ಅಪೌಷ್ಟಿಕತೆ ಹಾಗೂ ವಿಟಮಿನ್ ಕೊರತೆ ನೀಗಿಸಲು ಇನ್ನು ಮುಂದೆ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಈ ಹಣ್ಣು ಸಿಗುತ್ತೆ ಸರ್ಕಾರೀ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಇನ್ನು ಮುಂದೆ ಪಪ್ಪಾಯ ಹಾಗೂ ನುಗ್ಗೆ ಕಾಯಿ ನುಗ್ಗೆ ಸೊಪ್ಪು ಇವುಗಳನ್ನು ಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಆದೇಶ ನೀಡಿದೆ. ಮಕ್ಕಳು ಬೆಳೆಯುವ ಮಕ್ಕಳಾಗಿದ್ದು ಊಟದಲ್ಲಿ ಪೌಸ್ತಿಯಂಶ ಇದ್ರೆ ಉತ್ತಮ ಅರೋಗ್ಯ ಮಕ್ಕಳಿಗೆ ಲಭಿಸುತ್ತದೆ ಆ ನಿಟ್ಟಿನಲ್ಲಿ ಪೌಷ್ಟಿಕಾಂಶ ಭರಿತವಾದ ಹಣ್ಣು ತರಕಾರಿಗಳನ್ನು ನೀಡಲು ಯೋಜನೆ ರೂಪಿಸಿದೆ.

ಒಟ್ಟು ರಾಜ್ಯದಲ್ಲಿ 55,307 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 55 ಲಕ್ಷ ವಿದ್ಯಾರ್ಥಿಗಳ ಬಿಸಿ ಊಟಕ್ಕೆ ಬೆಳೆ, ಸೊಪ್ಪು ತರಕಾರಿ ಅಕ್ಕಿ ಇವುಗಳನ್ನು ಬಳಸಲಾಗುತ್ತಿದ್ದು, ಮಕ್ಕಳಲ್ಲಿ ಅಪೌಷ್ಠಿಕಾಂಶ ನೀಗಿಸಲು ಆಗಿಲ್ಲ ಅನ್ನೋ ಕಾರಣಕ್ಕೆ ಇನ್ನು ಮುಂದೆ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಪಪ್ಪಾಯ ಹಣ್ಣು ಹಾಗೂ ನುಗ್ಗೆಕಾಯಿ ನುಗ್ಗೆ ಸೊಪ್ಪು ಇವುಗಳನ್ನು ಬಳಸಲು ಮುಂದಾಗಿದೆ.

ಅದೇನೇ ಇರಲಿ ಎಲ್ಲ ಶಾಲೆಗಳು ಸ್ವಚ್ಛತೆಯಿಂದ ಉತ್ತಮ ಆಹಾರವನ್ನು ಮಕ್ಕಳಿಗೆ ನೀಡಿ ಅದರ ಜೊತೆಗೆ ಭವಿಷ್ಯದ ಶಿಕ್ಷಣವನ್ನು ನೀಡಲಿ ಇದರ ಸದುಪಯೋಗವನ್ನು ಎಲ್ಲ ಶಾಲೆಯ ಮಕ್ಕಳು ಪಡೆದುಕೊಳ್ಳಲಿ ಅನ್ನೋದೇ ನಮ್ಮ ಆಶಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!