತಾಯಿ ಯಮನವ್ವ ಮಾದರ ಇಬ್ಬರು ಅನಕ್ಷರಸ್ಥರು, 7 ಮಕ್ಕಳ ಕೂಡು ಕುಟುಂಬ, ಕೂಲಿ ಕೆಲಸ ಮಾಡುತ್ತಲೆ ಮಕ್ಕಳನ್ನು ಶಾಲೆಗೆ ಕಳುಹಿಸಿದರು. 5 ನೆ ಮಗಳು ಭಾಗ್ಯಶ್ರೀಗೆ ಏನಾದರೂ ಸಾಧಿಸಬೇಕು ಎಂಬ ಮನಸ್ಸು ಮೊದಲಿನಿಂದಲೂ ಇತ್ತು.

ಮನೆಯಲ್ಲಿ ಬಡತನ ಅದರ ನಡುವೆಯೂ ಶಾಲೆಗೆ ಕಳುಹಿಸುವ ತಂದೆ ತಾಯಿಯ ಹಂಬಲ ಭಾಗ್ಯಶ್ರೀ ಅವರನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಮಾಡಿತು. ಭಾಗ್ಯಶ್ರೀ ಅವರು ಸ್ವಗ್ರಾಮ ಗಂಗೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಾಲೆ ಶಿಕ್ಷಣವನ್ನು ಹತ್ತಿರದ ಚಿತ್ತರಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಅಮೀನಗಡ ಸಂಗಮೇಶ್ವರ ಕಾಲೇಜ್ ನಲ್ಲಿ ಪೂರೈಸಿದ್ದಾರೆ. ಭಾಗ್ಯಶ್ರೀ ಅವರಿಗೆ ತಾನು ಪಶುವೈದ್ಯಾಧಿಕಾರಿಯಾಗಿ ರೈತರಿಗೆ ಸಹಾಯ ಮಾಡಬೇಕೆಂಬ ಆಸೆ ಇತ್ತು.

ಮಗಳು ಕಾನೂನು ಪದವಿ ಪಡೆದು ನ್ಯಾಯಾಧೀಶೆಯಾಗಬೇಕು ಎನ್ನುವುದು ಅವಳ ತಂದೆಯ ಆಸೆಯಾಗಿತ್ತು. ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬಂದ ನ್ಯಾಯಾಧೀಶರನ್ನು ನೋಡಿ ನಾನು ಅವರಂತೆ ಆಗಬೇಕು ಎಂಬ ಆಸೆ ಮನಸ್ಸಿನಲ್ಲಿ ಹುಟ್ಟಿತು. ಭಾಗ್ಯಶ್ರೀ ಅವರು ತಂದೆಯ ಆಸೆಯಂತೆ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್ ಸಿ ನಂದಿಕೋಲುಮಠ ಕಾನೂನು ಕಾಲೇಜ್ ಗೆ ಐದು ವರ್ಷದ ಎಲ್ ಎಲ್ ಬಿಗೆ ಸೇರಿಕೊಂಡರು.

ಐದು ವರ್ಷದ ಸತತ ಪ್ರಯತ್ನದ ನಂತರ 2018ರಲ್ಲಿ ಕಾನೂನು ಪದವಿ ನೀಡಿ ಹುನಗುಂದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಬೆಂಗಳೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ಲಾ ಕಮ್ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದರು. ನ್ಯಾಯಾಧೀಶೆ ಆಯ್ಕೆಗಾಗಿ ಕೆಲಸದ ಜೊತೆ ಓದು ಅಸಾಧ್ಯವೆನಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಪ್ರಾರಂಭಿಸಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಆದರೆ ಮೌಖಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು ಅವರು ಧೈರ್ಯಗೆಡದ ಮತ್ತೆ ಪ್ರಯತ್ನಿಸಿ ಸಫಲರಾದರು. ಇದೀಗ ಕೆಲವು ದಿನಗಳ ಹಿಂದೆಷ್ಟೆ ಪ್ರಕಟಿಸಿದ 2023ರ ಸಾಲಿನ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಇದೆ.

ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ ಪ್ರತಿದಿನ ಇಷ್ಟು ಅವಧಿ ಓದಬೇಕೆಂದು ಯೋಜನೆ ಹಾಕಿಕೊಂಡು ಅದರಂತೆ ಓದುತ್ತಿದ್ದೆ ನನ್ನ ಕುಟುಂಬದವರೆಲ್ಲರೂ ನನಗೆ ಬೆಂಬಲಿಸುತ್ತಿದ್ದರು ಇದೀಗ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರಿರುವುದು ಬಹಳ ಸಂತೋಷವಾಗುತ್ತದೆ ಎಂದು ಭಾಗ್ಯಶ್ರೀ ಅವರು ಹೇಳಿಕೊಂಡಿದ್ದಾರೆ. ನಾನು ಕೂಲಿ ಮಾಡಿದರು ಚಿಂತೆ ಇಲ್ಲ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಹಠ ತೊಟ್ಟಿದ್ದೆ ನಾನು ಓದದೆ ಇದ್ದರೂ ನನ್ನ ಮಕ್ಕಳಾದರೂ ಸಾಧನೆ ಮಾಡುತ್ತಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಎನ್ನುವುದು ಭಾಗ್ಯಶ್ರೀ ಅವರ ತಂದೆಯ ಅಭಿಮಾನದ ನುಡಿಯಾಗಿದೆ.

Leave A Reply

Your email address will not be published.