ಹಾವು ಕಚ್ಚಿದರೆ ಇನ್ನು ಮುಂದೆ ಭಯಪಡುವ ಇಲ್ಲ ಚಿಂತೆ ಮಾಡುವ ಅನಿವಾರ್ಯತೆ ಇಲ್ಲ. ಅಧ್ಯಯನದ ಪ್ರಕಾರ ಭಾರತದಲ್ಲಿ ಹಾವು ಕಚ್ಚಿ ವರ್ಷಕ್ಕೆ 1000 ಜನರು ಪ್ರಾಣ ಕಳೆದುಕೊಳ್ಳುವರು.

ಇದರಲ್ಲಿ ನಾಗರಹಾವು ಮತ್ತು ಕಟ್ಟು ಹಾವುಗಳು ಕಚ್ಚಿದಕ್ಕೆ ಬಲಿಯಾದವರ ಸಂಖ್ಯೆ ತುಂಬಾ ದೊಡ್ಡದು. ಈ ಹಾವುಗಳ ಜೊತೆ ಇನ್ನೊಂದು ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಕೂಡ ಸೇರಿದೆ. ಪಶ್ಚಿಮ ಘಟ್ಟ, ಹಿಮಾಲಯ ತಪ್ಪಲಿನ ಪ್ರದೇಶದ ಜನರಲ್ಲಿ ವಿಷಾತಂಕ ಹಾವು ಭಯ ಮೂಡಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ( ಐಐಎಸ್‌ಸಿ ) ವಿಜ್ಞಾನಿಗಳು ಭಾರತದಲ್ಲಿ ಪ್ರಚಲಿತದಲ್ಲಿ ಇರುವ 3 ಹಾವುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕೃತಕ ಪ್ರತಿಕಾಯಗಳನ್ನು ಸೃಷ್ಟಿ ಮಾಡಿ ವಿಷ ವಿಜ್ಞಾನದಲ್ಲಿ ಹೊಸ ಕ್ರಾಂತಿ ಆರಂಭ ಮಾಡಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ( ಐಐಎಸ್‌ಸಿ ) ಪರಿಸರ ವಿಜ್ಞಾನಗಳ ಕೇಂದ್ರ ಮತ್ತು ಸ್ಕ್ರಿಪ್ಸ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನಾಗರಹಾವು, ಕಾಳಿಂಗ ಸರ್ಪ, ಕಟ್ಟುಹಾವು ಮತ್ತು ಆಫ್ರಿಕಾದ ಸಹರಾ ಮರುಭೂಮಿ ಪ್ರದೇಶದ ಬ್ಲ್ಯಾಕ್‌ ಮಾಂಬಾಗಳ ಪ್ರಾಣಾಂತಕ ಪ್ರಬಲ ನ್ಯೂರೋ ಟಾಕ್ಸಿನ್‌ ವಿರುದ್ಧ ಹೋರಾಡಿ ಅವುಗಳನ್ನು ತಟಸ್ಥಗೊಳಿಸುವ ಸಂಶ್ಲೇಷಿತ ಮಾನವ ಪ್ರತಿಕಾಯವನ್ನು ಅಭಿವೃದ್ಧಿ ಮಾಡಿದ್ದಾರೆ.

ಪ್ರಸ್ತುತ ಕ್ರಮದಲ್ಲಿ ಇರುವ ಕುದುರೆಗಳು, ಹೇಸರಗತ್ತೆಗಳಿಗೆ ( ಜೀಬ್ರಾ ) ಚುಚ್ಚುಮದ್ದಿನ ಮೂಲಕ ವಿಷವನ್ನು ನೀಡಿ, ಅವುಗಳು ಉತ್ಪಾದಿಸುವ ಪ್ರತಿಕಾಯಗಳನ್ನು ಸಂಗ್ರಹ ಮಾಡಿ ವಿಷದ ಹಾವು ಕಚ್ಚಿದವರಿಗೆ ನೀಡಲಾಗುತ್ತದೆ. ಈ ಪ್ರಾಣಿಗಳು ಅವರ ಜೀವಿತಾ ಅವಧಿಯಲ್ಲಿ ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ದಾಳಿಯನ್ನು ಎದುರಿಸಲು ಪ್ರತಿಕಾಯಗಳನ್ನು ಸೃಷ್ಟಿಸಿರುತ್ತದೆ. ಈ ಪ್ರತಿಕಾಯಗಳು ಸಹ ಪ್ರತಿ ವಿಷಗಳಲ್ಲಿ ಸೇರಿಕೊಳ್ಳುವ ಕಾರಣ ಹಾವಿನ ಕಡಿತದ ವಿರುದ್ಧದ ಪ್ರತಿಕಾಯಗಳ ಪ್ರಮಾಣವನ್ನು ಔಷಧಿಯಲ್ಲಿ ಕುಗ್ಗಿಸಿ ಅದರ ಪ್ರಭಾವವನ್ನು ಕುಂಠಿತಗೊಳಿಸುತ್ತವೆ.

