ಈ ತಾಯಿ ಶರಾವತಿ ನದಿಯ ಹತ್ತಿರ ನೆಲೆಸಿದ್ದಾಳೆ.ಈ ದೇವಸ್ಥಾನ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿದೆ.ಹಾಗೆಯೇ ಇದು ಆಕರ್ಷಕ ದೀಪಗಳ ಮಧ್ಯ ಇದೆ.ಇವಳು ಕಳ್ಳ, ಕಾಕರಿಗೆ ದುಃಸ್ವಪ್ನವಾಗಿದ್ದಾಳೆ. ಅವಳು ಯಾರೆಂದರೆ ಸಿಗಂಧೂರು ಚೌಡೇಶ್ವರಿ. ನಾವು ಇಲ್ಲಿ ಸಿಗಂಧೂರು ಚೌಡೇಶ್ವರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಿಗಂಧೂರು ಚೌಡೇಶ್ವರಿಯ ಸನ್ನಿಧಿಯು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಇದೆ.ಇದು ಬಹಳ ಪ್ರಭಾವಿ ಪುಣ್ಯಕ್ಷೇತ್ರ ಆಗಿದೆ.ಸುಮಾರು 300ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರಕ್ಕೆ ಶರಾವತಿಯ ಹಿನ್ನೀರಿನಲ್ಲಿ ಲಾಂಚ್ ಬಳಸಿ ದಾಟಬೇಕಾಗುತ್ತದೆ.ಇಲ್ಲಿ ಪ್ರತಿವರ್ಷ ಮಕರಸಂಕ್ರಾಂತಿಯಂದು ಅತಿ ದೊಡ್ಡ ಜಾತ್ರೆ ನಡೆಯುತ್ತದೆ.ಈ ದೇವಿಯು ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿ ಹೊಂದಿದ್ದಾಳೆ ಎಂದು ನಂಬಲಾಗಿದೆ.ಇಲ್ಲಿ ಹರಕೆ ಹೊತ್ತುಕೊಂಡ ವ್ಯಕ್ತಿಗಳು ಕಳ್ಳಕಾಕರ ತೊಂದರೆಯಿಲ್ಲದೆ ನಿರ್ಭಯದಿಂದ ಬದುಕುತ್ತಾರೆ.

ಹರಕೆ ಹೊತ್ತುಕೊಂಡ ಮನೆಯಲ್ಲಿ ಕಳ್ಳತನ ಮಾಡಿದವರನ್ನು ದೇವಿ ಭಯಂಕರವಾಗಿ ಶಿಕ್ಷಿಸುತ್ತಾಳೆ ಎನ್ನುವ ನಂಬಿಕೆ ಇದೆ.ಹಾಗಾಗಿ ಹರಕೆ ಹೊತ್ತವರು ಫಲಕ ಹಾಕಿರುತ್ತಾರೆ.ಒಂದು ವೇಳೆ ಆಭರಣ, ದುಡ್ಡು ಮತ್ತು ಅಮೂಲ್ಯ ವಸ್ತುಗಳು ಕಳೆದುಹೋದಲ್ಲಿ ಇಲ್ಲಿಗೆ ಹರಕೆ ಹೊತ್ತುಕೊಂಡರೆ ಸಿಗುತ್ತವೆ ಎಂಬ ನಂಬಿಕೆ ಈ ಭಾಗದ ಜನಕ್ಕಿದೆ.ಹಾಗೆಯೇ ಇದಕ್ಕೆ ಸಾಕಷ್ಟು ನಿದರ್ಶನಗಳು ಸಹ ಇದೆ.

ಈ ದೇವಸ್ಥಾನ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 405km ದೂರದಲ್ಲಿ ಇದೆ.ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡಕ್ಕಿಂತ ಸುಮಾರು 213km ದೂರದಲ್ಲಿ ಇದೆ.ದಾವಣಗೆರೆಯಿಂದ 166km ದೂರದಲ್ಲಿ ಇದೆ.ಶಿವಮೊಗ್ಗದಿಂದ ಕೇವಲ 95km ದೂರದಲ್ಲಿದೆ.ಸಾಗರದಿಂದ ಹಾವಿನಹಳ್ಳಿ ದಾರಿಯಾಗಿ 32km ದೂರವಿದ್ದು ಹೊಳೆಹಳ್ಳಿಯವರೆಗೆ ರಸ್ತೆಯಿದೆ.

ಲಾಂಚ್ ನಿಗದಿತ ಸಮಯದಲ್ಲಿ ಮಾತ್ರ ಲಭ್ಯವಾಗುತ್ತದೆ.ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 11ವರೆಯವರೆಗೆ ಮತ್ತು ಮಧ್ಯಾಹ್ನ 1ಗಂಟೆಯಿಂದ 3ಗಂಟೆ ಹಾಗೂ ಸಾಯಂಕಾಲ 4 ಗಂಟೆಯಿಂದ 5ವರೆಯವರೆಗೆ ಲಾಂಚ್ ತೆರೆದಿರುತ್ತದೆ.

ಪಶ್ಚಿಮ ಘಟ್ಟಗಳ ದ್ವೀಪದಲ್ಲಿ ಸಿಗಂಧೂರು ಇರುವುದರಿಂದ ಯಾವುದೇ ಹೋಟೆಲ್ ಗಳು ಸಿಗುವುದಿಲ್ಲ.ದೇವಾಲಯದ ಆವರಣದಲ್ಲಿ ತಂಗಲು ಅವಕಾಶ ಇದ್ದರೂ ಸಹಿತ ಸೀಮಿತ ಕೊಠಡಿಗಳು ಲಭಿಸುತ್ತದೆ.ಆಷಾಢದ ಸಮಯದಲ್ಲಿ ಹಾಗೂ ವಿಶೇಷದ ಸಮಯದಲ್ಲಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.ಹಾಗೆಯೇ ದೇವಸ್ಥಾನದ ವೇಳೆ ಬೆಳಗ್ಗೆ 7ವರೆಯಿಂದ 1ಗಂಟೆ ಮತ್ತು ಸಾಯಂಕಾಲ 3ಗಂಟೆಯಿಂದ 7ಗಂಟೆಯವರೆಗೆ ತೆರೆದಿರುತ್ತದೆ.ಇದನ್ನು ಸ್ವಯಂ ಭೂ ವಿಗ್ರಹ ಎಂದು ನಂಬಲಾಗಿದೆ.

ಪ್ರಭಾವಿ ಪುಣ್ಯಕ್ಷೇತ್ರ ಆಗಿ ಬೆಳೆದು ನಿಂತಿರುವ ಈ ಚೌಡೇಶ್ವರಿಯು ಇಂದಿನ ಧರ್ಮದರ್ಶಿ ರಾಮಪ್ಪ ಅವರ ಕುಲದೇವರು.ಕನಸಿನಲ್ಲಿ ಆದ ಆದೇಶದಂತೆ ಸುಮಾರು1990ರಲ್ಲಿ ಆಗಮ ಶಾಸ್ತ್ರೋತ್ಸವವಾಗಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಗಂಧೂರಿನ ದೇವಿ ಚೌಡೇಶ್ವರಿಯು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave a Reply

Your email address will not be published. Required fields are marked *