ಬಡವರಿಗಾಗಿ ಸುಮಾರು 500 ಶೌಚಾಲಯ ಕಟ್ಟಿಸಿಕೊಟ್ಟ ಫಾರೆಸ್ಟ್ ಆಫೀಸರ್ P.G ಸುಧಾ

0 2

forest officer pg sudhaಫಾರೆಸ್ಟ್ ಆಫೀಸರ್ P.G ಸುಧಾ ಅವರು ಕೇರಳ ಬುಡಕಟ್ಟು ಪ್ರದೇಶದಲ್ಲಿ ಸುಮಾರು 500 ಶೌಚಾಲಯಗಳನ್ನು ನಿರ್ಮಿಸಿ ಕೇರಳವನ್ನು ನಿರ್ಮಲಗೋಳಿಸುವುದಕ್ಕೆ ಸಹಾಯ ಮಾಡುತ್ತಾ ಇದ್ದಾರೆ. 50 ವರ್ಷ ವಯಸ್ಸಿನ P.G ಸುಧಾ ಅವರು 9 ಬುಡಕಟ್ಟು ಪ್ರದೇಶಗಳಲ್ಲಿ 3 ತಿಂಗಳಿನಲ್ಲಿ ಸುಮಾರು 500 ಶೌಚಾಲಯಗಳನ್ನು ನಿರ್ಮಿಸಿ ಉತ್ತಮ ಅರಣ್ಯ ರಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.{Best forest guard}. ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಯಂಕರ ಪ್ರಾಣಿಗಳು, ಕದ್ದು ಭೇಟೆ ಆಡುವವರು, ಗುಡ್ಡ ಬೆಟ್ಟ, ಘನಘೋರ ರಸ್ತೆಗಳು ಇವೆಲ್ಲ ಒಬ್ಬ ಅರಣ್ಯ ರಕ್ಷಕನಿಗೆ ಬರುವ ಸರ್ವೇ ಸಾಮಾನ್ಯ ಸಮಸ್ಯೆಗಳು. ಈ ಸಮಸ್ಯೆಗಳನ್ನು ಎದುರಿಸುವುದು ಅವರ ದಿನಚರಿ. ಇದನ್ನೆಲ್ಲ ಯೋಚಿಸಿದಾಗ ನಾವು ಒಂದು ಹೆಣ್ಣನ್ನು ಅಂತಹ ಕೆಲಸದಲ್ಲಿ ಅಥವಾ ಕೆಲಸದ ಸನ್ನಿವೇಶದಲ್ಲಿ ಶ್ರಮ ಪಡುವುದನ್ನು ಊಹಿಸಲು ಸಹ ಸಾಧ್ಯವಿಲ್ಲ. ಹೀಗಾಗಿ P.G ಸುಧಾ ಒಂದು ಸಾಧಾರಣ ಮಹಿಳೆ ಅಲ್ಲಾ ಎಂದರೆ ತಪ್ಪಾಗಲಾರದು. ಇವರು ಸತತವಾಗಿ ಹದಿನಾರು ವರ್ಷಗಳಿಂದಲೂ ಶಿಸ್ತಿನಿಂದ ಸ್ವಚ್ಛತೆ ಹಾಗೂ ಕಾಡು ಪ್ರಾಣಿಗಳ ರಕ್ಷಣೆಗೆ ಎಂದೇ ಸುಧಾ ಅವರು ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಕಾಡಿನ ಮಧ್ಯದಲ್ಲಿ ಇರುವ ಬುಡಕಟ್ಟು ಜನಾಂಗದವರು ಆಧುನಿಕ ಜೀವನ ಶೈಲಿಗೆ ಅವರು ಪರಿಚಿತರು ಅಲ್ಲಾ. ಹಾಗಾಗಿ ಅವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಮಾಡುವಾಗ ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದು ತಪ್ಪು ಅಥವಾ ಅದು ಕೆಟ್ಟ ಕೆಲಸ ಎಂದು ಅವರಿಗೆ ಅನ್ನಿಸುವುದಿಲ್ಲ.

