ರೋಹಿತ್ ಶರ್ಮಾ ಅವರ ಲೈಫ್ ಸ್ಟೈಲ್ ಹಾಗೂ ಅವರ ಮುದ್ದು ಮಗಳು ಹೇಗಿದ್ದಾಳೆ ನೋಡಿ

0 3

ರೋಹಿತ್ ಶರ್ಮಾ ಅವರ ಜೀವನ ಹಾಗೂ ಅವರ ಮಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರೋಹಿತ್ ಶರ್ಮಾ 1987 ಏಪ್ರಿಲ್ 30 ರಂದು ನಾಗಪುರದಲ್ಲಿ ಜನಿಸುತ್ತಾರೆ. ತಂದೆ ಗುರುನಾಥ ಶರ್ಮಾ, ತಾಯಿ ಪೂರ್ಣಿಮಾ ಶರ್ಮಾ. ಇವರದು ಬಡ ಕುಟುಂಬವಾಗಿದ್ದು ಚಿಕ್ಕ ಮನೆಯಲ್ಲಿ ವಾಸವಿರುತ್ತಾರೆ ಆದ್ದರಿಂದ ರೋಹಿತ್ ಶರ್ಮಾ ಅವರನ್ನು ಅಜ್ಜಿ ಮನೆಯಲ್ಲಿ ಇಡಲಾಗುತ್ತದೆ. ಅಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾರೆ. ಅವರಿಗೆ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯುತ್ತದೆ. ಅವರನ್ನು ಒಂದು ಕ್ರಿಕೆಟ್ ಕ್ಲಬ್ ಗೆ ಸೇರಿಸುತ್ತಾರೆ. ಅಲ್ಲಿ ಇವರ ಆಸಕ್ತಿಯನ್ನು ನೋಡಿದ ಕೋಚ್ ನೀನು ಇಲ್ಲಿ ಬಿಟ್ಟು ಸ್ವಾಮಿ ವಿವೇಕಾನಂದ ಸ್ಕೂಲ್ ಗೆ ಸೇರು ಅಂತ ಹೇಳುತ್ತಾರೆ. ಅಲ್ಲಿ ಫೀಸ್ ಜಾಸ್ತಿ ಇದ್ದು ರೋಹಿತ್ ಅವರಿಗೆ ಕಟ್ಟಲು ಸಾಧ್ಯವಾಗುವುದಿಲ್ಲ ಆಗ ಕೋಚ್ ನಾಲ್ಕು ವರ್ಷಗಳವರೆಗೆ ಸ್ಕಾಲರ್ ಶಿಪ್ ಕೊಡಿಸುತ್ತಾರೆ.

ರೋಹಿತ್ ಶರ್ಮಾ ಅವರಿಗೆ ಮುದ್ದಾದ ಒಬ್ಬಳು ಮಗಳಿದ್ದು ಅವಳು ಸುಂದರವಾಗಿ ಹಾಗೂ ಚುರುಕಾಗಿದ್ದಾಳೆ. ಅವಳು 4 ವರ್ಷದವಳಿರಬಹುದು. ರೋಹಿತ್ ಶರ್ಮಾ ಅವರು ಮಗಳೊಂದಿಗೆ ಆಟವಾಡುತ್ತಾರೆ. ಮಗಳೊಂದಿಗೆ ಆಟವಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುದ್ದಾಗಿರುವ ತಮ್ಮ ಮಗಳ ಜೊತೆ ಬೆರೆಯುವುದು ಎಂದರೆ ರೋಹಿತ್ ಶರ್ಮಾ ಅವರಿಗೆ ಇಷ್ಟ. ನಗು ನಗುತ್ತಾ ಅವಳು ತನ್ನ ಅಪ್ಪ ಅಮ್ಮನ ಜೊತೆ ಆಟವಾಡುತ್ತಾಳೆ. ರೋಹಿತ್ ಅವರಿಗೆ ತಮ್ಮ ಮಗಳೆಂದರೆ ಅಪಾರ ಪ್ರೀತಿ. ರೋಹಿತ್ ಶರ್ಮಾ ಅವರ ಕುಟುಂಬಕ್ಕೆ ಹೆಚ್ಚಿನ ಸಂತೋಷ ಸಿಗಲಿ ಎಂದು ಹಾರೈಸೋಣ.

Leave A Reply

Your email address will not be published.