ನಮ್ಮ ರಾಜ್ಯದಲ್ಲಿ ಸಾವಿರಾರು ಹಿಂದೂ ದೇವಾಲಯಗಳು ಇವೆ ಪ್ರತಿ ದೇವಾಲಯಗಳು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ, ಅದೆ ನಿಟ್ಟಿನಲ್ಲಿ ಈ ಶ್ರೀ ಕಬ್ಬಾಳಮ್ಮ ದೇವಾಲಯ ಕೂಡ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಭಕ್ತರು ತನ್ನ ಇಷ್ಟಾರ್ಥವನ್ನು ಕೇಳಿಕೊಂಡು ಬಂದರೆ ಈ ದೇವಿ ಭಕ್ತರ ಇಷ್ಟಾರ್ಥವನ್ನು ಪೊರೈಸುತ್ತಾಳೆ ಎಂಬುದಾಗಿ ವಿಶೇಷವಾದ ನಂಬಿಕೆ ಇದೆ. ಇನ್ನು ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಇಲ್ಲಿನ ವಿಶೇಷತೆಗಳೇನು ಈ ದೇವಿಯ ಪವಾಡವೇನು ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿಯೋಣ.

ಈ ದೇವಿಯ ಸನ್ನಿದಿಗೆ ಹೋಗಬೇಕು ಅನ್ನೋದಾದರೆ ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು 20 ಕಿಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ, ಇಲ್ಲಿ ನಿತ್ಯ ಸಾವಿರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥವನ್ನು ಪೊರೈಸಿಕೊಳ್ಳುವ ಜೊತೆಗೆ ದೇವಿಯ ದರ್ಶನ ಪಡೆಯುತ್ತಾರೆ ಇನ್ನು ಈ ಕ್ಷೇತ್ರ ಇವತ್ತು ನೆನ್ನೆಯದಲ್ಲ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತ ಕ್ಷೇತ್ರವಾಗಿದೆ.

ಈ ದೇವಿಯ ಸನ್ನಿದಿಯಲ್ಲಿ ಬರುವಂತ ಭಕ್ತರ ನಂಬಿಕೆ ಏನು ಅನ್ನೋದನ್ನ ನೋಡುವುದಾದರೆ ಹಾಗೂ ಈ ದೇವಿಯು ಭಕ್ತರಿಗೆ ಹೆಚ್ಚು ಅತ್ತಿರವಾಗಲು ಕಾರಣವೇನು ಅನ್ನೋದಾದರೆ ಭಕ್ತರ ಇಷ್ಟಾರ್ಥವನ್ನು ಪೂರೈಸುವ ವಿಶೇಷತೆ ಈ ದೇವಿಯಲ್ಲಿದೆ ಅಷ್ಟೇ ಅಲ್ಲದೆ ಶ್ರೀ ಕಬ್ಬಾಳಮ್ಮ ದೇವಿ ಬಲಗಡೆ ಹೂ ನೀಡುವುದರ ಮೂಲಕ ಸೂಚನೆ ನೀಡಿದರೆ ಕೆಲಸ ಖಂಡಿತವಾಗಿಯೂ ನೆಡದೆ ತಿರುತ್ತದೆ.

ಇನ್ನು ಶ್ರೀ ಕಬ್ಬಾಳಮ್ಮ ದೇವಿಯ ಪವಾಡವೇನು ಅನ್ನೋದನ್ನ ನೋಡುವುದಾದರೆ ಹಿಂದಿನ ಕಾಲದಲ್ಲಿ ಇಲ್ಲಿ ರಾಜರು ಹಾಗೂ ಬ್ರಿಟಿಷರು ಆಳ್ವಿಕೆ ಇದ್ದಾಗ ಈ ಬೆಟ್ಟ ಶಿಕ್ಷೆ ವಿಧಿಸುವ ತಾಣವಾಗಿತ್ತಂತೆ, ತಪಿತಸ್ಥರನ್ನು ಈ ಬೆಟ್ಟದ ಮೇಲಿಂದ ತಳ್ಳಿ ಸಾಯಿಸುವಂತ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತಂತೆ ಅ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಸಾಯಿಸಲೆಂದು ಕೆರೆದುಕೊಂಡು ಬಂದಾಗ ಆ ವ್ಯಕ್ತಿ ಉಳಿಸೆಂದು ತಾಯಿ ಕಬ್ಬಾಳಮ್ಮನಿಗೆ ಭಕ್ತಿಯಿಂದ ಕೋರಿಕೊಂಡನಂತೆ, ನಂತರ ಆತನನ್ನು ಬೆಟ್ಟದ ಮೇಲಿನದ ತಳ್ಳಿದರೂ ಸಹ ಈ ತಾಯಿಯಲ್ಲಿನ ಶಕ್ತಿಯಿಂದ ಬದುಕುಳಿಯುತ್ತಾನೆ.

