ಸುದೀಪ್ ಕಡೆಯಿಂದ ತನ್ನ ಬಾಡಿ ಗಾರ್ಡ್ ಸಿಕ್ತು ದುಬಾರಿ ಗಿಫ್ಟ್

0 0

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಟರು ನಮಗೆಲ್ಲರಿಗೂ ಗೊತ್ತಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಅವರು ಸಿನಿಮಾ ಮಾಡುವುದರಲ್ಲಿ ಫೇಮಸ್ ಆಗಿರುವುದರ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡುತ್ತಾರೆ. ಸುದೀಪ್ ಅವರು ತಮ್ಮ ಅಂಗರಕ್ಷಕ ಸಾಯಿಕಿರಣ್ ಅವರಿಗೆ ಸಂಕ್ರಾಂತಿ ವಿಶೇಷವಾಗಿ ಉಡುಗೊರೆ ನೀಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಿರುವ ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರು ಮದಕರಿ, ಕೆಂಪೇಗೌಡ, ರಂಗ SSLC, ಹೆಬ್ಬುಲಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸುದೀಪ್ ಅವರು ತಮ್ಮ ತಂದೆ, ತಾಯಿ, ಹೆಂಡತಿ, ಮಗಳು ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ತಮ್ಮವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ, ಜೀವನದಲ್ಲಿ ಕುಟುಂಬಕ್ಕೆ ಹೆಚ್ಚು ಮೌಲ್ಯವನ್ನು ಕೊಡುತ್ತಾರೆ. ಅವರು ಆಪ್ತ ಸಿಬ್ಬಂದಿಯವರನ್ನು ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬಹಳ ವರ್ಷಗಳಿಂದ ತಮ್ಮ ಜೊತೆಗೆ ಕೆಲಸ ಮಾಡುತ್ತಿರುವ ತಮ್ಮ ಅಂಗರಕ್ಷಕ ಸಾಯಿ ಕಿರಣ್ ಅವರಿಗೆ ಸಂಕ್ರಾಂತಿ ಹಬ್ಬದ ದಿನದಂದು ವಿಶೇಷ ಉಡುಗೊರೆ ನೀಡಿದ್ದಾರೆ. ಸುದೀಪ್ ಅವರು ಸಾಯಿಕಿರಣ್ ಅವರಿಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಬುಲೆಟ್ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಂತರ ಸಾಯಿ ಕಿರಣ್ ಅವರು ಮೀಡಿಯಾದಲ್ಲಿ ಮಾತನಾಡುತ್ತಿರುವಾಗ ಇದು ನನಗೆ ನಿಜವಾಗಲೂ ಆಶ್ಚರ್ಯ ಹಾಗೂ ಸಂತೋಷವಾಯಿತು. ಸಾಯಿಕಿರಣ್ ಅವರು ಸಂತೋಷದಿಂದ ಮೊದಲು ತಾನು ಈ ಬೈಕ್ ನಲ್ಲಿ ಕಿಚ್ಚ ಸುದೀಪ್ ಅವರನ್ನು ಕೂರಿಸಿಕೊಂಡು ಸುತ್ತುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸುದೀಪ್ ಅವರು ನಟಿಸಿದ ಸ್ಪರ್ಶ ಸಿನಿಮಾ ಸಾಯಿಕಿರಣ್ ಅವರಿಗೆ ಬಹಳ ಇಷ್ಟವಂತೆ, ಈ ಸಿನಿಮಾದ ನಂತರ ಸುದೀಪ್ ಅವರ ಅಭಿಮಾನಿಯಾಗಿದ್ದಾರೆ. ಆರು ವರ್ಷದಿಂದ ಸಾಯಿ ಕಿರಣ್ ಅವರು ಸುದೀಪ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಸುದೀಪ್ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಸಾಯಿ ಕಿರಣ್ ಅವರು ಚಿರಋಣಿ ಎಂದು ಹೇಳಿಕೊಂಡಿದ್ದಾರೆ. ಸುದೀಪ್ ಅವರ ಸಹೃದಯ ಗುಣದ ಬಗ್ಗೆ ಇನ್ನೊಂದು ಘಟನೆಯೆಂದರೆ ಒಮ್ಮೆ ಸುದೀಪ್ ಅವರು ಚಾಮುಂಡಿ ಬೆಟ್ಟಕ್ಕೆ ಹೋದಾಗ ಅಲ್ಲಿ ಎದುರಾದ ಅಂಗವಿಕಲ ಅಭಿಮಾನಿಯೊಬ್ಬನಿಗೆ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ ಸುದೀಪ್ ಅವರು ತಮ್ಮದೇ ಆದ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿ ಸಮಾಜಕ್ಕೆ ಉಪಕಾರವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಸುದೀಪ್ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ. ಅವರು ನಡೆಸಿಕೊಡುವ ಬಿಗ್ ಬಾಸ್ ಎಲ್ಲರ ಮನಸ್ಸನ್ನು ಗೆದ್ದಿದೆ.

ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ ಅವರ ಸಿನಿಮಾ ನೋಡಲು ಜನರು ಕಾತರದಿಂದ ಕಾಯುತ್ತಾರೆ. ಕಿಚ್ಚ ಸುದೀಪ್ ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಜೀವನದಲ್ಲಿ ಸಂತೋಷವಾಗಿರಲಿ ಎಂದು ಆಶಿಸೋಣ.

Leave A Reply

Your email address will not be published.