ಯಶ್ ಹಾಗೂ ರಾಧಿಕಾ ಮಗಳು ಐರಾ ಹಾಡಿರುವ ಕ್ಯೂಟ್ ವಿಡಿಯೋ

0 0

ಯಶ್ ಮತ್ತು ರಾಧಿಕಾ ಪಂಡಿತ್ ಮಗಳಾದ ಐರಾ ಎರಡು ವರ್ಷದ ಪುಟ್ಟ ಹುಡುಗಿ. ತನ್ನ ತುಂಟಾಟಗಳಿಂದ ಮನೆಯವರ ಮೊಗದಲ್ಲಿ ನಗು ಅರಳಿಸುತ್ತಾ, ತನ್ನ ತಮ್ಮ ಯಥರ್ವ್ ಜೊತೆ ಆಟ ಆಡುತ್ತಾ ಇರುತ್ತಾಳೆ. ಈ ಪುಟಾಣಿಯ ಆಟ, ಪಾಠ ಹಾಡುಗಳ ಬಗ್ಗೆ ನಾವು ತಿಳಿಯೋಣ.

ರಾಧಿಕಾ ಮಗಳು ಐರಾ ಈ ಚಿಕ್ಕ ವಯಸ್ಸಿನಲ್ಲಿಯೆ ಹಾಡು ಹೇಳುತ್ತಾಳೆ. ಟಿವಿ ಎದುರಿನ ಟೇಬಲ್ ಮೇಲೆ ಹತ್ತಿ ಕೂರುವ ಮುದ್ದು ಪುಟಾಣಿ ಐರಾ ತನ್ನ ಗೊಂಬೆಯನ್ನು ಮಲಗಿಸುವ ಉದ್ದೇಶದಿಂದ ಅದನ್ನು ತಟ್ಟುತ್ತಾ, ತನ್ನದೆ ಭಾಷೆಯಲ್ಲಿ ಹಾಡು ಹೇಳುತ್ತಾ ಕುಳಿತುಕೊಳ್ಳುತ್ತಾಳೆ. ಯಶ್ ಜಾನಿ ಜಾನಿ ಎಸ್ ಪಪ್ಪ ಹಾಡನ್ನು ಯಥರ್ವ್ ಗೆ ಹೇಳಿಕೊಡುತ್ತಿದ್ದರೆ, ತಾನೂ ಹಾಡನ್ನು ಹೇಳುವ ಐರಾ ಓಪನ್ ಯುವರ್ ಮೌತ್ ಎಂದೊಡನೆ ಹಹಹ್ಹಾ ಎನ್ನುತ್ತಾಳೆ. ಯಥರ್ವ್ ಕೂಡಾ ಹೇಳಲು ಮುಂದಾಗುತ್ತಾನೆ. ತಮ್ಮ ಯಥರ್ವ್ ನನ್ನು ತನ್ನ ಕಾಲ ಮೇಲೆ ಮಲಗಿಸಿಕೊಂಡು ಮೆಲ್ಲಗೆ ಅವನನ್ನು ತಟ್ಟುತ್ತಾ ತನಗೆ ತೋಚಿದ ರೀತಿಯಲ್ಲಿ ಲಾಲಿ ಹಾಡುತ್ತಾಳೆ‌. ಯಥರ್ವ್ ಅವಳ ಕೂದಲು ಜಗ್ಗಿದಾಗ ಅವನ ಹಿಡಿತದಿಂದ ತಪ್ಪಿಸಿಕೊಂಡು ನೊ ಬಬ್ಬ ಎನ್ನುವ ಐರಾ ಮತ್ತೆ ಮುದ್ದಾಗಿ ಹಾಡಲು ಪ್ರಾರಂಭಿಸುತ್ತಾಳೆ.

ಮಕ್ಕಳ ಆಟ, ಪಾಠವೆ ಚೆನ್ನ. ಅದರಲ್ಲಿಯೂ ಪುಟ್ಟ ಮಕ್ಕಳು ತಮಗಿಂತ ಚಿಕ್ಕವರನ್ನು ಆಧರಿಸುವ ರೀತಿ ಅದ್ಭುತ ಎಂದೆ ಹೇಳಬಹುದು. ಯಶ್ ರಾಧಿಕಾ ಮಗಳು ಐರಾ ಕೂಡ ತನ್ನ ಪುಟ್ಟ ತಮ್ಮನ ಜೊತೆ ಖುಷಿಯಾಗಿ ಸಂತೋಷವಾಗಿ ಆಡುತ್ತಾ ಇರುತ್ತಾಳೆ. ಇದನ್ನು ನೋಡಿದ ಕುಟುಂಬ ಸಂತೋಷದಲ್ಲಿ ಮುಳುಗಿದೆ.

Leave A Reply

Your email address will not be published.