ಗಣೇಶನನ್ನು ಯಾವುದೇ ಪೂಜೆಯನ್ನು ಮಾಡುವಾಗ ಮೊದಲು ಪ್ರಾರ್ಥಿಸಲಾಗುತ್ತದೆ.ಇವನಿಗೆ ಹಲವಾರು ಹೆಸರುಗಳಿವೆ.ಇವನು ಶಿವ ಮತ್ತು ಪಾರ್ವತಿಯ ಪುತ್ರನಾಗಿದ್ದಾನೆ.ಇವನ ವಾಹನ ಇಲಿ ಆಗಿದೆ.ಇವನ ಸಹೋದರ ಸುಬ್ರಹ್ಮಣ್ಯ. ಗಣೇಶನ ಜನ್ಮರಹಸ್ಯ ಮತ್ತು ಗಣೇಶನ ಶಿರ ಬಿದ್ದ ಜಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

ಗಣೇಶನನ್ನು ವಿಘ್ನವಿನಾಶಕ, ಲಂಬೋದರ, ಏಕದಂತ,ವಕ್ರತುಂಡ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಗಣೇಶನ ಮುಖವು ಆನೆಯ ಸೊಂಡಿಲು ಆಗಿದೆ.ಏಕೆಂದರೆ ಶಿವನು ಗಣೇಶನ ಶಿರಚ್ಛೇದನ ಮಾಡಿದನು.ಆಗ ಪಾರ್ವತಿಯು ಆನೆಯ ಮುಖವನ್ನು ತಂದು ಇರಿಸಿದಳು.ಗಣೇಶನನ್ನು ಓಂಕಾರ ಎಂದು ಕರೆಯುತ್ತಾರೆ.ಓಂ ಅಕ್ಷರವು ದೇವನಾಗರಿ ಲಿಪಿಯ ಅಕ್ಷರದಂತಿದೆ.ಆದ್ದರಿಂದ ಗಣೇಶನನ್ನು ಇಡೀ ವಿಶ್ವದ ಪ್ರತಿಪರೂಪ ಎಂದು ಕರೆಯಲಾಗುತ್ತದೆ.ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲಿ ಕೂಡ ಗಣೇಶನ ಪೂಜೆ ಮಾಡಲಾಗುತ್ತದೆ.ಹಿಂದೂ ಧರ್ಮದಲ್ಲಿ ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ ಪಡೆದ ವಿನಾಶಕನಿಗೆ ಮೊದಲ ಪೂಜೆ ಮಾಡುತ್ತಾರೆ.ಭಾದ್ರಪದ ಮಾಸದಲ್ಲಿ ಬರುವ ಚೌತಿಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶಿವ ಪುರಾಣದಲ್ಲಿ ಗಣೇಶನ ಜನ್ಮರಹಸ್ಯ ಹೀಗಿದೆ.ಕೈಲಾಸದಲ್ಲಿ ಪಾರ್ವತಿಯು ತನ್ನ ಸಖಿಯರ ಜೊತೆ ಇರುವಾಗ ಪರಶಿವನ ಆಗಮನವಾಗುತ್ತದೆ.ದ್ವಾರವನ್ನು ಕಾಯಲು ಗಣವನ್ನು ಇಟ್ಟಿದ್ದರೂ ಸಹ ಪರಶಿವ ಒಳಗೆ ಬಂದಿದ್ದು ಪಾರ್ವತಿಗೆ ಅಸಮಾಧಾನ ಆಯಿತು.ಈ ರೀತಿ ಮುಂದೆ ಹೀಗಾಗಬಾರದೆಂದು ಸ್ನಾನಕ್ಕೆ ಹೋಗುವ ಮೊದಲು ಮಣ್ಣಿನಿಂದ ಒಂದು ಮುದ್ದಾದ ಮಗುವನ್ನು ನಿರ್ಮಿಸಿ ಅದಕ್ಕೆ ಜೀವ ತುಂಬುತ್ತಾಳೆ.ಅವನ ಕೈಯಲ್ಲಿ ದಂಡವನ್ನು ಕೊಟ್ಟು ಕಾಯಲು ಹೇಳುತ್ತಾಳೆ.ಆದರೆ ಆಗ ಪರಶಿವನು ಆಗಮಿಸಿ ಇಬ್ವರ ನಡುವೆ ಅನೇಕ ಸಂಭಾಷಣೆಗಳು ನಡೆದ ನಂತರ ಬಾಲಕನು ಒಳಗೆ ಪ್ರವೇಶಿಸಲು ಸಮ್ಮತಿ ಕೊಡದ ಕಾರಣ ಶಿವನು ಸಿಟ್ಟಿಗೆದ್ದು ಬಾಲಕನ ಶಿರಚ್ಛೇದನ ಮಾಡುತ್ತಾನೆ.

