ಸೃಜನ್ ಲೊಕೇಶ್ ಅವರ ಹೆಂಡ್ತಿ ಮತ್ತು ಅಕ್ಕನ ಡಾನ್ಸ್ ವೈ’ರಲ್

Written by News Media

Published on:

ಮಜಾ ಟಾಕೀಸ್ ನಿಂದ ಎಲ್ಲರನ್ನು ನಕ್ಕು ನಗಿಸುವ ಸೃಜನ್ ಲೊಕೇಶ್ ಅವರ ತಾಯಿ ಗಿರಿಜಾ ಲೊಕೇಶ್ ಪ್ರತಿಭಾವಂತ ಕಲಾವಿದರಾಗಿ ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಗಿರಿಜಾ ಲೊಕೇಶ್ ಅವರ ಮಗಳು ಹಾಗೂ ಅವರ ಸೊಸೆ ಡ್ಯಾನ್ಸ್ ಮಾಡಿದ್ದಾರೆ ಅದರ ಬಗ್ಗೆ ಹಾಗೂ ಸೃಜನ್ ಲೊಕೇಶ್ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರತಿಭಾವಂತ ಕಲಾವಿದೆ ಗಿರಿಜಾ ಲೊಕೇಶ್ ಅವರು ನಗು ನಗುತ್ತಲೇ ಜೀವನದಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಗಿರಿಜಾ ಲೊಕೇಶ್ ಅವರು ಚಿಕ್ಕ ವಯಸ್ಸಿನಲ್ಲೇ ರಂಗಭೂಮಿ ಕಲಾವಿದೆಯಾಗಿ ನಟನೆ ಪ್ರಾರಂಭಿಸಿದ್ದಾರೆ. ನಂತರ ಸಿನಿಮಾ, ಕಿರುತೆರೆಯಲ್ಲಿ ನಟಿಸಿ ಮನೆ ಮನೆ ಮಾತಾದ ಗಿರಿಜಾ ಅವರು ಲೊಕೇಶ್ ಅವರನ್ನು ವಿವಾಹವಾಗಿ ಅವರಿಗೆ ಪೂಜಾ ಲೊಕೇಶ್, ಸೃಜನ್ ಲೊಕೇಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಗಿರಿಜಾ ಲೊಕೇಶ್ ಅವರು ಈಗಿನ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ರೀತಿಯ ವಿದ್ಯೆಯನ್ನು ಕಲಿಯಬೇಕು ಎಂದು ಹೇಳಿದರು.

ಲೊಕೇಶ್ ಅವರು ಉತ್ತಮ ನಟರಾಗಿದ್ದರು ಅವರ ಸಿನಿಮಾಗಳು ಹಿಟ್ ಆಗಿದ್ದವು. ಅವರ ಮರಣದ ನಂತರ ಸೃಜನ್ ಲೊಕೇಶ್ ಬಹಳ ವರ್ಷಗಳ ಕಾಲ ಕಷ್ಟ ಪಡುತ್ತಾರೆ ಆದರೆ ಯಾವುದೇ ಪ್ರತಿಫಲ, ಯಶಸ್ಸು ಸಿಗಲಿಲ್ಲ. ಸೃಜನ್ ಲೊಕೇಶ್ ಅವರು ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಭಾಗವಹಿಸಿ ವಿನ್ ಆಗುತ್ತಾರೆ ಅಲ್ಲಿಂದ ಅವರ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಹಾಗೂ ಅವಕಾಶಗಳು ಸಿಗುತ್ತದೆ ಆದರೆ ಸೃಜನ್ ಲೊಕೇಶ್ ಅವರು ತಮ್ಮದೇ ಸ್ವಂತ ಬ್ಯಾನರ್ ನಲ್ಲಿ ಮಜಾ ಟಾಕೀಸ್ ಅನ್ನು ಪ್ರೊಡ್ಯೂಸ್ ಮಾಡುತ್ತಾರೆ. ಮಜಾ ಟಾಕೀಸ್ ನಿಂದ ಸೃಜನ್ ಅವರಿಗೆ ಒಳ್ಳೆಯ ಹೆಸರು ಆದಾಯ ಬಂದಿತು. ಎಲ್ಲರೂ ಮಜಾ ಟಾಕೀಸ್ ನೋಡಲು ಕಾಯುತ್ತಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಸೃಜನ್ ಅವರು ಗ್ರೀಷ್ಮಾ ಅವರನ್ನು 2010 ರಲ್ಲಿ ವಿವಾಹವಾಗಿದ್ದಾರೆ ಅವರು ಗುಪ್ತಗಾಮಿನಿ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಅವರು ನಟಿ, ಥಿಯೇಟರ್ ಆರ್ಟಿಸ್ಟ್ ಹಾಗೂ ಕಥಕ್ಕಳಿ ಡ್ಯಾನ್ಸರ್ ಆಗಿದ್ದಾರೆ.

ಸೃಜನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗ್ರೀಷ್ಮಾ ಅವರು ಶ್ವೇತಾ ಚಂಗಪ್ಪ ಅವರೊಂದಿಗೆ ಬಿಸಿನೆಸ್ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶ್ವೇತಾ ಹಾಗೂ ಗ್ರೀಷ್ಮಾ ಬಹಳ ವರ್ಷಗಳಿಂದ ಪರಿಚಯ ಹಾಗೂ ಅವರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಸೃಜನ್ ಲೊಕೇಶ್ ಅವರ ಅಕ್ಕ ಪೂಜಾ ಲೊಕೇಶ್ ಅವರು ಪ್ರತಿಭಾವಂತರು. ಬಹಳ ವರ್ಷಗಳ ನಂತರ ಸೃಜನ್ ಲೊಕೇಶ್ ಅವರ ಕುಟುಂಬ ಸಂತೋಷವಾಗಿದೆ. 1 ವಾರದ ಹಿಂದೆ ಗಿರಿಜಾ ಲೊಕೇಶ್ ಅವರ ಹುಟ್ಟುಹಬ್ಬವಿರುವುದರಿಂದ ಸೃಜನ್ ಲೊಕೇಶ್ ಅವರ ಪತ್ನಿ ಗ್ರೀಷ್ಮಾ ಹಾಗೂ ಪೂಜಾ ಲೊಕೇಶ್ ಅವರು ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ ಅವರೊಂದಿಗೆ ಗಿರಿಜಾ ಲೊಕೇಶ್ ಕೂಡ ಸ್ಟೆಪ್ ಹಾಕಿದ್ದಾರೆ ಅವರ ಕುಟುಂಬದವರು ಅನ್ಯೋನ್ಯವಾಗಿ ಇದ್ದಾರೆ. ಹೀಗೆಯೆ ಸೃಜನ್ ಲೊಕೇಶ್ ಅವರ ಕುಟುಂಬ ಸಂತೋಷವಾಗಿ ಇರಲಿ ಎಂದು ಆಶಿಸೋಣ.

Leave a Comment