Sri Ragavendra swamy Worship: ಆತ್ಮೀಯ ಓದುಗರೇ ಶ್ರೀ ರಾಘವೇಂದ್ರ ಸ್ವಾಮಿಗಳು (Sri Ragavendra swamy) ತಮ್ಮ ಜೀವಿತ ಅವಧಿಯಲ್ಲಿ ಅದ್ಭುತ ಪವಾಡಗಳನ್ನು ಮಾಡಿದ್ದಾರೆ ಇಂದಿಗೂ ತಮ್ಮ ಭಕ್ತರನ್ನ ಆಶೀರ್ವದಿಸಿ (Bless) ಅವರ ಕಷ್ಟಗಳನ್ನ ಕಳಿತಾ ಇದ್ದಾರೆ. ಶ್ರೀ ಗುರುಗಳು ಕೋರಿದ ಮಂಚಾಲೆ ಗ್ರಾಮವನ್ನ ನವಾಬ ಸಿದ್ದಿ ಮಸೂದ ಕಾನನೂ ಮೊದಲೇ ಒಬ್ಬ ಫಕೀರನಿಗೆ ಕೊಟ್ಟಿದ್ದನ್ನು ಆದರೆ ಶ್ರೀ ಗುರುವರಿಯರ ಕೋರಿಕೆಯನ್ನ ತಪ್ಪದೆ ನೆರವೇರಿಸುತ್ತೇನೆ ಎಂದು ನವಾಬನು ಆ ಫಕೀರನಿಗೆ ಬೇರೊಂದು ಗ್ರಾಮವನ್ನು ಕೊಟ್ಟು ಮಂಚಾಲೆ ಗ್ರಾಮವನ್ನ ವಾಪಾಸ್ ತೆಗೆದುಕೊಂಡು ಶ್ರೀ ರಾಘವೇಂದ್ರ ಗುರುಗಳಿಗೆ ಸಮರ್ಪಿಸಿದನು.

ಮಂಚಾಲೆ ಅಂದರೆ ಹಿಂದೆ ಶ್ರೀ ಪ್ರಹಲ್ಲಾದ ರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರ ಸ್ಥಳ ಆದ್ದರಿಂದಲೇ ಶ್ರೀ ರಾಘವೇಂದ್ರ ಸ್ವಾಮಿಗಳು ಮಂಚಾಲೆ ಗ್ರಾಮವನ್ನು ಕೇಳಿಕೊಂಡರು ಅವರ ಕೋರಿಕೆಯನ್ನು ನೆರವೇರಿಸುವುದಲ್ಲದೆ ವಿಧವಿಧವಾಗಿ ಅವರನ್ನ ಸತ್ಕರಿಸಿ ನಮಸ್ಕಾರ ಮಾಡಿ ಬೇಡಿಕೊಳ್ಳುತ್ತಾನೆ.

ವೆಂಕಣ್ಣ ಶ್ರೀಗಳ ಆಜ್ಞೆಯ ಮೇರೆಗೆ ಬೃಂದಾವನವನ್ನು ಮಾಡಿಸುತ್ತಾರೆ ಹಲವು ಭಕ್ತರು ಪಂಡಿತರು ಗಾಯಕರು ಶ್ರೀಗಳ ಬೃಂದಾವನ ಪ್ರವೇಶ ನೋಡಲು ಬರುತ್ತಾರೆ. ಶ್ರೀ ರಾಘವೇಂದ್ರ ಗುರುಗಳು ಶ್ರೀ ವಿರೋಧಿ ಕ್ರಿಕ್ ಸಂವತ್ಸರ ಶ್ರಾವಣ ಮಾಸ ಬೌಳ ಬಿದಿಗಿಯ ಗುರುವಾರದಂದು ಬೃಂದಾವನವನ್ನು ಪ್ರವೇಶಿಸುತ್ತಾರೆ. ಬೃಂದಾವನ ಪ್ರವೇಶ ಮಹೋತ್ಸವ ಬಹಳ ವೈಭವದಿಂದ ಜರಗುತ್ತದೆ ಬೃಂದಾವನವನ್ನು ನಿರ್ಮಿಸಿ ಹೆಚ್ಚು ಉಳಿದ ಶಿಲೆಯನ್ನ ಶ್ರೀ ಪ್ರಾಣದೇವರ ವಿಗ್ರಹವನ್ನು ನಿರ್ಮಿಸಿ ಬೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.

