Ultimate magazine theme for WordPress.

ಮಹಾಭಾರತ ಹಿಂದಿನಕಾಲದಲ್ಲಿ ಇದ್ದದ್ದು ನಿಜವೇ, ಶ್ರೀ ಕೃಷ್ಣ ಕಲಿಯುಗದ ಬಗ್ಗೆ ಅರ್ಜುನನ ಬಳಿ ಹೇಳಿದ್ದೇನು ಓದಿ ಇಂಟ್ರೆಸ್ಟಿಂಗ್

0 15

ಎಲ್ಲರಿಗೂ ಕೂಡ ಮಹಾಭಾರತದ ಬಗ್ಗೆ ಪರಿಚಯಿಸುವ ಇರುತ್ತದೆ. ಇದು ಧರ್ಮ ಹಾಗೂ ಅಧರ್ಮಗಳ ನಡುವೆ ನಡೆದ ಮಹಾನ್ ಯುದ್ಧ ಆಗಿದೆ.ಪ್ರಾಚೀನ ಕಾಲದಿಂದಲೂ ಈಗಿನವರೆಗೂ ದೊರೆತ ಹಲವು ಆಧಾರಗಳನ್ನು ನೋಡಿ ಮಹಾಭಾರತವು ವಾಸ್ತವವಾಗಿ ನೈಜ ಘಟನೆಗಳು ಎಂದು ನಂಬಲಾಗಿದೆ. ಮಹಾಭಾರತವು ಸತ್ಯವಾದರೂ ಪ್ರಮಾಣೀಕರಿಸುವ ಹಲವು ಸಾಕ್ಷ್ಯಾಧಾರಗಳು ಇವೆ.ಅವುಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದಾಗಿ ಮಹಾಭಾರತದ ರಾಜವಂಶ 50ಕ್ಕೂ ಹೆಚ್ಚಿನ ರಾಜರನ್ನು ಹೊಂದಿರುವ ಮಾಹಿತಿಯನ್ನು ನಿಕಟವಾಗಿ ಹೇಳಲಾಗಿದೆ. ಒಂದು ವೇಳೆ ಮಹಾಭಾರತ ಸತ್ಯವಲ್ಲದಿದ್ದರೆ 50ಕ್ಕೂ ಹೆಚ್ಚಿನ ರಾಜರುಗಳ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖ ಮಾಡಲು ಸಾಧ್ಯವಿಲ್ಲ.10 ಅಥವಾ 15 ರಾಜರ ಬಗ್ಗೆ ಹೇಳಿದರೆ ಸಾಕಿತ್ತು ಪೂರ್ಣ ರಾಜವಂಶದ ಬಗ್ಗೆ ಹೇಳಲಾಗುತ್ತಿರಲಿಲ್ಲ.

ಮಹಾಭಾರತದ ಸಮಯದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತಾನೆ.ಇದು ಕಲಿಯುಗ. ಅಂದರೆ ಕಲಿಯುಗದ ಬಗ್ಗೆ ಕೃಷ್ಣ ಅಂದೇ ಹೇಳಿದ್ದಾನೆ.ಅದು ಕಾಲ್ಪನಿಕವಾಗಿದ್ದರೆ ಇಂದು ನಿಜವಾಗುತ್ತಿರಲಿಲ್ಲ.ಕಲಿಯುಗ ದ್ವಾಪರಯುಗಕ್ಕಿಂತ ಬಹಳ ಭಿನ್ನವಾಗಿ ಇರುತ್ತದೆ ಎಂದು ಕೃಷ್ಣ ಮುಂಚೆಯೇ ತಿಳಿದಿದ್ದ.

ಶ್ರೀಕೃಷ್ಣನು ದ್ವಾರಕೆಯ ರಾಜನಾಗಿದ್ದನು. ಪುರಾತತ್ವ ಇಲಾಖೆಗೆ ದೊರೆತಿರುವ ಕುರುಹುಗಳ ಪ್ರಕಾರ ಗುಜರಾತಿನ ಒಂದು ಸಮುದ್ರದ ಕೆಳಗೆ ದ್ವಾರಕೆ ನಗರದ ಕುರುಹು ಇದೆ.ಕೆಲವು ಮೂಲಗಳು ಹೇಳುತ್ತವೆ ದ್ವಾರಕೆ ಎಂಬ ನಗರವು ಕೇವಲ ಕಾಲ್ಪನಿಕ ಎಂದು. ಆದರೆ ದೊರೆತಿರುವ ಅವಶೇಷಗಳಿಂದ ದ್ವಾರಕೆ ಒಂದು ನಿಜವಾದ ನಗರ ಕಾಲ್ಪನಿಕ ಅಲ್ಲ ಎಂದು ಹೇಳಲಾಗಿದೆ.

