ಗುಡಿಸಲು ಮನೆಯಲ್ಲಿ ವಾಸವಾಗಿದ್ದ ಶಿಕ್ಷಕಿಗೆ 15 ಲಕ್ಷದ ಚಂದದ ಮನೆ ಕಟ್ಟಿಸಿಕೊಟ್ಟ ವಿದ್ಯಾರ್ಥಿಗಳು

0 13,392

ವಿದ್ಯೆ ಕೊಟ್ಟ ಗುರು ಹಿರಿಯರು ಶಿಕ್ಷಕರು ತಂದೆ ತಾಯಿಗಳಿಗೆ ಸಮ ಎಂಬುದಾಗಿ ಹೇಳುವುದುಂಟು, ಇತ್ತೀಚಿನ ದಿನಗಳಲ್ಲಿ ಕೋರೋಣ ಮಹರ್ಷಿಯ ಪ್ರಭಾವದಿಂದ ಖಾಸಗಿ ಶಾಲೆಯ ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರದ ಸಹಾಯ ಬೇಕಾಗಿದೆ. ವಿಷಯಕ್ಕೆ ಬರೋಣ ಬಳ್ಳಾರಿಯ ಶಿಕ್ಷಕಿ ಯೊಬ್ಬರಿಗೆ ತನ್ನ ಶಿಷ್ಯರು ಒಂದೊಳ್ಳೆ ಗಿಫ್ಟ್ ಕೊಡುವ ಮೂಲಕ ತನ್ನ ಗುರುವಿಗೆ ಗುರು ದಕ್ಷಿಣೆ ಕೊಡುವ ಮೂಲಕ ಆಸರೆಯಾಗಿದ್ದರೆ.

ಹೌದು ಬಳ್ಳಾರಿಯ ಪರಿಮಳ ಹೆಸರಿನ ಶಿಕ್ಷಕಿಯೊಬ್ಬರು ಸುಮಾರು ೩೦ ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ತನ್ನ ಸೇವೆಯನ್ನು ಸಲ್ಲಿಸಿದ್ದು ಇದೀಗ ಅರೋಗ್ಯ ಸರಿ ಇಲ್ಲದ ಕಾರಣ ಆರ್ಥಿಕ ಸಂಕಷ್ಟಕ್ಕೆ ಹಿಡಗಿದ್ದು ಜೀವನ ನಡೆಸಲು ಕಷ್ಟವಾಗಿದ್ದು ಇವರ ಈ ಪರಿಸ್ಥಿತಿಯನ್ನು ಅವರಿಂದ ಪಾಠ ಕಲಿತಿದ್ದ ವಿದ್ಯಾರ್ಥಿಗಳು ಗಮನಿಸಿದ್ದರು. ತಮ್ಮ ಶಿಕ್ಷಕಿಗೆ ಇಂತಹ ಸ್ಥಿತಿ ಬಂದಿರುವುದನ್ನು ಕಂಡು ಮರುಗಿದ್ದರು.

ಯಾರ ಆಸರೆ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿದ್ದ ಪರಿಮಳ ಟೀಚರ್ ಅವರು ಮೂಲತ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಸಿರುಗುಪ್ಪ ಎಜುಕೇಶನ್ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1985 ರಿಂದ 1996ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಇನ್ನು ಇವರು ಸಣ್ಣವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಮದುವೆಯೂ ಆಗಿರಲಿಲ್ಲ. ಅಲ್ಲದೇ,‌‌ ಪರಿಮಳ ಟೀಚರ್ ಆಸರೆಯಾಗಿದ್ದ ಅವರ ಅಕ್ಕ ಇತ್ತೀಚೆಗೆ ಮರಣಹೊಂದಿದ್ದರು. ಇದರಿಂದ ಒಬ್ಬರೇ ಹಳೆಯ ಜೋಪಡಿಯೊಂದರಲ್ಲಿ ಟ್ಯೂಷನ್ ಹೇಳಿಕೊಂಡು ಜೀವನ ನಡೆಸುತ್ತಿದ್ದರು. ಆದ್ದರಿಂದ ಹಳೆಯ ವಿದ್ಯಾರ್ಥಿಗಳು ಪಾಠ ಕಳಿಸಿದ ಗುರುವಿಗೆ ೧೫ ಲಕ್ಷ ಮೌಲ್ಯದ ಮನೆಯನ್ನು ಕಟ್ಟಿಸಿ ಕೊಟ್ಟು ಆಸರೆಯಾಗಿದ್ದರೆ. ನಿಜಕ್ಕೂ ಇವರ ಕಾರ್ಯ ವೈಖರಿಗೆ ಬಾರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ನೀವು ಕೂಡ ಕಷ್ಟದಲ್ಲಿರುವ ನಿಮ್ಮ ಗುರು ಹಿರಿಯರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಧನ್ಯವಾದಗಳು

Leave A Reply

Your email address will not be published.