ಹುಲಿಯನ್ನು ತನ್ನ ವಾಹನವನ್ನಾಗಿಸಿಕೊಂಡ ಶ್ರೀ ಮಲೆ ಮಹದೇಶ್ವರನ ಪವಾಡವನೊಮ್ಮೆ ಓದಿ

0 37

ನಮ್ಮ ಕರ್ನಾಟಕ ರಾಜ್ಯದಲ್ಲಿ ಶಿವನಿಗೆ ಮುಡಿಪಾದ ಅನೇಕ ದೇವಸ್ಥಾನ ಗಳಿರುವುದನ್ನು ನಾವೆಲ್ಲರೂ ಕಾಣಬಹುದಾಗಿದೆ. ಕೆಲವು ದೇವಾಲಯಗಳು ರಾಜ ಮಹಾರಾಜರುಗಳ ಕಾಲದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳಾಗಿದ್ದರೆ ಇನ್ನು ಕೆಲವು ಆಧುನಿಕ ನಿರ್ಮಾಣಗಳಾಗಿವೆ. ಮತ್ತೆ ಕೆಲವು ಸ್ವಯಂಭೂ ಶಿವಲಿಂಗಗಳಾಗಿ ಪ್ರಸಿದ್ಧಿ ಗಳಿಸಿವೆ. ಅಂತಹ ಸ್ವಯಂಭೂ ಶಿವಲಿಂಗಗಳ ಪೈಕಿ ಪ್ರಮುಖವಾದದ್ದು ಮಲೆ ಮಹದೇಶ್ವರ ಬೆಟ್ಟ.

ಕರ್ನಾಟಕ ರಾಜ್ಯದ ಚಾಮರಾಜನಗರದಲ್ಲಿರುವ ಮಲೆ ಮಹದೇಶ್ವರ ಬೆಟ್ಟವು ಶಿವನ ಅವತಾರವೆಂದು ನಂಬಲಾದ ಹುಲಿಯನ್ನು ವಾಹನವಾಗಿಸಿಕೊಂಡ ಮಲೆ ಅಥವಾ ಬೆಟ್ಟದಲ್ಲಿ ನೆಲಸಿ ಪವಾಡಗಳನ್ನು ಸೃಷ್ಟಿಸುತ್ತಿರುವ ಮಹದೇಶ್ವರ ನ ಪುಣ್ಯಕ್ಷೇತ್ರ ವಾಗಿದೆ.

ನಮ್ಮ ಜಾನಪದ ಸಂಪದದಲ್ಲಿ ಮಿ ದೇಶ. ಮಾದಪ್ಪನಾಗಿರುವ ಈ ಮಹದೇಶ್ವರ ಬೆಟ್ಟವು ಆಸ್ತಿಕರ ತಾಣವಲ್ಲ. ಬೆಟ್ಟದ ಸೊಗಸು ನಿಸರ್ಗ ಪ್ರೇಮಿಗಳ ಪಾಲಿಗೆ ಚುಂಬಕ. ಈ ಸ್ಥಳ ಚಾರಣ ಪ್ರಿಯರಿಗೆ ಮುಕ್ತ ಆಹ್ವನವನ್ನು ನೀಡುವ ತಾಣವಾಗಿದೆ. ಬೆಟ್ಟವನ್ನು ಸುತ್ತುವರೆದಿರುವ ಹಸಿರು ಕಾನನ ಸೌಂದರ್ಯದ ನೆಲಬೀಡು.

ಮಹಾದೇವಶ್ವರ ಬೆಟ್ಟ ದಲ್ಲಿ ನೆಲಸಿರುವ 15 ನೇ ಶತಮಾನದ ಸಂತ ಹಾಗೂ ಸಾಕ್ಷತ್ ಶಿವನ ರೂಪವೆಂದು ನಂಬಲಾದ ಮಹದೇಶ್ವರರು. ಮಹದೇಶ್ವರರು ಇಲ್ಲಿ ನ ಬೆಟ್ಟಕ್ಕೆ ಬಂದು ನೆಲಸಿರುವ ಬಗ್ಗೆ ಈ ಭಾಗದ ಜನರಲ್ಲಿ ಅನೇಕ ಜಾನಪದ ಕಥೆಗಳಿವೆ.ಅದರಲ್ಲಿ ಒಂದು ಕಥೆಯ ಪ್ರಕಾರ ಮಾದೇಶ್ವರರ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮ ಎಂಬ ದಂಪತಿಗಳು.ಅವರು ಬಾಲಕ ಮಹದೇಶ್ವರರನ್ನು ಮೊದಲಬಾರಿಗೆ ಶ್ರೀ ಶೈಲ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ನೋಡಿ ಅವರನ್ನು ಸಾಕಲು ನಿರ್ಧರಿಸುತ್ತಾರೆ. ಅವರನ್ನು ಕರೆದುಕೊಂಡು ಬಂದು ಈಗಿನ ಮಾದೇಶ್ವರ ಬೆಟ್ಟದ ಪ್ರದೇಶಕ್ಕೆ ಬಂದು ನೆಲೆಸುತ್ತಾರೆ.ಬಾಲಕನಾಗಿದ್ದ ಮಹದೇಶ್ವರರು ಹುಲಿಯನ್ನೇ ವಾಹನ ಮಾಡಿಕೊಂಡು ಬೆಟ್ಟವನ್ನು ಸುತ್ತುತ್ತಾ ತಮ್ಮ ಅಲೌಕಿಕ , ಅಸಾಮಾನ್ಯ ಶಕ್ತಿಗಳಿಂದ ಅನೇಕ ಪವಾಡಗಳನ್ನು ಮಾಡಿ ಅಲ್ಲಿನ ಜನರನ್ನು ರಕ್ಷಿಸುತ್ತಿದ್ದರು ಎಂಬ ಪ್ರತೀತಿ ಇದೆ.

ಈ ಕ್ಷೇತ್ರ ದಲ್ಲಿ ಪ್ರತಿದಿನ ಐದು ಹೊತ್ತು ದಾಸೋಹ ನಡೆಯುತ್ತದೆ.ಮೈಸೂರಿನಿಂದ 145 ಕಿ.ಮೀ ಹಾಗೂ ಬೆಂಗಳೂರಿನಿಂದ 209 ಕಿ.ಮೀ ದೂರದಲ್ಲಿರುವ ಮಲೆಮಹದೇಶ್ವರ ನ ಬೆಟ್ಟದ ಮಹದೇಶ್ವರ ದೇವಸ್ಥಾನ ತಲುಪಲು ಬಸವನ ದಾರಿ ಸರ್ಪದ ದಾರಿ ಎಂಬು ಎರಡು ಕಾಲುದಾರಿಗಳಿವೆ.ಸರ್ಪದ ದಾರಿ ಬಲೂ ಕಡಿದಾಗಿದೆ, ಬಸವನ ದಾರಿ ಬಹು ಸುಗಮವಾಗಿದೆ. ಶ್ರೀ ಮಲೆ ಮಹದೇಶ್ವರ ನ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ ಎಲ್ಲರಿಗೂ ಒಳ್ಳೆಯದು ಮಾಡಲಿ.

Leave A Reply

Your email address will not be published.