ಮಹಾಭಾರತದಲ್ಲಿ ಉಲ್ಲೇಖಿಸಲಾದ ನಗರಗಳು ಮಹಾಭಾರತ ನಿಜ ಎನ್ನುವುದಕ್ಕೆ ಇನ್ನೊಂದು ಬಲವಾದ ಆಧಾರವಾಗಿದೆ.ಇಲ್ಲಿ ಬರುವ ಹಲವು ನಗರಗಳು ಇಂದಿಗೂ ಕೂಡ ನಮ್ಮ ಜೊತೆಗಿದೆ.ಅವುಗಳೆಂದರೆ ಪುರಾತತ್ವ ಇಲಾಖೆಯ ಪ್ರಕಾರ ಅಂದಿನ ಹಸ್ತಿನಾಪುರ ಇಂದಿನ ಉತ್ತರಪ್ರದೇಶದಲ್ಲಿದೆ.ಇಂದ್ರಪ್ರಸ್ಥ ಎನ್ನುವ ನಗರವು ಇಂದಿನ ದೆಹಲಿ ಆಗಿದೆ.ಶ್ರೀಕೃಷ್ಣನ ದ್ವಾರಕೆಯು ಇಂದು ಗುಜರಾತಿನ ಒಂದು ನಗರವಾಗಿದೆ.

ಇತಿಹಾಸದಲ್ಲಿ ಬರುವಂತಹ ಚಂದ್ರಗುಪ್ತಮೌರ್ಯನು ಶ್ರೀಕೃಷ್ಣನ ವಂಶದ 138ನೇ ರಾಜನಾಗಿದ್ದಾನೆ.ಚಂದ್ರಗುಪ್ತಮೌರ್ಯನ ಬಗ್ಗೆ ನಾವು ಇತಿಹಾಸಗಳಲ್ಲಿ ಕೇಳಿರುತ್ತೇವೆ.ಅಲ್ಲಿಗೆ ಶ್ರೀಕೃಷ್ಣನ ಇರುವಿಕೆಗೆ ಇದೂ ಕೂಡ ಸಾಕ್ಷಿ ಆಗಿದೆ.ಹಾಗೆಯೇ ಪುರಾತತ್ವ ಮೂಲದ ಪ್ರಕಾರ ಕುರುಕ್ಷೇತ್ರ ಯುದ್ಧದ ಒಬ್ಬ ವ್ಯಕ್ತಿಯ ಅಸ್ಥಿಪಂಜರ ದೊರೆತಿದೆ.ಅದನ್ನು ಘಟೋದ್ಘಜನ ಅಸ್ಥಿಪಂಜರ ಎಂದು ತಿಳಿಯಲಾಗಿದೆ.

ಹಾಗೆಯೇ ಮಹಾಭಾರತದ ಯುದ್ಧವು ಕುರುಕ್ಷೇತ್ರದಲ್ಲಿ ನಡೆದಿದೆ.ಅದು ಇಂದೂ ಹರಿಯಾಣದಲ್ಲಿದೆ.ಅದು ಇಂದಿಗೂ ಕೂಡ ನಮ್ಮೊಂದಿಗಿದೆ.ಆ ಭಯಾನಕ ಯುದ್ಧದಲ್ಲಿ ಹರಿದ ರಕ್ತದಿಂದಾಗಿ ಇಂದಿಗೂ ಕೂಡ ಅಲ್ಲಿನ ಮಣ್ಣು ಅಚ್ಚಗೆಂಪು ಹೊಂದಿದೆ.ಇವೆಲ್ಲ ಕುರುಹುಗಳು ಮಹಾಭಾರತ ಸತ್ಯ ಎಂದು ತೋರಿಸುತ್ತಿವೆ.

Leave A Reply

Your email address will not be published.