ಇದನ್ನು ನೋಡಿ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋದಿಸುತ್ತಾಳೆ. ಆಗ ಶಿವನು ತನ್ನ ಭಂಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಕಡಿದುಕೊಂಡುಬರಲು ಹೇಳಿದಾಗ ಅಲ್ಲಿ ಒಂದು ಆನೆ ಸಿಗುತ್ತದೆ. ಅದರ ರುಂಡವನ್ನು ಕತ್ತರಿಸಿ ತಂದು ಶಿವನಿಗೆ ಕೊಟ್ಟಾಗ ಶಿವನು ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಕೂಡಿಸಿ ಪುನಃ ಬದುಕಿಸುತ್ತಾನೆ.”ಇಂದಿನಿಂದ ನೀನೇ ನನ್ನ ಕಿರಿಮಗ, ಸಕಲ ರುದ್ರಗಳ ಅಧಿಪತಿ,ಸರ್ವಕಾರ್ಯಗಳಲ್ಲಿ ನೀನೇ ಪ್ರಥಮ ಪೂಜಿತನಾಗು” ಎಂದು ಆಶೀರ್ವಾದ ಮಾಡುತ್ತಾನೆ.ಈ ಬಾಲಕನೇ ಗಣೇಶ.

ಶಿವನು ಗಣೇಶನ ಶಿರಚ್ಛೇದನ ಮಾಡಿದ್ದು ಕೈಲಾಸದಲ್ಲಿ ಆದರೆ ಶಿರ ಬಿದ್ದಿದ್ದು ಭಾರತ ದೇಶದ ಉತ್ತರಾಖಂಡ ರಾಜ್ಯದ ಪಾತಾಳಭುವನೇಶ್ವರದಲ್ಲಿ. ಪಾತಾಳಭುವನೇಶ್ವರದ ಬಗ್ಗೆ ಭಾರತದ ಗ್ರಂಥಗಳಲ್ಲಿ ಉಲ್ಲೇಖವಿದೆ.ಕಡಿದಾದ ಗುಹೆಗಳು ಇವೆ.ಅಲ್ಲಿಯ ಸರಪಳಿಗಳನ್ನು ಹಿಡಿದು ಹೋದರೆ ಆಳವಾದ ಕಂದಕ ಸಿಗುತ್ತದೆ. ಆಶ್ಚರ್ಯವೆಂದರೆ ಈಗಲೂ ಅಲ್ಲಿ ಒಬ್ಬ ಬಾಲಕ ನಿತ್ತಿರುವ ಹಾಗೆ ಕಾಣಿಸುತ್ತದೆ ಎಂದು ಭಕ್ತರು ಹೇಳುತ್ತಾರೆ.ಅಲ್ಲಿ ಗಣೇಶನ ಶಿರ ಈಗ ಕಲ್ಲಿನ ರೂಪವನ್ನು ಪಡೆದಿದೆ.ಇಲ್ಲಿಂದ ಕೈಲಾಸಪರ್ವತಕ್ಕೆ ದಾರಿ ಇದೆ. ಇದು ಜುಲ್ಯೆ ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ತೆರೆದಿದ್ದು ಸಣ್ಣ ಮಕ್ಕಳು ಮತ್ತು ಮಹಿಳೆಯರಿಗೆ ಪ್ರವೇಶವಿಲ್ಲ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave a Reply

Your email address will not be published. Required fields are marked *