ಜ್ಯೋತಿರ್ಲಿಂಗ ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ವಿಶೇಷತೆ ಏನು ಗೊತ್ತೇ?

0 49

ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೇನಾಥನಾಗಿ ಸರ್ವರ ಮನದಲ್ಲಿ ನೆಲೆಸಿರುವ ಪರಮಾತ್ಮ . ಶಿವ ಅತಿ ಭಕ್ತಿ ಹಾಗೂ ಶ್ರದ್ಧೆ ಗಳಿಂದ ಪೂಜೆಸಲ್ಪಡುವ ಮಹಾದೇವ.ಶಿವನಿಗೆ ಮುಡಿಪಾದ ಅದೇಷ್ಟೋ ಅಸಂಖ್ಯ ದೇವಾಲಯಗಳು ನಮ್ಮ ಭಾರತದ ದೇಶದಲ್ಲಿವೆ.

ಇದೇ ರೀತಿಯ ನಮ್ಮ ಭಾರತದಲ್ಲಿ 12 ಜ್ಯೋತಿರ್ಲಿಂಗಗಳಿದ್ದು, ಜೀವನದಲ್ಲಿ ಒಮ್ಮೆಯಾದರೂ ಈ ಜ್ಯೋತಿರ್ಲಿಂಗ ಗಳ ದರ್ಶನ ಪಡೆದರೆ ಸಕಲ ಪಾಪಗಳಿಂದ ಮುಕ್ತಿ ಹೊಂದಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಅಂತಹ ಶ್ರೇಷ್ಠ ಜ್ಯೋತಿರ್ಲಿಂಗ ಗಳ ಪೈ ಕಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ಯಲ್ಲಿರುವ ಶ್ರೀ ಶೈಲ ಮಲ್ಲಿಕಾರ್ಜುನ ಕ್ಷೇತ್ರವು ಒಂದು.

ಶ್ರೀ ಶೈಲ ವು ಭಕ್ತರ ಹೃದಯದಲ್ಲಿ ಎಂದಿಗೂ ರಾರಾಜಿಸುತ್ತದೆ.ಶ್ರೀ ಶೈಲಕ್ಕೆ ಭೇಟಿಕೊಡುವವರಲ್ಲಿ ಹೆಚ್ಚಿನವರು ನಮ್ಮ ಕರ್ನಾಟಕದವರು.ಇದಕ್ಕೆ 12ನೇ ಶತಮಾನದ ಪ್ರಭಾವ ಕಾರಣ. ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮೇಶ್ವರ, ಮಹಾಶರಣೆ ಮಲ್ಲಮ್ಮ,ಗುಡ್ಡಪುರದ ದಾನಮ್ಮ ಹೀಗೆ ಹಲವು ಶರಣರು ತಮ್ಮ ಆಧ್ಯಾತ್ಮ ಸಾಧನೆಗಾಗಿ ಶ್ರೀ ಶೈಲವನ್ನು ಆರಿಸಿಕೊಂಡಿದ್ದರು. ಇಂತಹ ಶಿವಶರಣರ ಪ್ರಭಾವದಿಂದಾಗಿಯೇ ಕರ್ನಾಟಕದ ಭಕ್ತಾದಿಗಳು ಶ್ರೀ ಶೈಲಕ್ಕೆ ಭೇಟಿ ನಿಡ್ತಾರೇ.

ಪಾರ್ವತಿಯು ಶ್ರೀ ಶೈಲಿಯಲ್ಲಿ ಭ್ರಮರಾಂಭ ದೇವಿಯಾಗಿ ನೆಲೆಸಿದ್ದು ಭಾರತದ 18 ಶಕ್ತಿ ಪೀಠಗಳಲ್ಲಿ ಇದು ಒಂದಾಗಿದೆ.ಶ್ರೀ ಶೈಲದಲ್ಲಿ ಆರಾಧನೆ ಯಾಗುವುದು ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭ ದೇವಿ. ಮಲ್ಲಿಕಾರ್ಜುನ ಎಂಬುದು ಎರಡು ಪದಗಳಿಂದ ಉಂಟಾಗಿದ್ದು, ಮಲ್ಲಿಕಾ ಎಂದರೆ ಪಾರ್ವತಿ ದೇವಿಯ ಹೆಸರಾಗಿದ್ದು, ಅರ್ಜುನ ಎಂದರೆ ಶಿವನ ಹೆಸರು ಒಂದಾಗಿದೆ.