ಆ ಕಷ್ಟದ ಸಮಯದಲ್ಲಿ ಬೆಟ್ಟದಿಂದ ಬಿದ್ದು ಬದುಕುಳಿದ ವ್ಯಕ್ತಿ ಈ ಕಬ್ಬಾಳಮ್ಮ ದೇವಿಗೆ ಚಿನ್ನದ ಕಿರೀಟವನ್ನುಮತ್ತು ಚಿನ್ನದ ಹಾರವನ್ನು ನೀಡಿದ, ಹಾಗೆ ನೀಡಿದ ಚಿನ್ನದ ಕಿರೀಟವೇ ಇದೀಗ ಶಿವ ರಾತ್ರಿಯ ದಿನದಂದು ನೆಡೆಯುವ ಜಾತ್ರೆಯಲ್ಲಿ ಧರಿಸುವ ಈ ಕಿರೀಟವಾಗಿದೆ ಅನ್ನೋದನ್ನ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇನ್ನೊಂದು ವಿಶೇಷತೆ ಏನು ಅನ್ನೋದಾದರೆ ನಂದಿಯೊಂದು ಕೆಲ ವರ್ಷಗಳಿಂದ ವಾಸವಾಗಿದೆ ದೇವಿಯ ಕೃಪಾ ಕಟಾಕ್ಷ ಅದಕ್ಕಿದ್ದು, ಯಾರಾದರೂ ತಮ್ಮ ಇಷ್ಟಾರ್ಥ ಹರಕೆಯ ರೂಪದಲ್ಲಿ ಕೇಳಿಕೊಳ್ಳುವರಿದ್ದರೆ ಅವರು ನೆಲದ ಮೇಲೆ ಮಲಗಬೇಕು. ಆ ನಂದಿಯು ನಿಧಾನವಾಗಿ ಅವರ ಮೇಲೆ ನಡೆದುಕೊಂಡು ಹೋಗುತ್ತದೆ. ಹೀಗೆ ಮಾಡುವುದರಿಂದ ತಮ್ಮ ಬೇಡಿಕೆಗಳನ್ನು ನಿವೇದಿಸಿಕೊಂಡ ಭಕ್ತರ ಇಷ್ಟಾರ್ಥಗಳು ಬಹು ಬೇಗನೆ ಸಿದ್ಧಿಸುತ್ತದೆ ಹೀಗಾಗಿ ಕಾಣಿಕೆಯ ರೂಪದಲ್ಲಿ ಬಸವನ ಕೋಡುಗಳಲ್ಲಿ ಭಕ್ತರು ಹಣದ ನೋಟುಗಳನ್ನು ಸಿಕ್ಕಿಸಿರುವುದನ್ನು ಕಾಣಬಹುದು.

ಇನ್ನು ಈ ದೇವಿಗೆ ಹೊದಿಸಿದ ಸೀರೆಯನ್ನು ಭಕ್ತರಿಗೆ ಕೊಡುವ ವಾಡಿಕೆ ಇದೆ, ಅಂತಹ ಸೀರೆಯನ್ನು ಕೊಂಡೊಯ್ದು ಮನೆಯಲ್ಲಿ ಪೂಜಿಸಿ ಒಳಿತನ್ನು ಕಂಡಂತಹ ಹಾಗೂ ಕಾಣುತ್ತಿರುವಂತಹ ಜೀವಂತ ಸಾಕ್ಷಿಗಳಿವೆ ಅನ್ನೋದನ್ನ ಹೇಳಲಾಗುತ್ತದೆ ಒಟ್ಟಾರೆಯಾಗಿ ತನ್ನದೆಯಾದ ವಿಶೇಷತೆ ಹಾಗೂ ಅಪಾರ ಭಕ್ತ ಗಣವನ್ನು ಹೊಂದಿರುವಂತ ಶ್ರೀ ಕಬ್ಬಾಳಮ್ಮ ದೇವಿಯು ಭಕ್ತರ ನೆಚ್ಚಿನ ದೇವತೆಯಾಗಿರುವಳು

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!