ಮೊದಲು ವಿಷವನ್ನು ನೀಡಿ ಅದಾದ ನಂತರ ಕೂಡಲೇ ಪ್ರತಿವಿಷ ನೀಡಬೇಕು ಅದು ಸೇರಿದ ಹಾಗೆ, ವಿಷ ಪ್ರಯೋಗ ನಡೆದ 10 ನಿಮಿಷ, 20 ನಿಮಿಷಗಳ ನಂತರ ಸಹ ಪ್ರತಿವಿಷ ನೀಡಿದಾಗಲೂ ಇಲಿಗಳನ್ನು ಬದುಕಿಸಲು ಪ್ರತಿಕಾಯಗಳು ಯಶಸ್ವಿಯಾಗಿದೆ. ಸಾಂಪ್ರದಾಯಿಕ ವಿಷ ಮದ್ದುಗಳು ಇಲಿಗೆ ವಿಷ ಪ್ರಯೋಗ ನಡೆದ ಕೂಡಲೇ ನೀಡಿದರೆ ಮಾತ್ರ ಇಲಿಯನ್ನು ಬದುಕಿಸಲು ಸಾಧ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅದೇ, ರೀತಿ ಮನುಷ್ಯನ ದೇಹದ ಸ್ನಾಯು, ನರಕೋಶಗಳ ಗ್ರಾಹಿಗಳೊಂದಿಗೆ ವಿಷ ಅಂಟಿಕೊಳ್ಳುವ ರೀತಿಯಲ್ಲಿಯೇ ಪ್ರತಿಕಾಯ ಸಹ ಅಂಟಿಕೊಳ್ಳುತ್ತದೆ. ಆದ್ದರಿಂದ, ವಿಷವು ಗ್ರಾಹಿಗಳ ಬದಲಿಗೆ ಪ್ರತಿಕಾಯಗಳಿಗೆಯೇ ಅಂಟಿಕೊಳ್ಳುತ್ತದೆ. ಇದರೊಂದಿಗೆ ಮನುಷ್ಯನ ಜೀವಕೋಶಗಳ ಮೇಲೆ ನೇರ ಪ್ರಯೋಗ ನಡೆಸಿ ಪ್ರತಿಕಾಯ ಸೃಷ್ಟಿ ಮಾಡಬಹುದಾಗಿದೆ. ಮನುಷ್ಯನ ಜೀವಕೋಶಗಳ ಮೇಲೆ ಪ್ರಯೋಗ ನಡೆದಾಗ ಯಾವುದೇ ರೀತಿಯ ಅಲರ್ಜಿ ವರದಿಯಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಪ್ರಯೋಗದ ವರದಿ ಸೈನ್ಸ್‌ ಟ್ರಾನ್ಸ್‌ಲೇಷನಲ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ( ಐಐಎಸ್‌ಸಿ ) ಪರಿಸರ ವಿಜ್ಞಾನ ಕೇಂದ್ರದ ಅಸೋಸಿಯೇಟ್‌ ಪ್ರೊಫೆಸರ್‌ ಕಾರ್ತಿಕ್‌ ಸುನಗರ್‌ ಪ್ರಯೋಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಚ್‌ಐವಿ, ಕೋವಿಡ್‌-19ರ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿ ಮಾಡಲು ಬಳಸಿದ್ದ ತಂತ್ರವನ್ನು ಮೊದಲ ಸಾರಿ ಹಾವಿನ ವಿಷಕ್ಕೆ ಪ್ರತಿವಿಷ ಸೃಷ್ಟಿ ಮಾಡಲು ಬಳಸಲಾಗಿದೆ.

ಮೊದಲ ಸಾರಿ ಪ್ರತಿವಿಷ ಸೃಷ್ಟಿಗೆ ನಿರ್ದಿಷ್ಟ ಮಾದರಿ ಒಂದನ್ನು ಅನುಕರಣೆ ಮಾಡಿದ್ದೇವೆ. ಈ ಪ್ರಯೋಗ ಸಾರ್ವತ್ರಿಕ ಪ್ರತಿವಿಷ ಸೃಷ್ಟಿ ಮಾಡುವ ಸಾಧ್ಯತೆಯನ್ನು ಸಾಕಾರಗೊಳಿಸುವಲ್ಲಿ ಇಟ್ಟಿರುವ ಮಹತ್ವದ ಮತ್ತು ದೊಡ್ಡ ಹೆಜ್ಜೆ. ಹಾವಿನ ವಿಷ ಹೆಚ್ಚು ವಿಷಕಾರಿ ಈ ಪ್ರತಿಕಾಯಗಳು ಹಾವಿನ ವಿಷಕ್ಕೆ ಬಲಿಯಾಗವುದನ್ನು ತಡೆದರೆ ಮುಂದೆ ಇನ್ನು ಸಾವಿರಾರು ಜನರ ಪ್ರಾಣ ಉಳಿಯಬಹುದು. ಇದು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟು ಎತ್ತರಕ್ಕೆ ಬೆಳೆದಿದೆ ಎನ್ನುವುದಕ್ಕೆ ಒಂದು ಉತ್ತಮ ಸಾಕ್ಷಿ.

Leave a Reply

Your email address will not be published. Required fields are marked *