ತಾಯಿ ಪಾರ್ವತಿ ದೇವಿಯು ಅರುಣಾಸುರ ಎಂಬ ರಾಕ್ಷಸನನ್ನು ಭ್ರಮರ ಎಂದರೆ ದುಂಬಿಯಾಗಿ ಬಂದು ಸಂಹಾರ ಮಾಡಿ ಭ್ರಮರಾಂಬಿಕೆ ಯಾಗಿ ನೆಲಸಿದಳು.ಶ್ರೀ ಶೈಲದಲ್ಲಿ ನೆಲಸಿರುವ ಭ್ರಮರಂಭ ದೇವಿ ಮಹಾ ಶಕ್ತಿವಂತೆ. ಸೂಕ್ತ ವಯಸ್ಸಿನಲ್ಲಿ ವಿವಾಹವಾಗದವರು, ಮಕ್ಕಳಿಲ್ಲದವರು , ಅನಾರೋಗ್ಯ ಇರುವವರು ಈ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ.

ಜ್ಯೋತಿರ್ಲಿಂಗಗಳ ರೋಚಕ ಕಥೆಯನ್ನು ನೋಡುವುದಾದರೆ. ಶಿವಪುರಾಣದ ಪ್ರಕಾರ ಬ್ರಹ್ಮದೇವ ಹಾಗೂ ವಿಷ್ಣು ದೇವರ ನಡುವೆ ಯಾರು ಶ್ರೇಷ್ಠರು ಎಂಬುದರ ಕುರಿತು ಪೈಪೋಟಿ ಏರ್ಪಟ್ಟಿತ್ತು.ಈ ಪೈಪೋಟಿ ತೀವ್ರ ಸ್ವರೂಪ ಪಡೆಯುತ್ತಿದಂತೆ ಮಹಾದೇವನು ಮಧ್ಯಪ್ರವೇಶಿಸಿ. ಮೂರು ಲೋಕಗಳನ್ನು ಸೀಳಿ ಪ್ರಖರ ಜ್ಯೋತಿರೇಖೆಯನ್ನು ಸೃಷ್ಟಿಸಿ. ಯಾರು ಮೊದಲು ಈ ರೇಖೆಯತುದಿಯನ್ನು ಕಂಡು ಹಿಡಿಯುತ್ತಾರೆ ಅವರೇ ಶ್ರೇಷ್ಠರು ಎಂಬುದಾಗಿದೆ. ಇದರಂತೆ ಬ್ರಹ್ಮ ದೇವನು ಜ್ಯೋತಿಯ ಮೇಲ್ಭಾಗದಲ್ಲಿ ವಿಷ್ಣು ದೇವನು ಜ್ಯೋತಿಯ ಕೆಳಮುಖವಾಗಿ ತುದಿ ಮುಟ್ಟಲು ಕ್ರಮಿಸ ತೋಡಗುತ್ತಾರೆ. ಇಬ್ಬರು ಎಷ್ಟೇ ದೂರಹೋದರು ಇದರ ಆದಿ ಅಂತ್ಯವನ್ನು ಕಂಡು ಹಿಡಿಯಲು ಆಗುವುದಿಲ್ಲ. ಕೊನೆಗೆ ವಿಷ್ಣು ಸೋಲನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಅಹಂಕಾರ ಮತ್ತನಾದ ಬ್ರಹ್ಮದೇವನು ಸೂಳ್ಳನ್ನು ಹೇಳುತ್ತಾನೆ. ಇದರಿಂದ ಕೋಪಗೊಂಡ ವಿಷ್ಣುವು ಈ ಲೋಕದಲ್ಲಿ ಬ್ರಹ್ಮನಿಗೆ ಯಾರು ಪೂಜಿಸದಿರಲಿ ಎಂದು ಶಾಪ ನೀಡುತ್ತಾನೆ. ಶಿವನು ಸೃಷ್ಟಿ ಸಿದ ಪ್ರಖರ ಜ್ಯೋತಿಯ ಬೆಳಕು ಭೂ ಮಂಡಲದ ಮೇಲೆ ಎಲ್ಲೆಲ್ಲಿ ಬಿದಿತ್ತೋ ಅ ಭಾಗಗಳಲ್ಲಿ ಜ್ಯೋತಿರ್ಲಿಂಗ ಗಳು ಉದ್ಭವವಾಗಿದವು ಎಂದು ಹೇಳಲಾಗಿದೆ. ಹೀಗೆ ಶ್ರೀ ಶೈಲವು ಭಾರತದ ಎರಡನೇ ಜ್ಯೋತಿರ್ಲಿಂಗ ಕ್ಷೇತ್ರವಾಗಿದೆ.

ಪ್ರತಿವರ್ಷ ಯುಗಾದಿ ಸಮಯದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯ ದಲ್ಲಿ ಜಾತ್ರೆ ನಡೆಯುತ್ತದೆ.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನರು ಶ್ರೀ ಶೈಲಕ್ಕೆ ಪಾದಯಾತ್ರೆ ಕೆಗೊಳ್ಳುವುದು ವಿಶೇಷವಾಗಿದೆ.

Leave A Reply

Your email address will not be published.