ರಾಯರ ನಂಬಿ ಕೆಟ್ಟವರಿಲ್ಲ ಮನುಜ ಎನ್ನುವ ಮಾತಿದೆ “ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ”ಈ ಸ್ತೋತ್ರವನ್ನು ಭಕ್ತಿಯಿಂದ ಪಟಿಸಿ ಪೂಜಿಸಿದರೆ ರಾಘವೇಂದ್ರ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಪಾಲಿಗೆ ಸದಾ ಇರುತ್ತದೆ.

ಇನ್ನು ರಾಯರ ಪವಾಡ ಎಲ್ಲರಿಗೂ ಗೊತ್ತೆಯಿದೆ ಎಷ್ಟೋ ಜನರಿಗೆ ಸಂತಾನ ಭಾಗ್ಯ ಹಲವಾರು ಭಕ್ತರ ಕಷ್ಟ ಕಾರ್ಪಣ್ಯ ನಿರ್ಮೂಲನೆ ಮಾಡಿದ್ದಾರೆ. ಗುರುವಾರ ರಾಯರ ಆರಾಧನೆ ಭಕ್ತಿಯಿಂದ ಪೂಜಿಸದಲ್ಲಿ ಅವರ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.

ಮಂತ್ರಾಲಯದಲ್ಲಿ ರಾಯರ ದರ್ಶನದ ನಂತರ ಅಲ್ಲಿ ನೀಡುವ ಅಕ್ಷತೆಗೆ ಅಪಾರ ಶಕ್ತಿ ಇದ್ದು ಅದನ್ನು ಸ್ವೀಕರಿಸಿದ ಮೇಲೆ ನೆಲಕ್ಕೆ ಚೆಲ್ಲದೆ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ದೇಹದ ಬಲಭಾಗದ ಜೆಬಿ ನಲ್ಲಿ ಇಟ್ಟುಕೊಂಡು ಮನೆಗೆ ಹೋದ ಮೇಲೆ ದೇವರ ಮನೆಯಲ್ಲಿಟ್ಟು ನಂತರ ಶ್ರೀಗಂಧ ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ಹಾಕಿ ತಲೆಯ ಮೇಲೆ ಪ್ರೋಕ್ಷಣೆ ಮಾಡುತ್ತಾ ಗುರುರಾಯರ ನೆನೆಯುತ್ತಾ ತಮ್ಮ ಕೆಲಸದ ಬಗ್ಗೆ ರಾಯರಲ್ಲಿ ಬೇಡಿದಾಗ ಅವರು ಅಂದು ಕೊಂಡಂತಹ ಕೆಲಸ ಯಶಸ್ವಿ ಆಗುತ್ತದೆ ಎನ್ನುವ ನಂಬಿಕೆ ಇದೆ

ರಾಯರ ಮಂತ್ರಾಕ್ಷತೆಯನ್ನು ಶೇಖರಣೆ ಮಾಡಿಟ್ಟುಕೊಂಡು ದಿನ ಹೊರಗಡೆ ಹೋಗುವಾಗ ಎರಡು ಕಾಳನ್ನ ರಾಯರ ನೆನೆಯುತ್ತಾ ತಲೆ ಮೇಲೆ ಹಾಕಿಕೊಂಡರೆ ಯಾವುದೇ ದುಷ್ಟಶಕ್ತಿ ಹತ್ರ ಸುಳಿಯುವುದಿಲ್ಲ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಹಾಗೂ ಆರೋಗ್ಯ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠವಾದದ್ದು ಗುರುವಾರ ಪೂಜೆಯ ಸಮಯದಲ್ಲಿ ಜಪಿಸುವುದರಿಂದ ಒಳ್ಳೆಯದಾಗುತ್ತದೆ. “ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್” ಈ ಮಂತ್ರ ತುಂಬಾ ಶಕ್ತಿಯನ್ನು ಹೊಂದಿದ್ದು ಇದರ ಪಠಣದಿಂದ ಸಂಕಷ್ಟ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

By

Leave a Reply

Your email address will not be published. Required fields are marked *