2016 ರಲ್ಲಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಪ್ರತೀ ಜಿಲ್ಲೆಯ ಪ್ರತೀ ತಾಲೂಕುಗಳು ನಿರ್ಮಲ ಆಗುತ್ತಿರುವಾಗ ಸುಧಾ ಅವರಿಗೆ ಎರ್ನಾಕುಲಂ ನ ಡಿಸಿ ಆದ K ಮೊಹಮ್ಮದ್ Y ಸಫಿರುಲ್ ಅವರು ಶೌಚಾಲಯ ಹಾಗೂ ಆರೋಗ್ಯ ರಕ್ಷಣಾ ಸಂಬಂಧವಾಗಿ ಸೌಕರ್ಯಗಳನ್ನು ನಿರ್ಮಿಸುವ ಜವಾಬ್ಧಾರಿಯನ್ನು ವಹಿಸುತ್ತಾರೆ. ಇದೇನು ಸುಲಭವಾದ ಕೆಲಸ ಏನೂ ಆಗಿರಲಿಲ್ಲ. ಸುಧಾ ಅವರು ಕಾಂಟ್ರಾಕ್ಟರ್ ಗಳನ್ನು ಒಪ್ಪಿಸಲು ಎಂದು ಹೋದಾಗ ಅವರು ಕಾಡಿನ ಮಧ್ಯದಲ್ಲಿ ಸಾಮಗ್ರಿಗಳು ಹಾಗೂ ಜನರ ವ್ಯವಸ್ಥೆ ಮಾಡಲು ಆಗುವುದಿಲ್ಲ ಎಂದು ಹೇಳಿ ಕೆಲಸವನ್ನು ಒಪ್ಪಿಕೊಳ್ಳಲಿಲ್ಲ. ಒಂದುವೇಳೆ ಕೆಲಸ ಒಪ್ಪಿಕೊಂಡರೆ ಅವರು ಮೂರು ಪಟ್ಟು ಹೆಚ್ಚು ಹಣ ಕೇಳುತ್ತಿದ್ದರು. ಇವರ ಮಾತುಗಳಿಂದ ಬೇಸತ್ತ ಸುಧಾ ಅವರು ಸ್ವತಃ ತಾವೇ ಬುಡಕಟ್ಟು ಜನಾಂಗದವರು ಆಗಿದ್ದರಿಂದ ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡು ತಮ್ಮವರನ್ನು ಸಂಪರ್ಕಿಸಿ ಅವರ ಸಹಾಯ ಪಡೆದರು. ಬುಡಕಟ್ಟು ಜನಾಂಗದ ಮೆಸ್ತ್ರಿಯನ್ನು ಕರೆಸಿ ತಮ್ಮ ಕೆಲಸವನ್ನು ಆರಂಭಿಸಿದರು.

ಅಲ್ಲಿನ ಪಂಚಾಯತ್ ಕಡೆಯಿಂದ ಸಹಾಯ ಪಡೆದು ಅಲ್ಲಿ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ತೆಪ್ಪದ ವ್ಯವಸ್ಥೆ ಮಾಡಿಕೊಂಡರು. ಸುಧಾ ಅವರು ಇಲ್ಲಿ ಹಣಕಾಸಿನ ವ್ಯವಸ್ಥೆಯನ್ನು ಬಹಳಷ್ಟು ಚಾಕಚಕ್ಯತೆಯಿಂದ ನಿರ್ವಹಿಸಿದ್ದರು ಎಂದರೆ ತಪ್ಪಾಗಲಾರದು. ಹಾಗೂ ಅಷ್ಟೇ ಅಲ್ಲದೆ ತಮಗೆ ಕೊಟ್ಟಿರುವ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾಗಿ ಕೆಲಸ ಮುಗಿಸಿದ್ದರು. ಇಲ್ಲಿ ನಾವು ಸುಧಾ ಅವರನ್ನು ಒಂದು ಸೈನ್ಯಕ್ಕೆ ಹೋಲಿಸಿದರೆ ಏನೂ ತಪ್ಪಾಗಲಾರದು. ಸುಧಾ ಅವರು ಒಬ್ಬರೇ ಒಂಟಿಯಾಗಿ ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಕೇವಲ ಒಂದು ಕಟ್ಟಡದ ನಿರ್ವಹಣೆ ಅಲ್ಲದೆ 9 ಬುಡಕಟ್ಟು ಪ್ರದೇಶಗಳಲ್ಲಿ ಒಟ್ಟೂ 497 ಶೌಚಾಲಯಗಳನ್ನು 3 ತಿಂಗಳುಗಳ ಅವಧಿಯಲ್ಲಿ ಕಟ್ಟಿಸಿ ಮುಗಿಸಿದರು. ಸುಧಾ ಅವರ ಸಾಹಸ ಹಾಗೂ ಶ್ರಮಕ್ಕೆ ಕೇರಳ ಸಿಎಂ ಅವರಿಗೆ ಉತ್ತಮ ಅರಣ್ಯ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ನಾರಿ ಶಕ್ತಿ ಪುರಸ್ಕಾರ ಕೂಡಾ ದೊರಕಿದೆ.

ಶೌಚಾಲಯ ನಿರ್ಮಾಣವಾದ 3 ದಿನದ ನಂತರ ಜಾಗೃತಿಯ ಸವಾರಿ ಮಾಡಿದರು. ಅಲ್ಲಿ ಬುಡಕಟ್ಟು ಜನಾಂಗದವರು ಬಂದು ಶೌಚಾಲಯವನ್ನು ಬಳಕೆ ಮಾಡುವುದು ಹೇಗೆ? ಮತ್ತು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದರ ಕುರಿತಾಗಿ ಕೂಡಾ ತಿಳಿದುಕೊಂಡರು. ಹಾಗೆ ಸುಧಾ ಅವರು ಬುಡಕಟ್ಟು ಜನರಿಗೆ ಬಯಲಿನಲ್ಲಿ ಶೌಚ ಮಾಡುವುದರ ದುಷ್ಪರಿಣಾಮಗಳು ಹಾಗೂ ಪರಿಸರವನ್ನು ನಾವು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು? ಎನ್ನುವುದರ ಬಗ್ಗೆ ಕೂಡಾ ತಿಳಿಸಿ ಹೇಳಿದರು. ಪಿಜಿ ಸುಧಾ ಅವರು ಮಾಡಿದ ಕೆಲಸ ಉತ್ತಮವಾಗಿ ನೆರವೇರಿದೆ ಎನ್ನುವುದಕ್ಕೆ ಅವರು ಶೌಚಾಲಯಗಳನ್ನು ಬಳಸುವುದು ಮತ್ತು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಉತ್ತಮವಾದ ಸಾಕ್ಷಿ ಎನ್ನಬಹುದು. ಈ ಕೆಲಸದ ಮೂಲಕ ಸುಧಾ ಅವರು ತಮಗೆ ವಯಸ್ಸು 50 ಆಗಿದ್ದರೂ ಸಹ ಜನರಲ್ಲಿ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೇ ಅದರಿಂದ ನಮ್ಮ ಸಾಧನೆಗೆ ಏನೂ ಅಡ್ಡಿ ಇಲ್ಲ , ಯಾರೇ ಆದರೂ ಯಾವುದೇ ಕೆಲಸವನ್ನೂ ಮಾಡಬಲ್ಲರು ಎನ್ನುವುದನ್ನು ತೋರಿಸಿಕೊಟ್ಟರು. ಏಕೆಂದರೆ ಇಂತ ವಯಸ್ಸಿನಲ್ಲಿ ಕೂಡಾ ಈ ರೀತಿಯ ಒಂದು ಮಹಾನ್ ಬದಲಾವಣೆ ತಂದಿದ್ದಾರೆ , ಈ ಬದಲಾವಣೆ ಕೇವಲ ಒಂದು ಸಾಮಾನ್ಯ ಹೆಣ್ಣಿನಿಂದ ಮಾತ್ರ ಸುಲಭವಾಗಿ ಆಗುವುದಿಲ್ಲ. ಆ ಬದಲಾವಣೆಯ ಹಿಂದೆ ಎಷ್ಟು ಶ್ರಮ ಇರುತ್ತದೆ ಎಂದು ಕೇವಲ ಅವರಿಗೆ ಅಷ್ಟೇ ತಿಳಿದಿರುತ್ತದೆ. ಇದು ಕೇವಲ ಸುಧಾ ಅವರ ಶಿಸ್ತು ಹಾಗೂ ಶ್ರಮದ ಪ್ರತಿಫಲ ಎಂದರೆ ತಪ್ಪಾಗಲಾರದು.

Leave A Reply

Your email address will not be published.